200 ಕೋಟಿ ವಂಚಕನ ಜೊತೆ 'ವಿಕ್ರಾಂತ್ ರೋಣ' ನಟಿ ಜಾಕ್ವೆಲೀನ್ ಫರ್ನಾಂಡೀಸ್ ಮುತ್ತಿನಾಟ

ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಆದರೆ, ಕಳೆದ ಕೆಲವು ದಿನಗಳಿಂದ ಜಾಕ್ವೆಲಿನ್ ವಿವಾದಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವುದಕ್ಕೆ ಪುರಾವೆ ಸಿಕ್ಕಿದೆ.

ಜಾಕ್ವೆಲಿನ್ ಫರ್ನಾಂಡೀಸ್ ಕೇವಲ ಬಾಲಿವುಡ್‌ಗಷ್ಟೇ ಅಲ್ಲ. ಈಗ ಕನ್ನಡಿಗರಿಗೂ ಚಿರಪರಿಚಿತ. ಕಿಚ್ಚ ಸುದೀಪ್ ನಟಿಸುತ್ತಿರುವ ಬಹು ನಿರೀಕ್ಷಿಸಿತ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಒಂದು ಹಾಡಿಗಾಗಿ ಕರ್ನಾಟಕಕ್ಕೆ ಬಂದಿದ್ದ ಈ ನಟಿ ಕನ್ನಡದಲ್ಲಿ ಕೆಲ ಶಬ್ದಗಳನ್ನು ಮಾತನಾಡಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ಇದೇ ನಟಿ ಈಗ ವಿವಾದಕ್ಕೆ ಸಿಲುಕಿದ್ದು 200 ಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಈಕೆಗೆ ಮುತ್ತಿಟ್ಟ ಫೋಟೊವೊಂದು ವೈರಲ್ ಆಗುತ್ತಿದೆ.

200 ಕೋಟಿ ವಂಚಕನ ಬಲೆ ಬಿದ್ದ ಜಾಕ್ವೆಲಿನ್?

200 ಕೋಟಿ ವಂಚಕನ ಬಲೆ ಬಿದ್ದ ಜಾಕ್ವೆಲಿನ್?

'ವಿಕ್ರಾಂತ್ ರೋಣ' ಸಿನಿಮಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ವಂಚಕ ಸುಕೇಶ್ ಚಂದ್ರಶೇಖರ್ ಮುತ್ತಿಡುತ್ತಿರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಸುಕೇಶ್ ಚಂದ್ರಶೇಖರ್ ತನ್ನ ಐಫೋನ್‌ನಿಂದ ನಟಿ ಜಾಕ್ವೆಲಿನ್ ಕೆನ್ನೆಗೆ ಮುತ್ತಿಕ್ಕಿದ್ದಾನೆ. ಈ ಫೋಟೊ ಬಗ್ಗೆನೇ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಶ್ರೀಲಂಕಾದ ಸುಂದರಿಯನ್ನು 200 ಕೋಟಿ ವಂಚಕ ತನ್ನ ಪ್ರೀತಿಯ ಬಲೆಗೆ ಬೀಳಿಸಿದ್ದ ಎಂಬ ಸುದ್ದಿ ಹರಿದಾಡುತ್ತಿದೆ.

ಜಾಕ್‌ಲಿನ್ ಜೊತೆ ಸುಕೇಶ್ ಡೇಟಿಂಗ್?

ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಆರೋಪದಡಿ ಸುಕೇಶ್ ಚಂದ್ರಶೇಖರ್ ಜೈಲು ಸೇರಿದ್ದಾನೆ. ಈತನ ವಂಚನೆ ಪ್ರಕರಣವನ್ನು ತನಿಖೆ ಮಾಡುವಾಗ ಜಾಕ್ವೆಲಿನ್ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಆಗ ಜಾಕ್ವೆಲಿನ್ ಹಾಗೂ ಸುಕೇಶ್ ಚಂದ್ರಶೇಖರ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಹಾರಿದಾಡಿತ್ತು. ಆಗ ಜಾಕ್ವೆಲಿನ್ ಈ ಸುದ್ದಿಯನ್ನು ಸರಾಸಗಟಾಗಿ ನಿರಾಕರಿಸಿದ್ದರು.

ವಂಚಕನ ಪ್ರೀತಿಯ ಬಲೆಗೆ ಜಾಕ್ವೆಲಿನ್ ಬಿದ್ದಿದ್ದೇಗೆ?

ವಂಚಕನ ಪ್ರೀತಿಯ ಬಲೆಗೆ ಜಾಕ್ವೆಲಿನ್ ಬಿದ್ದಿದ್ದೇಗೆ?

ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಏಪ್ರಿಲ್-ಜೂನ್‌ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ. ಈ ವೇಳೆ ಜಾಕ್ವಲಿನ್‌ಗೆ ಮುತ್ತಿಟ್ಟು ಕನ್ನಡಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಅಲ್ಲದೆ ಸುಕೇಶ್ ಚಂದ್ರಶೇಖರ್ ಚೆನ್ನೈನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ರನ್ನು ಸುಮಾರು ನಾಲ್ಕು ಬಾರಿ ಭೇಟಿಯಾಗಿದ್ದಾನೆಂದು ಇಡಿ (ಜಾರಿ ನಿರ್ದೇಶನಾಲಯ) ಮೂಲಗಳು ನ್ಯೂಸ್ ವೆಬ್‌ಸೈಟ್ ಒಂದಕ್ಕೆ ತಿಳಿಸಿವೆ. ಆರೋಪಿ ಜೈಲಿನೊಳಗಿದ್ದುಕೊಂಡೇ ಜಾಕ್ವೆಲಿನ್‍ಗೆ ಪೋನ್ ಮೂಲಕ ಮಾತಾಡುತ್ತಿದ್ದ. ತಾನು ದೊಡ್ಡ ವ್ಯಕ್ತಿಯೆಂದು ನಂಬಿಸಿದ್ದ. ಜೈಲಿನೊಳಗೆ ಇದ್ದುಕೊಂಡೇ ಐಷಾರಾಮಿ ಉಡುಗೊರೆಗಳನ್ನು ವಿಕ್ರಾಂತ್ ರೋಣ ನಟಿಗೆ ಕಳುಹಿಸಿಕೊಡುತ್ತಿದ್ದ ಎನ್ನಲಾಗಿದೆ. ಸುಕೇಶ್ ಮಾತಿಗೆ ಜಾಕ್ವೆಲಿನ್‍ ಕೂಡ ಮರುಳಾಗಿದ್ದರು ಎನ್ನುತ್ತಿವೆ ಮೂಲಗಳು.

200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು

200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು

ಕಳೆದ ತಿಂಗಳು ಇಡಿ ಜಾಕ್ವೆಲಿನ್‌ಗೆ 200 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಸುಖೇಶ್ ಚಂದ್ರಶೇಖರ್ ಹಾಗೂ ಆತನ ಪತ್ನಿ ನಟಿ ಲೀನಾ ಮರಿಯಾ ಪೌಲ್ ಉದ್ಯಮಿಯಿಂದ 200 ಕೋಟಿ ಲೂಟಿ ಮಾಡಿದ ಪ್ರಕರಣವನ್ನು ಎದುರಿಸುತ್ತಿದ್ದರೆ. ಇದರ ತನಿಖೆ ವೇಳೆ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಸುಕೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಹಾಗೂ ಸುಕೇಶ್ ನಡುವೆ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆದಿದೆಯೇ ಎಂದು ತನಿಖೆ ನಡೆಸುತ್ತಿದೆ.

More from Filmibeat

English summary
The photo shows conman Sukesh Chandrasekhar kissing the Jacqueline Fernandez on her cheek. This photo shows that both are dating.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X