twitter
    For Quick Alerts
    ALLOW NOTIFICATIONS  
    For Daily Alerts

    ನಾವೆಲ್ಲರೂ ಒಂದೇ ಕುಟುಂಬ, ಒಗ್ಗಟ್ಟಿನಿಂದ ಹೋರಾಡೋಣ ಎಂದ ಶಾರುಖ್ ಖಾನ್

    |

    ಕೊರೊನಾ ವೈರಸ್ ಸೋಂಕಿನ ಹಾವಳಿ ತೀವ್ರವಾಗಿ ವ್ಯಾಪಿಸಿದ್ದರೂ ಬಾಲಿವುಡ್ ತಾರೆ ಶಾರುಖ್ ಖಾನ್ ಯಾವುದೇ ರೀತಿಯ ಸಹಾಯಕ್ಕೆ ಮುಂದಾಗಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಶಾರುಖ್ ಖಾನ್ ಭಾರತಕ್ಕೆ ನೆರವು ನೀಡುವುದಿಲ್ಲ. ಅವರು ಪಾಕಿಸ್ತಾನಕ್ಕೆ ಮಾತ್ರ ಸಹಾಯ ಮಾಡುತ್ತಾರೆ ಎಂಬೆಲ್ಲ ಆರೋಪಗಳನ್ನು ಮಾಡಲಾಗಿತ್ತು.

    ಈ ಎಲ್ಲ ಟೀಕೆಗಳಿಗೂ ಉತ್ತರ ನೀಡುವ ಗೋಜಿಗೆ ಹೋಗದೆ ಮೌನವಹಿಸಿದ್ದ ಶಾರುಖ್, ಕೋವಿಡ್ 19ರ ಸಂಕಷ್ಟಕರ ಸಂದರ್ಭದಲ್ಲಿ ಭಾರತದ ಜನರಿಗೆ ನೆರವಾಗಲು ಸಾಲು ಸಾಲು ನೆರವುಗಳನ್ನು ಘೋಷಿಸಿದ್ದಾರೆ. ತಮ್ಮ ವಿವಿಧ ಫೌಂಡೇಷನ್‌ಗಳು, ಫ್ರಾಂಚೈಸಿಗಳ ಮೂಲಕ ಹಲವು ಬಗೆಯಲ್ಲಿ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಹಾಗೆಯೇ ಪರಿಹಾರ ನಿಧಿಗಳಿಗೂ ದೇಣಿಗೆಯನ್ನು ಘೋಷಿಸಿದ್ದಾರೆ. ಮುಂದೆ ಓದಿ...

    ಶಾರುಖ್, ಗೌರಿಗೆ ಧನ್ಯವಾದ

    ಮಹಾರಾಷ್ಟ್ರದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದರ ಜತೆಗೆ ಮುಂಬೈ ನಗರದಲ್ಲಿಯೂ ಸಹಾಯ ಮಾಡುವುದಾಗಿ ಶಾರುಖ್ ತಿಳಿಸಿದ್ದರು. ಅದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಧನ್ಯವಾದ ಸಲ್ಲಿಸಲಾಗಿತ್ತು.

    ಕೊರೊನಾ ಸಂಕಷ್ಟಕ್ಕೆ ಸಾಲು-ಸಾಲು ಸಹಾಯ ಘೋಷಿಸಿದ ಶಾರುಖ್ ಖಾನ್ಕೊರೊನಾ ಸಂಕಷ್ಟಕ್ಕೆ ಸಾಲು-ಸಾಲು ಸಹಾಯ ಘೋಷಿಸಿದ ಶಾರುಖ್ ಖಾನ್

    ಸಾಗರದಷ್ಟು ಸಹಾಯ ಆಗುತ್ತದೆ

    ಸಾಗರದಷ್ಟು ಸಹಾಯ ಆಗುತ್ತದೆ

    ಮಹಾರಾಷ್ಟ್ರ ಸಿಎಂಗೆ ಮರಾಠಿಯಲ್ಲಿ ಪ್ರತಿಕ್ರಿಯಿಸಿರುವ ಶಾರುಖ್, 'ಈ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ಏಕೆಂದರೆ ಹನಿಗಳು ಬೀಳುತ್ತಿವೆ. ಪ್ರತಿಯೊಬ್ಬರೂ ಸಣ್ಣ ಪ್ರಮಾಣದ ಪ್ರಯತ್ನ ನಡೆಸಿದರೂ ಸಾಗರದಷ್ಟು ದೊಡ್ಡದಾದ ಸಹಾಯ ಸೃಷ್ಟಿಸಬಹುದು. ನಿಮ್ಮ ಮಾರ್ಗದರ್ಶನಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.

    ನಾವೆಲ್ಲರೂ ಒಂದು ಕುಟುಂಬ

    'ನಾವೆಲ್ಲರೂ ಒಂದು ಕುಟುಂಬ ಸರ್. ಒಬ್ಬರನ್ನೊಬ್ಬರು ಆರೋಗ್ಯವಂತರನ್ನಾಗಿ ಇರಿಸಲು ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕಾಗಿದೆ. ಧನ್ಯವಾದಗಳು' ಎಂದು ಶಾರುಖ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಹೇಳಿದ್ದಾರೆ.

    ದುಬೈ ಜನರ ಪರ ಶಾರುಖ್ ಖಾನ್ ಕಾಳಜಿ: ವಿವಾದ ಎಬ್ಬಿಸಿದ ವಿಡಿಯೋದುಬೈ ಜನರ ಪರ ಶಾರುಖ್ ಖಾನ್ ಕಾಳಜಿ: ವಿವಾದ ಎಬ್ಬಿಸಿದ ವಿಡಿಯೋ

    ಈ ಸಂದರ್ಭದಲ್ಲಿ ಧನ್ಯವಾದ ಬೇಡ

    'ನಾವು ಇಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಕೃತಜ್ಞತೆ ಸಲ್ಲಿಸುವ ಅಗತ್ಯವೇ ಇಲ್ಲ. ನಾವೊಂದು ಕುಟುಂಬ. ನೀವು ಮಹಾರಾಷ್ಟ್ರಕ್ಕಾಗಿ ಬಹಳ ಕಠಿಣ ಪರಿಶ್ರಮ ಪಡುತ್ತಿದ್ದೀರಿ. ಅದಕ್ಕೆ ನಿಮಗೆ ಕೃತಜ್ಞರಾಗಿರುತ್ತೇವೆ. ನಿಮಗೆ ಸಮಯ ಸಿಕ್ಕಾಗೆಲ್ಲ ಒಂದೆರಡು ಪದ್ಯ ಬರೆಯಿರಿ. ಲವ್ ಟು ಯು' ಎಂದು ಆದಿತ್ಯ ಠಾಕ್ರೆ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಆರೋಗ್ಯದ ಕಿಟ್ ವಿತರಣೆ

    ಆರೋಗ್ಯದ ಕಿಟ್ ವಿತರಣೆ

    ಪ್ರಧಾನ ಮಂತ್ರಿ ಮತ್ತು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಶಾರುಖ್ ತಿಳಿಸಿದ್ದಾರೆ. ಕೆಕೆಆರ್ ಮತ್ತು ಮೀರ್ ಫೌಂಡೇಷನ್ ವತಿಯಿಂದ 50,000 ಆರೋಗ್ಯ ಕಿಟ್, ರೋಟಿ ಫೌಂಡೇಷನ್, ಮೀರ್ ಫೌಂಡೇಷನ್‌ ಕಡೆಯಿಂದ ಮೂರು ಲಕ್ಷ ಊಟದ ಕಿಟ್ ಹಂಚಲಾಗುತ್ತಿದೆ.

    ನಿತ್ಯವೂ ಜನರಿಗೆ ಆಹಾರ

    ಅರ್ಥ್ ಫೌಂಡೇಷನ್, ಮೀರ್ ಫೌಂಡೇಷನ್ ಮೂಲಕ ಮುಂಬೈ ಒಂದರಲ್ಲಿಯೇ 5,500 ಮಂದಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಪ್ರತಿದಿನ 2000 ಜನರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ಶಾರುಖ್ ಮಾಹಿತಿ ನೀಡಿದ್ದಾರೆ.

    English summary
    Bollywood star Shah Rukh Khan said we are a family. We should fight together in this situation.
    Friday, April 3, 2020, 20:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X