twitter
    For Quick Alerts
    ALLOW NOTIFICATIONS  
    For Daily Alerts

    ಇಟಲಿಯಿಂದ ಹಾರಿಬಂದಿದೆ ವಿರಾಟ್- ಅನುಷ್ಕಾ ಮದುವೆ ಸುದ್ದಿ

    |

    ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿಯಿದೆ.

    ವಿರಾಟ್ ವೆಡ್ಸ್ ಅನುಷ್ಕಾ : ವೈಯಕ್ತಿಕ ಜೀವನದ ಹೊಸ ಇನ್ನಿಂಗ್ಸ್ ಶುರು ಮಾಡಿದ ಕೊಹ್ಲಿವಿರಾಟ್ ವೆಡ್ಸ್ ಅನುಷ್ಕಾ : ವೈಯಕ್ತಿಕ ಜೀವನದ ಹೊಸ ಇನ್ನಿಂಗ್ಸ್ ಶುರು ಮಾಡಿದ ಕೊಹ್ಲಿ

    ಕಳೆದ ವಾರ ವಿರಾಟ್ ಕೊಹ್ಲಿ ಹಾಗೂ ನಟಿ ದೇಶ ಬಿಟ್ಟು ತೆರಳಿದ್ದರು. ಆ ಸಂದರ್ಭದಲ್ಲೇ ಹಲವರಿಗೆ ಗುಮಾನಿ ಇತ್ತು. ಕಳೆದ ವಾರಾಂತ್ಯಕ್ಕೆ ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ವಿರಾಟ್- ಅನುಷ್ಕಾ ಸೋಮವಾರ ಬೆಳಗ್ಗೆ ಮದುವೆಯಾಗಿದ್ದಾರೆ ಎಂಬುದು ಸದ್ಯಕ್ಕೆ ಬರುತ್ತಿರುವ ಮಾಹಿತಿ. ಈ ದಾಂಪತ್ಯ ಹೇಗಿರುತ್ತದೆ ಎಂಬ ಬಗ್ಗೆ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ.

    Virat Kohli and Anushka Sharma are married now

    ಹ್ಞಾಂ, ಈ ಜೋಡಿ ಮದುವೆಯಾಗಿದ್ದು ಎಲ್ಲಿ ಅಂತಲೇ ಹೇಳಲಿಲ್ಲವಲ್ಲ ಅಂತೀರಾ? ಇಟಲಿ ದೇಶದ ಟಸ್ಕನಿ ಎಂಬಲ್ಲಿ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈ ಸ್ಥಳ ಇರುವುದು ಇಟಲಿಯ ಮಿಲಾನ್ ನಿಂದ ನಾಲ್ಕು ತಾಸು ಪ್ರಯಾಣದಷ್ಟು ದೂರದಲ್ಲಿ. ಜಗತ್ತಿನಲ್ಲೇ ಎರಡನೇ ಅತಿ ದುಬಾರಿ ರಜಾ ತಾಣ ಇದಂತೆ.

    ಎರಡೂ ಕುಟುಂಬದ ಸದಸ್ಯರು ಹಾಗೂ ಆಯ್ದ ಸ್ನೇಹಿತರಷ್ಟೇ ಮದುವೆಯ ಸಂದರ್ಭದಲ್ಲಿ ಹಾಜರಿದ್ದು, ಶುಭ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    English summary
    Virat Kohli and Anushka Sharma have tied the knot, say reports. The cricketer and the actor are going to make it official soon.
    Tuesday, December 12, 2017, 12:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X