ಜರ್ಮನ್ ಸುಂದರಿ ಪೋಸ್ಟ್‌ಗೆ ಲೈಕ್ ಒತ್ತಿದ ವಿರಾಟ್ ಕೊಹ್ಲಿ; ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ.. ಯಾರೀಕೆ?

2026ರ ಐಪಿಎಲ್ ಪಂದ್ಯಗಳಿಗೆ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲರ ಫೇವರಿಟ್ ಆರ್‌ಸಿಬಿ ಇದೂವರೆಗೂ ಆಡಿರುವ ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಸೋತಿದೆ. ಸದ್ಯ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ಗೆಲುವಿನ ಉತ್ಸಾಹದಲ್ಲಿದೆ. ಇನ್ನು ವಿರಾಟ್ ಕೊಹ್ಲಿ ಅತೀ ರನ್‌ಗಳನ್ನು ಗಳಿಸಿ ಟಾಪ್‌ನಲ್ಲಿ ಇದ್ದಾರೆ. ಹೀಗಾಗಿ ಈ ಬಾರಿ ಮತ್ತೆ ಆರ್‌ಸಿಬಿ ಕಪ್ ಗೆಲ್ಲಬಹುದಾ? ಅನ್ನೋ ಚರ್ಚೆ ಶುರುವಾಗಿದೆ.

ಈ ಮಧ್ಯೆ ವಿರಾಜ್ ಕೊಹ್ಲಿ ಮೈದಾನದ ಹೊರಗಿನ ವಿಷಯವೊಂದಕ್ಕೆ ಸುದ್ದಿಯಲ್ಲಿ ಇದ್ದಾರೆ. ಕಳೆದ ವರ್ಷ ಮಾಡಿದ ತಪ್ಪನೇ ಮತ್ತೆ ಮಾಡಿ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಕಳೆದ ವರ್ಷ ವಿರಾಟ್ ಕೊಹ್ಲಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಲೈಕ್ ಕೊಟ್ಟಿದ್ದರು. ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ವಿರಾಟ್ ಕೊಹ್ಲಿ ಈ ಘಟನೆಗೆ ಸ್ಪಷ್ಠೀಕರಣವನ್ನು ನೀಡಿದ್ದರು. ಇನ್‌ಸ್ಟಾಗ್ರಾಂ ಅಲ್ಗಾರಿದಂ ತಪ್ಪಿನಿಂದಾಗಿ ಅಚಾನಕ್ ಆಗಿ ಲೈಕ್ ಒತ್ತಿದ್ದಾಗಿ ಹೇಳಿದ್ದರು.

Virat Kohli liked German-South Africa influence Liz Laz Instagram post sparked debate

ಈಗ ಮತ್ತೆ ಇಂತಹದ್ದೇ ಒಂದು ಘಟನೆ ನಡೆದಿದೆ. ವಿರಾಟ್ ಕೊಹ್ಲಿ ಜರ್ಮನ್ ಹಾಗೂ ದಕ್ಷಿಣ ಆಫ್ರಿಕಾದ ಇನ್‌ಪ್ಲ್ಯೂಯೆನ್ಸ್ ಜಿಜ್‌ಲಾಜ್ ಅವರ ಫೋಸ್ಟ್‌ಗೆ ಲೈಕ್ ಕೊಟ್ಟಿದ್ದಾರೆ. ಅದು ಗ್ಲಾಮರಸ್ ಪೋಟೊ ಒಂದಕ್ಕೆ ಲೈಕ್ ಕೊಟ್ಟಿದ್ದಾರೆ. ಇದು ಕೂಡಲೇ ನೆಟ್ಟಿಗರ ಗಮನ ಸೆಳೆದಿದೆ. ಮತ್ತೆ ವಿರಾಟ್ ಕೊಹ್ಲಿಯನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ. ಅಷ್ಟಕ್ಕೂ ಲಿಜ್‌ ಲಾಜ್ ಯಾರು? ಈಕೆಯ ಹಿನ್ನೆಲೆಯೇನು? ತಿಳಿಯುವುದಕ್ಕೆ ಮುಂದೆ ಓದಿ.

ಅಷ್ಟಕ್ಕೂ ಇದೆಲ್ಲ ಹೇಗೆ ಶುರುವಾಯ್ತು ಅಂತ ನೋಡುವುದಾರೇ, ಭಾರತದ ಜನಪ್ರಿಯ ಫ್ಯಾಷನ್ ಫೋಟೊಗ್ರಾಫರ್ ಅದ್ವೈತ್ ವೈದ್ಯ. ಇವರು ಮಾಡಲ್‌ ಹಾಗೂ ಸ್ಟಾರ್‌ಗಳ ಫೋಟೊವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಾರೆ. ಆದರೆ, ಜರ್ಮನಿಯ ಉದಯೋನ್ಮುಕ ಮಾಡಲ್ ಕಮ್ ಇನ್‌ಫ್ಲ್ಯೂಯೆನ್ಸರ್ ಲಿಜ್‌ ಲಾಜ್ ಅವರನ್ನು ಸೆರೆ ಹಿಡಿದು, ಫೋಟೊಗಳನ್ನು ಪೋಸ್ಟ್ ಮಾಡಿದ್ದರು. ಅದನ್ನು ವಿರಾಟ್ ಕೊಹ್ಲಿ ಲೈಕ್ ಮಾಡಿದ್ದರು. ಇದು ನೆಟ್ಟಿಗರಿಗೆ ಗೊತ್ತಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜೋಕ್‌ಗಳು, ಮೇಮ್ಸ್‌ ಹರಿದಾಡೋಕೆ ಶುರುವಾಗಿವೆ.

ನೆಟ್ಟಿಗರು ವಿರಾಟ್ ಕೊಹ್ಲಿಯನ್ನು ಕಾಲೆಳೆಯುವುದಕ್ಕೆ ಶುರು ಮಾಡಿದ್ದಾರೆ. " ವಿರಾಟ್ ಕೊಹ್ಲಿ ಮತ್ತೆ ಕ್ಷಮೆ ಕೇಳುವಂತೆ ಅನುಷ್ಕಾ ಮಾಡಬೇಕು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಇಂತಹ ಹೈಡ್‌ಲೈನ್‌ಗಳಿಂದ ತಪ್ಪಿಸಿಕೊಳ್ಳುವುದಕ್ಕೆ ವಿರಾಟ್ ಕೊಹ್ಲಿ ಇನ್ನೊಂದು ಅಕೌಂಡ್ ಓಪನ್ ಮಾಡುವುದು ಒಳ್ಳೆಯದು" ಕಾಳೆದಿದ್ದಾರೆ. "ಅನುಷ್ಕಾ ಅವರೇ ವಿರಾಟ್ ಕೊಯ್ಲೆ ಫೋನ್‌ ಅನ್ನು ಅಕಾಯ್‌ರಿಂದ ದೂರವಿಡಿ. ಅವರು ಸುಮ್ಮನೆ ಫೋಟೊಗಳನ್ನು ಲೈಕ್ ಮಾಡುತ್ತಿದ್ದಾರೆಂದು" ಹೇಳಿದ್ದಾರೆ. ಮತ್ತೊಬ್ಬರು "ಮತ್ತೆ ಅಲ್ಗಾರಿದಮ್ ಕೈ ಕೊಟ್ಟಿತೇ ವಿರಾಟ್?" ಎಂದು ಕಾಲೆಳೆದಿದ್ದಾರೆ.

`

ಅಷ್ಟಕ್ಕೂ ವಿರಾಟ್ ಕೊಹ್ಲಿ ಲೈಕ್ ಮಾಡಿದ ಜರ್ಮನಿಯ ಸುಂದರಿ ಲಿಜ್‌ಲಾಜ್ ಯಾರು? ಇವರ ಹಿನ್ನೆಲೆ ಏನು ಅನ್ನೋದನ್ನು ನೋಡುವುದಾರೇ, ಲಿಜ್‌ ಲಾಜ್ ಅವರ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ "ವ್ಲಾಗರ್, ಫುಡೀ ಮತ್ತು ಸಿಂಗರ್" ಎಂದು ಬರೆದುಕೊಂಡಿದ್ದಾರೆ. ಅರ್ಧ ದಕ್ಷಿಣ ಆಫ್ರಿಕಾ ಹಾಗೂ ಇನ್ನರ್ದ ಜರ್ನಿಯವರು ಎಂದು ಹೇಳಿದ್ದಾರೆ. ಹಾಗೇ ಸದ್ಯ ಜರ್ಮನಿಯಲ್ಲಿ ನೆಲೆಸಿದ್ದಾರೆ. ಸೈಕಾಲಜಿಯಲ್ಲಿ ಮಾಸ್ಟರ್‌ ಡಿಗ್ರಿ ಪಡೆದುಕೊಂಡಿದ್ದಾರೆ. ಇನ್ನು ಕನ್ನಡ ಇನ್‌ಫ್ಲ್ಯೂಯೆನ್ಸರ್‌ಗಳ ಜೊತೆನೂ ಇವರು ವಿಡಿಯೋ ಮಾಡಿರೋದು ವಿಶೇಷ. ಇನ್ನು ಇವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಒಟ್ನಲ್ಲಿ ಐಪಿಎಲ್‌ನ ಈ ಸೀಸನ್‌ನಲ್ಲೂ ವಿರಾಟ್ ಕೊಹ್ಲಿ ಕ್ರಿಕೆಟ್ ಹೊರತಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಅವನೀತ್ ಕೌರ್‌ ಫೋಟೊಗಳಿಗೆ ಲೈಕ್ ಮಾಡಿದ್ದರು. ಈ ಬಾರಿ ಜರ್ಮನ್ ಬ್ಯೂಟಿಯ ಗ್ಲಾಮರಸ್ ಫೋಟೊಗೆ ಲೈಕ್ ಕೊಟ್ಟಿದ್ದಾರೆ. ಅಸಲಿಗೆ ಈ ಬಾರಿ ಏನು ಮಿಸ್ಟೇಕ್ ಆಯ್ತು? ಅನ್ನೋದನ್ನು ಖುದ್ದಾಗಿ ವಿರಾಟ್ ಕೊಹ್ಲಿಯೇ ಹೇಳಬೇಕು.

English summary
Virat Kohli liked German-South Africa influence Liz Laz Instagram post sparked debate.
Read more about: virat kohli rcb
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X