"ಒಂದಾನೊಂದು ಕಾಲದಲ್ಲಿ.." ಅಂತಲೇ ಬೋಲ್ಡ್ ಫೋಟೊ ಶೇರ್ ಮಾಡಿದ ದೀಪಿಕಾ: ಪತಿ ರಣ್‌ವೀರ್‌ಗೇ ಶಾಕ್!

ಬಾಲಿವುಡ್ ದೀಪಿಕಾ ಪಡುಕೋಣೆ ಸಿನಿಮಾನೂ ಹೊಸದಲ್ಲ. ಸೋಶಿಯಲ್ ಮೀಡಿಯಾನೂ ಹೊಸದಲ್ಲ. ಹಾಗೇ ಕ್ಯಾಮರಾ ಮುಂದೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಕೂಡ ಹೊಸದೇನಲ್ಲ. ಆಗಾಗ ಹಾಟ್ ಅವತಾರಗಳನ್ನು ನೀಡುತ್ತಾ ತನ್ನ ಅಭಿಮಾನಿಗಳಿಗೆ ಶಾಕ್ ಕೊಡುತ್ತಲೇ ಇರುತ್ತಾರೆ.

ಈಗಲೂ ಅಷ್ಟೇ ಇನ್‌ಸ್ಟಾಗ್ರಾಂನಲ್ಲಿ ದಿಢೀರನೇ ಬೋಲ್ಡ್ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ. ಆ ಫೋಟೊ ನೋಡಿ ಅದೆಷ್ಟೊ ಮಂದಿ ಕಳೆದೇ ಹೋಗಿದ್ದಾರೆ. ಅದರಲ್ಲಿ ಪತಿ ರಣ್‌ವೀರ್ ಸಿಂಗ್ ಕೂಡ ಇಬ್ಬರು. ದೀಪಿಕಾ ಫೋಟೊ ನೋಡಿ ಪತಿ ರಣ್‌ವೀರ್ ಸಿಂಗ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.

Viral:Deepika Padukone Shares glamours photos husband Ranveer Singh got Shock

ರಣ್‌ವೀರ್‌ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‌ನ ಬೋಲ್ಡ್ ಕಪಲ್. ದೀಪಿಕಾ ಬಿಕಿನಿ,ಡಿಸೈನರ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ರೆ, ಇತ್ತ ರಣ್‌ವೀರ್ ಸಿಂಗ್ ಕೂಡ ಚಿತ್ರ-ವಿಚಿತ್ರ ಕಾಸ್ಟ್ಯೂಮ್‌ನಲ್ಲಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದೂ ಇದೆ. ಈ ನಟನೇ ದೀಪಿಕಾ ಬೋಲ್ಡ್ ಫೋಟೊಗೆ ಕಂಗಾಗಿದ್ದಾರೆ.

ದೀಪಿಕಾ ಬೋಲ್ಡ್ ಫೋಟೊಗೆ ನೆಟ್ಟಿಗರು ಫಿದಾ

ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುತ್ತಾರೆ. ಇಂದು (ಜುಲೈ 31) ದೀಪಿಕಾ ಸೆಮಿ ಬಿಕಿನಿ ಫೋಟೊ ಒಂದನ್ನು ಶೇರ್ ಮಾಡಿಕೊಂಡಿದ್ದರು. ಕಪ್ಪು ಬಿಳುಪು ಚಿತ್ತಾರದ ಬಿಕಿನಿ ಧರಿಸಿದ ಫೋಟೊವನ್ನು ಶೇರ್ ಮಾಡಿದ್ದರು. ಅದನ್ನು ನೋಡಿ ದೀಪಿಕಾ ಪಡುಕೋಣೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನೊಂದು ಕಡೆ ನೆಟ್ಟಿಗರು ಕೂಡ ಕಮೆಂಟ್ ನೆಗೆಟಿವ್ ಆಗಿ ಕಮೆಂಟ್ ಮಾಡುತ್ತಲೇ ಇದ್ದಾರೆ.

ದೀಪಿಕಾ ಫೋಟೊ ನೋಡಿ ಪತಿಯೇ ಶಾಕ್

ಎಲ್ಲಕ್ಕಿಂತ ಹೆಚ್ಚಾಗಿ ದೀಪಿಕಾ ಪಡುಕೋಣೆ ಬೋಲ್ಡ್ ಫೋಟೊವನ್ನು ಪತಿ ರಣ್‌ವೀರ್ ಸಿಂಗ್ ಮಾಡಿ ಕಮೆಂಟ್ ಕ್ರೇಜಿಯಾಗಿದೆ. ನೆಟ್ಟಿಗರು ಈ ಕಮೆಂಟ್ ಅನ್ನೂ ಸೇರಿಸಿಕೊಂಡು ಕಮೆಂಟ್ ಮಾಡುತ್ತಿದ್ದಾರೆ. ದೀಪಿಕಾ ಫೋಟೊಗೆ ರಣ್‌ವೀರ್ ಸಿಂಗ್ " ವಾರ್ನಿಂಗ್ ಕೊಟ್ಟಿದ್ದರೆ ತುಂಬಾನೇ ಚೆನ್ನಾಗಿರುತ್ತಿತ್ತು" ಎಂದು ಕಮೆಂಟ್ ಮಾಡಿದ್ದಾರೆ. ಅತ್ತ ದೀಪಿಕಾ ಫೋಟೊಗೆ ಇನ್ನೊಂದು ಕಡೆ ರಣ್‌ವೀರ್ ಸಿಂಗ್ ಕಮೆಂಟ್‌ಗೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.


ನಾಲ್ಕು ಗಂಟೆಗಳಲ್ಲೇ ನೋಡಿದವರೆಷ್ಟು ಮಂದಿ?

ದೀಪಿಕಾ ಪಡುಕೋಣೆಗೆ ಅಭಿಮಾನಿಗಳೇನು ಕಮ್ಮಿಯಿಲ್ಲ ಅನ್ನೋದನ್ನು ಈ ಫೋಟೊ ನೋಡಿದರನೇ ಗೊತ್ತಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಸಿಕ್ಕಾಪಟ್ಟರೆ ವೈರಲ್​ ಆಗಿದೆ. ಕೇವಲ ನಾಲ್ಕು ಗಂಟೆಯೊಳಗೆ ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ಈ ಫೋಟೊವನ್ನು ಇಷ್ಟಪಟ್ಟಿದ್ದಾರೆ. ದೀಪಿಕಾ ಕಪ್ಪು ಬಿಳುಪು ಬಿಕಿನಿಯನ್ನಷ್ಟೇ ಅಲ್ಲ. ಆಕೆಯ ಸ್ಲಿಮ್ ದೇಹವನ್ನೂ ಇಷ್ಟಪಡುತ್ತಿದ್ದಾರೆ.

'ಪಠಾಣ್' ಬಳಿಕ ಫುಲ್ ಫಿದಾ!

'ಪಠಾಣ್' ಸಿನಿಮಾ ಬಳಿಕ ದೀಪಿಕಾ ಪಡುಕೋಣೆ ಮತ್ತೆ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಅಭಿನಯದ 'ಜವಾನ್' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಹೃತಿಕ್ ರೋಷನ್ ಜೊತೆ ಇದೇ ಮೊದಲ ಬಾರಿಗೆ ನಟಿಸುತ್ತಿದ್ದು, 'ಫೈಟರ್' ಶೂಟಿಂಗ್ ಜಾರಿಯಲ್ಲಿದೆ. ಹಾಗೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ರಭಾಸ್ ಸಿನಿಮಾ 'ಕಲ್ಕಿ'ಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂರು ಸಿನಿಮಾಗಳ ಮೇಲೂ ಸಿಕ್ಕಾಪಟ್ಟೆ ಕ್ರೇಜ್ ಇದೆ.

More from Filmibeat

English summary
Viral:Deepika Padukone Shares glamours photos husband Ranveer Singh got Shock
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X