»   » ಸಲ್ಮಾನ್ ಖಾನ್ ಹ್ಯಾಪಿ ಆಗಿರದ 'ಟ್ಯೂಬ್‌ಲೈಟ್' ಟ್ರೈಲರ್

ಸಲ್ಮಾನ್ ಖಾನ್ ಹ್ಯಾಪಿ ಆಗಿರದ 'ಟ್ಯೂಬ್‌ಲೈಟ್' ಟ್ರೈಲರ್

Posted By:
Subscribe to Filmibeat Kannada

ಬಾಲಿವುಡ್ ಸಿನಿ ಪ್ರಿಯರಲ್ಲಿ ಬಹು ದಿನಗಳಿಂದ ಟೀಸರ್ ಮತ್ತು ರೇಡಿಯೋ ಹಾಡುಗಳಿಂದ ನಿರೀಕ್ಷೆ ಹುಟ್ಟುಹಾಕಿರುವ 'ಟ್ಯೂಬ್‌ಲೈಟ್' ಚಿತ್ರತಂಡವೀಗ 2 ನಿಮಿಷ 23 ಸೆಕೆಂಡ್ ಇರುವ ಟ್ರೈಲರ್ ಬಿಡುಗಡೆ ಮಾಡಿದೆ.['ಟ್ಯೂಬ್ ಲೈಟ್' ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದ ಸಲ್ಮಾನ್ ಖಾನ್]

ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್‌ಲೈಟ್' ಚಿತ್ರದ ಟೀಸರ್ ನಲ್ಲಿ 1962 ರ ಚೀನಾ ಮತ್ತು ಭಾರತದ ನಡುವಿನ ಯುದ್ಧ ಸನ್ನಿವೇಶದ ರೋಮಾಂಚನಕಾರಿಯಾದ ಘಟನೆಗಳ ಬಗ್ಗೆ ಸುಳಿವು ನೀಡಲಾಗಿತ್ತು. ಆದರೆ ಈಗ ಬಿಡುಗಡೆ ಆಗಿರುವ ಚಿತ್ರದ ಅಫೀಶಿಯಲ್ ಟ್ರೈಲರ್ ನಲ್ಲಿ ಸಲ್ಮಾನ್ ಖಾನ್ ರವರ ಸ್ವಂತ ಸಹೋದರ ಸೊಹೈಲ್ ಖಾನ್ ರವರು ಚಿತ್ರದಲ್ಲೂ ಅವರಿಗೆ ಸಹೋದರನಾಗಿ ಕಾಣಿಸಿಕೊಂಡಿರುವ ಬಗ್ಗೆ ರಿವೀಲ್ ಮಾಡಲಾಗಿದೆ. ಅಲ್ಲದೇ ಸೋಹೈಲ್ ಖಾನ್ ರವರು ಭಾರತ ಸೇನೆಯ ಸೈನಿಕರಾಗಿ ಬಣ್ಣ ಹಚ್ಚಿದ್ದಾರೆ.

Salman Khan Starrer 'Tubelight' Trailer

ಟೀಸರ್ ನಲ್ಲಿ ಸಲ್ಮಾನ್ ಖಾನ್ ಮುದ್ದು ಮುದ್ದಾಗಿ ಪೆದ್ದು ಪೆದ್ದಾಗಿ ಕಾಣಿಸಿಕೊಂಡಿದ್ದರು. ಇದರಿಂದ ಸಿನಿಮಾದಲ್ಲಿ ಸಂಪೂರ್ಣವಾಗಿ ಅವರ ಅಭಿನಯ ಹೀಗೆ ಇರಬಹುದು ಎಂದು ಪ್ರೇಕ್ಷಕರು ಭಾವಿಸಿದ್ದರು. ಆದರೆ ಟ್ರೈಲರ್ ನಲ್ಲಿನ ಅವರ ಅಭಿನಯ ಚಿತ್ರ ಹೆಚ್ಚು ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಆಗಿರುವ ಬಗ್ಗೆ ಕಂಡುಬಂದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಹೆಸರು 'ಟ್ಯೂಬ್‌ಲೈಟ್' ಅಲ್ಲ 'ಲಕ್ಷ್ಮಣ್ ಸಿಂಗ್ ಬಿಶ್ಟ್' ಎಂಬುದು ತಿಳಿದಿದೆ.[ಮಿಸ್ ಮಾಡದೇ ನೋಡಿ ಸಲ್ಮಾನ್ ಖಾನ್ ರೇಡಿಯೋ ಹಾಡು!]

Salman Khan Starrer 'Tubelight' Trailer

'ಟ್ಯೂಬ್‌ಲೈಟ್' ಚಿತ್ರಕ್ಕೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿದ್ದು, ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಗೆ ಚಿತ್ರದಲ್ಲಿ ಚೀನಾ ಮೂಲದ ನಟಿ Zhu Zhu ಅಭಿನಯಿಸಿದ್ದಾರೆ. ಚಿತ್ರದ ಜೂನ್ 23 ರಂದು ದೇಶದಾದ್ಯಂತ ತೆರೆಕಾಣಲಿದೆ. 'ಟ್ಯೂಬ್‌ಲೈಟ್' ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ.

English summary
Salman Khan Starrer 'Tubelight' Trailer released. This movie was written and directed by Kabir Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada