ಅಬುಧಾಬಿಯಲ್ಲಿ ವಿಕ್ಕಿ ಕೌಶಲ್‌ರನ್ನೇ ತಳ್ಳಿದ ಸಲ್ಮಾನ್ ಖಾನ್ ಅಂಗರಕ್ಷಕರು: ಕತ್ರಿನಾ ಪತಿಗೆ ಇದೆಂಥಾ ಅವಮಾನ?

ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ ಕಳೆದ ಕೆಲವು ದಿನಗಳಿಂದ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ. ಈ ಬೆನ್ನಲ್ಲೇ ಸಲ್ಮಾನ್ ಖಾನ್ ತಮ್ಮ ರಕ್ಷಣೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹೀಗಿದ್ದರೂ, ಸಲ್ಮನ್ ಖಾನ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವುದನ್ನು ನಿಲ್ಲಿಸಿಲ್ಲ.

ಸದ್ಯ ಸಲ್ಮಾನ್ ಖಾನ್ ಐಫಾ ಪ್ರಶಸ್ತಿ ಸಮಾರಂಭಕ್ಕಾಗಿ ಅಬುಧಾಬಿಗೆ ತೆರಳಿದ್ದಾರೆ. ಅಲ್ಲಿ ಪತ್ರಿಕಾಗೋಷ್ಠಿಯಲ್ಲೂ ಭಾಗಿಯಾಗಿದ್ದಾರೆ. ಈ ವೇಳೆ ಒಂದು ಎಡವಟ್ಟು ನಡೆದು ಹೋಗಿದೆ. ಅದನ್ನು ನೆಟ್ಟಿಗರು ತೀವ್ರವಾಗಿ ಖಂಡಿಸುತ್ತಿದ್ದಾರೆ.

Viral Video: Salman Khans security pushed Vicky Kaushal At an IIFA event netizens feel bad

ಅಬುಧಾಬಿಯಲ್ಲಿ ಸಲ್ಮಾನ್ ಖಾನ್ ಹಾಗೂ ಅವರ ಅಂಗರಕ್ಷಕರು ಬಾಲಿವುಡ್‌ ನಟ ವಿಕ್ಕಿ ಕೌಶಲ್‌ಗೆ ತಳ್ಳಿದ್ದಾರೆ. ಇದು ಒಬ್ಬ ನಟನಿಗೆ ಮಾಡಿದ ಅವಮಾನ ಅಂತ ನೆಟ್ಟಿಗರು ಸಲ್ಮಾನ್ ಖಾನ್ ವಿರುದ್ಧ ಗರಂ ಆಗಿದ್ದಾರೆ. ಅಷ್ಟಕ್ಕೂ ಕತ್ರಿನಾ ಕೈಫ್ ಪತಿಗೆ ಸಲ್ಮಾನ್ ಖಾನ್ ಮಾಡಿದ್ರಾ? ಬೆಳಗ್ಗೆ ಹೀರೊ ಆಗಿದ್ದವರು ಸಂಜೆ ವೇಳೆಗೆ ವಿಲನ್ ಆಗಿದ್ದು ಹೇಗೆ?

ಮುಂಬೈ ಏರ್‌ಪೋರ್ಟ್‌ನಲ್ಲಿ ಸಲ್ಮಾನ್ ಹೀರೊ

ಐಫಾ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಸಲ್ಮಾನ್ ಖಾನ್ ಮುಂಬೈ ಏರ್‌ಪೋರ್ಟ್‌ನಲ್ಲಿ ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಸಲ್ಮಾನ್ ಪುಟ್ಟ ಅಭಿಮಾನಿಯೊಬ್ಬ ಭೇಟಿ ಮಾಡಲು ಓಡೋಡಿ ಬಂದ. ಇದನ್ನು ನೋಡುತ್ತಿದ್ದಂತೆ ಸಲ್ಮಾನ್ ಖಾನ್ ತನ್ನ ಬಾಡಿಗಾರ್ಡ್‌ಗಳನ್ನೇ ಪಕ್ಕಕ್ಕೆ ತಳ್ಳಿ ಭೇಟಿ ಮಾಡಿದ್ದರು.

ಪುಟ್ಟ ಬಾಲಕ ಸಲ್ಮಾನ್ ಖಾನ್ ಅನ್ನು ಅಪ್ಪಿಕೊಂಡು ಥ್ರಿಲ್ ಆಗಿದ್ದ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಲ್ಮಾನ್ ಖಾನ್ ಈ ಗುಣವನ್ನು ಮೆಚ್ಚಿಕೊಂಡ ನೆಟ್ಟಿಗರು ಹೊಗಳಿ ಅಟ್ಟಕ್ಕೇರಿದ್ದರು. ಬೆಳಗ್ಗೆ ಹೀರೊ ಆಗಿದ್ದ ಸಲ್ಲು ಅಬುಧಾಬಿ ತಲುಪುತ್ತಿದ್ದಂತೆ ವಿಲನ್ ಆಗಿದ್ದಾರೆ. ಅಂತಹದ್ದೇನಾಯ್ತು ಅಂತ ತಿಳಿಯಲು ಮುಂದೆ ಓದಿ.

ವಿಕ್ಕಿ ಕೌಶಲ್ ತಳ್ಳಿದ ಸಲ್ಮಾನ್ ಖಾನ್ ಅಂಗರಕ್ಷಕರು

ಐಫಾದ ಸಮಾರಂಭದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಸಲ್ಮಾನ್ ಖಾನ್ ತನ್ನ ಬಾಡಿಗಾರ್ಡ್ ಜೊತೆ ಆಗಮಿಸುತ್ತಿದ್ದರು. ಇದೇ ವೇಳೆ ಅಲ್ಲೇ ತನ್ನ ಅಭಿಮಾನಿಯೊಂದಿಗೆ ವಿಕ್ಕಿ ಕೌಶಲ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಸಲ್ಮಾನ್ ಖಾನ್ ಬರುತ್ತಿದ್ದಂತೆ ಅವರನ್ನು ಭೇಟಿ ಮಾಡುವುದಕ್ಕೆ ಮುಂದಾಗಿದ್ದರು.

ಸಲ್ಮಾನ್ ಖಾನ್ ಕೂಡ ವಿಕ್ಕಿ ಕೌಶಲ್ ಮಾತಾಡಿಸಲು ಮುಂದೆ ಬಂದಿದ್ದನ್ನು ಗಮನಿಸಿದ್ದರು. ವಿಕ್ಕಿ, ಸಲ್ಮಾನ್ ಖಾನ್‌ಗೆ ಶೇಕ್ ಹ್ಯಾಂಡ್ ಮಾಡುವುದಕ್ಕೆ ಕೈ ಚಾಚಿದ್ದರೂ ಸಲ್ಮಾನ್ ಕೈ ಕೊಡಲಿಲ್ಲ. ಇದೇ ವೇಳೆ ಅವರ ಅಂಗರಕ್ಷಕರು ವಿಕ್ಕಿ ಕೌಶಲ್ ಅನ್ನು ತಳ್ಳಿ ಮುಂದೆ ಸಾಗಿದರು. ಇದೇ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಸಲ್ಮಾನ್ ವಿರುದ್ಧ ಕಿಡಿಕಾರಿದ್ದಾರೆ.


ಕತ್ರಿನಾ ಕೈಫ್ ಪತಿಗೆ ಇದೆಂಥಾ ಅವಮಾನ?

ವಿಕ್ಕಿ ಕೌಶಲ್‌ ಅನ್ನು ತಳ್ಳುತ್ತಿರುವ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ವಿಕ್ಕಿ ಕೌಶಲ್‌ಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ವಿವಾಹಕ್ಕೂ ಮುನ್ನ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಸ್ನೇಹಿತರಾಗಿದ್ದರು. ಕೆಲವೊಮ್ಮೆ ಇಬ್ಬರ ಅಫೇರ್ ನಡೆಯುತ್ತಿದೆ ಎಂಬ ಸುದ್ದಿನೂ ಹರಿದಾಡಿದ್ದವು. ಆದರೆ, ಕತ್ರಿನಾ 'ಉರಿ' ನಟ ವಿಕ್ಕಿ ಕೌಶಲ್‌ ಮದುವೆ ಆಗಲು ನಿರ್ಧರಿಸಿದ್ದರು. ರಾಜಸ್ಥಾನದಲ್ಲಿ ನಡೆದ ಅದ್ಧೂರಿ ವಿವಾಹಕ್ಕೆ ಸಲ್ಮಾನ್ ಖಾನ್ ಗೈರು ಹಾಜರಾಗಿದ್ದರು.

More from Filmibeat

English summary
Salman Khan's security pushed Vicky Kaushal At an IIFA event netizens feel bad, video goes viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X