ವಾಜಿದ್ ಖಾನ್ ಸತ್ತಿದ್ದು ಹೃದಯಾಘಾತದಿಂದ: ಸಾಜಿದ್ ಖಾನ್
ಸೋಮವಾರ ನಿಧನರಾದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್, ಸತ್ತಿರುವುದು ಹೃದಯಾಘಾತದಿಂದ ಎಂದು ತಿಳಿಸಿದ್ದಾರೆ. ವಾಜಿದ್ ಖಾನ್ ಅವರು ಕಿಡ್ನಿ ಕಸಿಗೆ ಒಳಗಾಗಿದ್ದರಿಂದ ಮೂತ್ರಪಿಂಡದ ಸೋಂಕು ತಗುಲಿತ್ತು, ಹಾಗೆಯೇ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕೂಡ ಕಾಣಿಸಿಕೊಂಡಿತ್ತು. ಇದರಿಂದಾಗಿ ಅವರು ಮೃತಪಟ್ಟಿದ್ದರು ಎನ್ನಲಾಗಿತ್ತು.
Recommended Video
ವಾಜಿದ್ ಖಾನ್ ನಿಧನರಾದ ಕೆಲವೇ ದಿನಗಳಲ್ಲಿ ಅವರ ತಾಯಿಯಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು, ಈ ಸುದ್ದಿಯನ್ನು ಬಲಪಡಿಸಿತ್ತು.
ವಾಜಿದ್ ಅವರ ಸಹೋದರ ಸಾಜಿದ್ ಖಾನ್ ಶನಿವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಸಹೋದರನನ್ನು ಚೆನ್ನಾಗಿ ಆರೈಕೆ ಮಾಡಿದ್ದ ಮುಂಬೈನ ಸುರಾನಾ ಸೇಥಿಯಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

'ನಮ್ಮ ಪ್ರೀತಿಯ ವಾಜಿದ್ ಜೂನ್ 1ರಂದು ರಾತ್ರಿ 12.30ರ ಸಮಯಕ್ಕೆ 47ನೇ ವಯಸ್ಸಿನಲ್ಲಿ ಸುರಾನಾ ಸೇಥಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ ವರ್ಷ ಆತನಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿತ್ತು. ಗಂಟಲು ಸೋಂಕಿನ ಕಾರಣದಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು' ಎಂದು ಸಾಜಿದ್ ಬರೆದಿದ್ದಾರೆ.
ಬಳಿಕ ಅವರು ತಮ್ಮ ಹೇಳಿಕೆಯಲ್ಲಿ ಸುರಾನಾ ಸೇಥಿಯಾ ಆಸ್ಪತ್ರೆಯ ವಿವಿಧ ವೈದ್ಯರ ಹೆಸರು ಉಲ್ಲೇಖಿಸಿದ್ದು, ಇಷ್ಟು ದಿನ ಚಿಕಿತ್ಸೆ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ವಾಜಿದ್ ಸಾವಿಗೆ ಕಿಡ್ನಿ ವೈಫಲ್ಯ ಹಾಗು ಕೊರೊನಾ ವೈರಸ್ ಎಂದು ಹೇಳಲಾಗುತ್ತಿತ್ತು. ಸಾಜಿದ್ ಖಾನ್ ಅವರ ಹೇಳಿಕೆಯಲ್ಲಿ ಅವುಗಳ ಬಗ್ಗೆ ಉಲ್ಲೇಖಿಸಿಲ್ಲ.


Click it and Unblock the Notifications











