"ನಾನೊಬ್ಬ ತಾಯಿ.. ನನಗೆ ಯಾವಾಗ ಬೇಕಾದರೂ ಹೀಗಾಗುತ್ತಿತ್ತು" ಐಶ್ವರ್ಯಾ ರೈ ಹೀಗಂದಿದ್ದೇಕೆ?
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಆಕೆಯ ಸೌಂದರ್ಯಕ್ಕೆ, ಸಿನಿಮಾಗಳಿಗೆ ಫಿದಾ ಆದವರೇನು ಕಮ್ಮಿಯಿಲ್ಲ. ಆದ್ರೀಗ ಕೆಲವು ದಿನಗಳ ಹಿಂದಷ್ಟೇ ಐಶ್ವರ್ಯಾ ರೈ ಹೆವೀ ಟ್ರೋಲ್‌ಗೆ ಒಳಗಾಗಿದ್ದರು.
ಸದಾ ತನ್ನ ಸೌಂದರ್ಯ ಬಗ್ಗೆ ಕಾಳಜಿ ವಹಿಸುತ್ತಿದ್ದ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ದಪ್ಪಗಾಗಿದ್ದಾರೆ. 'ಪೊನ್ನಿಯನ್ ಸೆಲ್ವನ್ 2' ಸಿನಿಮಾದ ವೇಳೆನೂ ಐಶ್ವರ್ಯಾ ಊದಿಕೊಂಡಿದ್ದರು. ಆ ವೇಳೆನೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕೆಲವು ತಿಂಗಳ ಹಿಂದಷ್ಟೇ ಐಶ್ವರ್ಯಾ ರೈ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಐಶ್ವರ್ಯಾ ರೈ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಅಲ್ಲದೆ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು. ಆ ವೇಳೆ ಐಶ್ವರ್ಯಾ ರೈ ಟ್ರೋಲ್ ಮಾಡುವವರು ತಿರುಗೇಟು ನೀಡಿದ್ದರು.
ಟ್ರೋಲ್ ಆಗಿದ್ದ ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಐಶ್ವರ್ಯಾ ಬಚ್ಚನ್ ಅಗತ್ಯಕ್ಕಿಂತ ಹೆಚ್ಚು ತೂಕವಿದ್ದಾರೆಂದು ಕಮೆಂಟ್ ಮಾಡಲಾಗಿತ್ತು. ಐಶ್ವರ್ಯಾ ರೈ ಅನ್ನು ಕೆಟ್ಟ ಕೆಟ್ ಹೆಸರುಗಳಿಂದ ಕರೆದಿದ್ದರು. ಅಲ್ಲದೆ ಫ್ಯಾಷನ್ ವೀಕ್‌ಗೆ ಐಶ್ವರ್ಯಾ ರೈ ಫಿಟ್ ಅಲ್ಲ ಎಂದು ಕಮೆಂಟ್ ಮಾಡಿದ್ದರು.
ತಮಿಳಿನ ಟಾಪ್ ಹೀರೊ ಕೆನ್ನೆಗೆ ಬಾರಿಸಿದ್ದ ಐಶ್ವರ್ಯಾ ರೈ: ಆ ಸ್ಟಾರ್ ನಟ ಯಾರು? ಏನಿದು ಘಟನೆ?
ಐಶ್ವರ್ಯಾ ರೈ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ರಾಂಪ್ ವಾಕ್ ಮಾಡಲು ಯೋಗ್ಯರಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಅಲ್ಲದೆ ಐಶ್ವರ್ಯಾ ರೈ ಫ್ಯಾಷನ್ ವೀಕ್‌ಗೆ ಬೇಕಾಗಿರೋ ಸೌಂದರ್ಯದ ಮಾನದಂಡಗಳನ್ನು ಗಾಳಿಗೆ ತೂರಿಸಿದ್ದಾರೆ ಎನ್ನಲಾಗಿದೆ.

ಎರಡನೇ ಮಗುವಿನ ಬಗ್ಗೆ ಗಾಳಿಸುದ್ದಿ
ಇದೇ ವೇಳೆ ಐಶ್ವರ್ಯಾ ರೈ ಬಚ್ಚನ್ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂದು ಗಾಳಿ ಸುದ್ದಿಯನ್ನು ಹಬ್ಬಿಸಿದ್ದರು. ಹಾಗಂತ ಗರ್ಭಿಣಿಯಾಗುತ್ತಿದ್ದಾರೆ ಅನ್ನೋ ಸುದ್ದಿ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಇಂತಹದ್ದೇ ಸುದ್ದಿಗಳು ಓಡಾಡಿದ್ದವು.
ಹೀಗೆ ಪ್ರೆಗ್ನೆನ್ಸಿ ಬಗ್ಗೆ ಸುದ್ದಿ ಹಬ್ಬಿದಾಗಲೆಲ್ಲ ಐಶ್ವರ್ಯಾ ರೈ ಸ್ಟ್ರಾಂಗ್ ಆಗಿಯೇ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲೂ ಪುತ್ರಿ ಆರಾಧ್ಯಾ ಜನನದ ಬಳಿಕ ಐಶ್ವರ್ಯಾ ಸಹಜವಾಗಿಯೇ ದಪ್ಪ ಆಗಿದ್ದರು. ಆಗ ಕಮೆಂಟ್‌ಗಳು ಬಂದಿದ್ದವು. ಆಗ ಇಂತಹ ಸುದ್ದಿಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲವೆಂದು ಐಶ್ ಹೇಳಿದ್ದರು. ಜೊತೆಗೆ ಜೀರೋ ಸೈಜ್ ಬಗ್ಗೆ ತಾನೆಂದು ಆಸಕ್ತಿಯನ್ನು ಹೊಂದಿರಲಿಲ್ಲ ಎಂದು ಹೇಳಿದ್ದರು.
ಐಶ್ವರ್ಯಾ ರೈ ಹೇಳಿದ್ದೇನು?
" ಇದೇ ಸತ್ಯ. ನಾನು ಹೀಗೆ ಇರೋದು. ನಾನೊಬ್ಬಳು ತಾಯಿ. ಇದು ಯಾವಾಗ ಬೇಕಾದರೂ ಆಗಬಹುದಿತ್ತು. ಈಗ ಆಗಿದೆಯಷ್ಟೆ. ಅದು ನನಗೆ ಓಕೆ. ನಾನು ಜೀರೋ ಸೈಜ್ ಬಗ್ಗೆ ಯಾವಾಗಲೂ ಪ್ರಚಾರ ಮಾಡಿಲ್ಲ." ಎಂದು ಐಶ್ವರ್ಯಾ ರೈ ಬಚ್ಚನ ಹಿಂದಿನ ಸಂದರ್ಶವೊಂದರಲ್ಲಿ ಹೇಳಿದ್ದರು.
"ನಾನು ಅನೇಕ ಬಾರಿ ಗರ್ಭಿಣಿಯಾಗಿದ್ದೆ ಎಂದು ನೀವು ಊಹೆ ಮಾಡಿದ್ದೀರಿ. ಆದ್ದರಿಂದ ನಾನು ಜನರ ದೃಷ್ಟಿಯಲ್ಲಿ ನಿಜ ಜೀವನಕ್ಕಾಗಿ ಬದುಕಿದ್ದೇನೆ ಎಂದು ತೋರಿಸುತ್ತದೆ." ಎಂದು ಐಶ್ವರ್ಯಾ ರೈ ಬಚ್ಚನ್ ಹೇಳಿದ್ದರು.


Click it and Unblock the Notifications











