ಹಿಂದಿನ ಸಾಲಲ್ಲಿ ನಿಂತಿದ್ದ ಪ್ರಿಯಾಮಣಿ: ಅಟ್ಲೀಗೆ ಶಾರುಖ್ ಮಾಡಿದ್ದ ತಾಕೀತು ಏನು? ಏನದು ಘಟನೆ?
ಅಟ್ಲೀ ಹಾಗೂ ಶಾರುಖ್ ಕಾಂಬಿನೇಷನ್ ಸಿನಿಮಾ 'ಜವಾನ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕಳೆದ ನಾಲ್ಕು ದಿನಗಳು ಬಾಕ್ಸಾಫೀಸ್ ಅನ್ನೇ ಲೂಟಿ ಮಾಡಿದೆ. 'ಪಠಾಣ್' ಬಳಿಕ ಶಾರುಖ್ ಖಾನ್ ಮತ್ತೆ ಟ್ರ್ಯಾಕ್‌ಗೆ ಮರಳಿದ್ದು, 'ಜವಾನ್' ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ.
'ಜವಾನ್' ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಶಾರುಖ್ ಖಾನ್ ಜೊತೆ ನಯನತಾರಾ, ಪ್ರಿಯಾಮಣಿ, ವಿಜಯ್ ಸೇತುಪತಿ, ಸಾನ್ಯ ಮಲ್ಹೋತ್ರಾ, ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಹಾಗೇ ಅಟ್ಲೀ ಕೂಡ ಸಿನಿಮಾವನ್ನೇ ಅಷ್ಟೇ ಗ್ರ್ಯಾಂಡ್ ಆಗಿ ಶೂಟ್ ಮಾಡಿದ್ದಾರೆ.

ಶಾರುಖ್ ಸಿನಿಮಾ 'ಜವಾನ್' ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ ಕಳೆದ ನಾಲ್ಕು ದಿನಗಳಿಂದ 530 ಕೋಟಿ ರೂ. ಬಾಚಿಕೊಂಡಿದೆ. ಬಾಲಿವುಡ್ ಚಿತ್ರರಂಗ ಇಂತಹದ್ದೊಂದು ಸಾಧನೆ ಮಾಡಿದ್ದು ಇದೇ ಮೊದಲು. ಈ ಸಿನಿಮಾದ ಚಿತ್ರೀಕರಣದ ವೇಳೆ ಒಂದು ಘಟನೆ ನಡೆದಿತ್ತು. ಅದನ್ನು ಪ್ರಿಯಾಮಣಿ ಸಿನಿಮಾ ಗೆದ್ದ ಖುಷಿಯಲ್ಲಿ ಪ್ರಿಯಾಮಣಿ ನೆನಪಿಸಿಕೊಂಡಿದ್ದಾರೆ.
ಆಕ್ಷನ್ ಸೀನ್‌ನಲ್ಲಿ ಪ್ರಿಯಾಮಣಿ
ನಯನತಾರಾ ಈ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರೂ, ಸಾಕಷ್ಟು ಫೀಮೇಲ್ ಪಾತ್ರಗಳು ಇವೆ. ಅದರಲ್ಲಿ ಪ್ರಿಯಾಮಣಿ ಪಾತ್ರ ಕೂಡ ಒಂದು. ಶಾರುಖ್ ಖಾನ್ ಜೊತೆ ಈ ಸಿನಿಮಾದಲ್ಲಿ ಪ್ರಿಯಾಮಣಿ ಕೂಡ ಆಕ್ಷನ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ರೇಕ್ಷಕರ ಗಮನವನ್ನು ಸೆಳೆದಿದೆ. ಪ್ರಮುಖ ಪಾತ್ರ ಅಲ್ಲದೇ ಹೋದರೂ, ಶಾರುಖ್ ಖಾನ್ ಜೊತೆ ಹಲವು ಸನ್ನಿವೇಶಗಳಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ.

ಸಾಂಗ್ ಶೂಟ್ ವೇಳೆ ನಡೆದ ಘಟನೆ ಏನು?
ಪ್ರಿಯಾಮಣಿ 'ಜವಾನ್' ಸಿನಿಮಾದ ಸಾಂಗ್ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆ ಘಟನೆಯನ್ನು ಗಮನಿಸಿದ ಶಾರುಖ್ ಖಾನ್ ಹಿಂದೆ ಮುಂದೆ ಯೋಚಿಸದೆ ಪ್ರಿಯಾಮಣಿ ಪರವಾಗಿ ನಿಂತಿದ್ದರು. ಆ ಘಟನೆಯನ್ನು ಸಂದರ್ಶನವೊಂದರಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಸಾಂಗ್ ಶೂಟಿಂಗ್ ವೇಳೆ ನಡೆದ ಘಟನೆ ಏನು ಅಂತ ತಿಳಿಯಲು ಮುಂದೆ ಓದಿ.
ಏನಿದ ಘಟನೆ?
'ಜವಾನ್' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಮಹಿಳೆಯರದ್ದೇ ಒಂದು ಗುಂಪು ಇರುತ್ತೆ. ಇವರನ್ನು ಇಟ್ಟುಕೊಂಡು ಒಂದು ಹಾಡನ್ನು ಕೂಡ ಇದೆ. ಈ ವೇಳೆ ಕೊರಿಯೋಗ್ರಾಫರ್ ಪ್ರಿಯಾಮಣಿಯನ್ನು ಹಿಂದಿನ ಸಾಲಿನಲ್ಲಿ ನಿಲ್ಲಿಸಿದ್ದರು. ಇದನ್ನು ಗಮನಿಸಿದ ಶಾರುಖ್ ಖಾನ್ "ಹಿಂದೆ ನಿಂತು ಏನು ಮಾಡುತ್ತಿದ್ದೀರಾ?" ಎಂದು ಪ್ರಶ್ನೆ ಮಾಡಿದ್ದರು. ಆಗ ಪ್ರಿಯಾಮಣಿ "ನನಗೆ ಗೊತ್ತಿಲ್ಲ ಸರ್" ಎಂದು ಹೇಳಿದ್ದರು. ಆಗ ಶಾರುಖ್ ಪ್ರಿಯಾಮಣಿ "ನನಗೆ ಪಕ್ಕದಲ್ಲಿಯೇ ನಿಲ್ಲಬೇಕು. ಸ್ಟೆಪ್ಸ್ ಅದ್ಯಾವುದೇ ಇರಲಿ" ಎಂದು ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ಅಟ್ಲೀಗೆ ತಾಕೀತು ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications