ತಮಿಳಿನ ಟಾಪ್ ಹೀರೊ ಕೆನ್ನೆಗೆ ಬಾರಿಸಿದ್ದ ಐಶ್ವರ್ಯಾ ರೈ: ಆ ಸ್ಟಾರ್ ನಟ ಯಾರು? ಏನಿದು ಘಟನೆ?

ಐಶ್ವರ್ಯಾ ರೈ ಬ್ಯೂಟಿಗೆ ಮಾರು ಹೋಗದವರೇ ಇಲ್ಲ. ಮಾಜಿ ವಿಶ್ವ ಸುಂದರಿಯನ್ನು ಆರಾಧಿಸುವ ಅಭಿಮಾನಿಗಳು ವಿಶ್ವದಾದ್ಯಂತ ಇದ್ದಾರೆ. 1994ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆ ಐಶ್ವರ್ಯಾ ರೈ ಹೆಸರು ದೇಶದ ಗಲ್ಲಿ ಗಲ್ಲಿಯಲ್ಲೂ ಹರಿದಾಡುತ್ತಿತ್ತು. ಆಕೆಯ ಸೌಂದರ್ಯದ ಗುಣಗಾನ ಮಾಡುತ್ತಿದ್ದರು.

ಇಂದಿಗೂ ಯಾರಾದರೂ 'ಮಿಸ್ ವರ್ಲ್ಡ್' ಅನ್ನೋ ಪದ ಎತ್ತಿದರೆ, ಮೊದಲು ಬರೋ ಹೆಸರೇ ಐಶ್ವರ್ಯಾ ರೈ. ಮಿಸ್ ವರ್ಲ್ಡ್ ಕಿರೀಟ ಗೆದ್ದ ಬಳಿಕ ತಮಿಳು ಚಿತ್ರರಂಗದಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು. ಮಣಿರತ್ನಂ ನಿರ್ದೇಶಿಸಿದ್ದ 'ಇರುವರ್' 1997ರಲ್ಲಿ ತೆರೆಕಂಡಿತ್ತು. ಇಲ್ಲಿಂದ ಐಶ್ವರ್ಯಾ ಮತ್ತೆಂದೂ ಹಿಂತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ.

There is news that once Aishwarya Rai Bachchan slapped a famous Tamil actor: Do you know why?

ತಮಿಳು ಸಿನಿಮಾದಿಂದ ವೃತ್ತಿ ಬದುಕು ಆರಂಭಿಸಿದ್ದರೂ, ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿರೋ ಐಶ್ವರ್ಯಾ ಆಗಾಗ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ತೆರೆ ಕಂಡ 'ಪೊನ್ನಿಯನ್ ಸೆಲ್ವನ್' ಸರಣಿಯಲ್ಲೂ ಕಾಣಿಸಿಕೊಂಡಿದ್ದರು. ಈಗ ಇದ್ದಕ್ಕಿದ್ದ ಹಾಗೇ ತಮಿಳಿನ ಟಾಪ್ ನಟನ ಕೆನ್ನೆಗೆ ಐಶ್ವರ್ಯಾ ಬಾರಿಸಿದ್ದ ಸಂಗತಿ ವೈರಲ್ ಆಗುತ್ತಿದೆ.

ಜನಪ್ರಿಯ ನಟನ ಕೆನ್ನೆಗೆ ಬಾರಿಸಿದ್ದ ಐಶ್ವರ್ಯಾ ರೈ

ಸುಮಾರು 23 ವರ್ಷಗಳ ಹಿಂದಿನ ಸುದ್ದಿ ಈಗ ದಿಢೀರನೇ ವೈರಲ್ ಆಗುತ್ತಿದೆ. ಐಶ್ವರ್ಯಾ ರೈ ತಮಿಳಿನ ಸಿನಿಪ್ರಿಯರಿಗೂ ತುಂಬಾನೇ ಪರಿಚಿತರಾಗಿದ್ದರು. ಜನಪ್ರಿಯರ ನಿರ್ದೇಶಕ ರಾಜೀವ್ ಮೆನನ್ ಬಹುತಾರಾಗಣದ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ಹೊರಟಿದ್ದರು. ಅದುವೇ 'ಕಂಡುಕೊಂಡೈನ್ ಕಂಡುಕೊಂಡೈನ್'.

ಮಮ್ಮುಟ್ಟಿ, ಅಜಿತ್ ಕುಮಾರ್, ತಬು, ಐಶ್ವರ್ಯಾ ರೈ ಹಾಗೂ ಅಬ್ಬಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ಐಶ್ವರ್ಯಾ ರೈ ಬಚ್ಚನ್ ಜನಪ್ರಿಯ ನಟನೊಬ್ಬ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಕೆನ್ನೆಗೆ ಬಾರಿಸಿದ್ದರಂತೆ. ಈ ಸುದ್ದಿ ಎರಡು ದಶಕದ ಹಿಂದೆ ಸಿಕ್ಕಾಪಟ್ಟೆ ದೊಡ್ಡ ಸುದ್ದಿಯಾಗಿತ್ತು.

There is news that once Aishwarya Rai Bachchan slapped a famous Tamil actor: Do you know why?

ಆ ನಟ ಯಾರು? ಏನದು ಘಟನೆ?

'ಕಂಡುಕೊಂಡೈನ್ ಕಂಡುಕೊಂಡೈನ್' ಸಿನಿಮಾದಲ್ಲಿ ಮೂವರು ಸ್ಟಾರ್ ನಟರಿದ್ದರು. ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ, ತಮಿಳಿನ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಹಾಗೂ ಅದೇ ಚಿತ್ರರಂಗದ ಸ್ಟಾರ್ ನಟ ಅಬ್ಬಾಸ್. ಇಂತಹ ಸಿನಿಮಾದಲ್ಲಿ ಐಶ್ವರ್ಯಾ ರೈ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು ಯಾರು? ಅನ್ನೋ ಪ್ರಶ್ನೆ ಎದ್ದಾಗ ಅಬ್ಬಾಸ್ ಹೆಸರು ಬಂದಿತ್ತು.

ಹಿರಿಯ ನಟ ಮಮ್ಮುಟ್ಟಿ ಮೇಲೆ ಅನುಮಾನವೇ ಇರಲಿಲ್ಲ. ಅಜಿತ್ ಜೊತೆ ಐಶ್ವರ್ಯಾ ರೈ ಸೀನ್‌ಗಳೇ ಇರಲಿಲ್ಲ. ಅಲ್ಲದೆ ಅಜಿತ್ ಬಗ್ಗೆ ಡಿಸೆಂಟ್ ಆಕ್ಟರ್ ಅನ್ನೋದು ಇಡಿ ಚಿತ್ರರಂಗಕ್ಕೆ ಗೊತ್ತಿತ್ತು. ಆಗ ಓಡಾಡಿದ್ದ ಹೆಸರೇ ಅಬ್ಬಾಸ್. ಸಿನಿಮಾದಲ್ಲಿ ಇವರಿಬ್ಬರ ರೊಮ್ಯಾಂಟಿಕ್ ದೃಶ್ಯಗಳಿವೆ. ಈ ವೇಳೆ ಅಬ್ಬಾಸ್ ಮಾಜಿ ವಿಶ್ವ ಸುಂದರಿ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ವರದಿಯಾಗಿತ್ತು.

ಸೆಟ್‌ನಲ್ಲಿ ಏನಾಗಿತ್ತು?

'ಕಂಡುಕೊಂಡೈನ್ ಕಂಡುಕೊಂಡೈನ್' ಸಿನಿಮಾದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಅಬ್ಬಾಸ್ ಉದ್ದೇಶ ಪೂರ್ವಕವಾಗಿ ಐಶ್ವರ್ಯಾ ರೈ ಮುಟ್ಟುತ್ತಿದ್ದರು. ಆರಂಭದಲ್ಲಿ ಐಶ್ವರ್ಯಾ ರೈ ಮನ್ನಿಸಿದ್ದರೂ, ನಂತರ ಅದು ರಿಪೀಟ್ ಆದಾಗ ನಟಿ ಸಿಟ್ಟಿಗೆದ್ದು ಅಬ್ಬಾಸ್ ಕೆನ್ನೆಗೆ ಬಾರಿಸಿದ್ದರು ಎಂದು ವರದಿಯಾಗಿತ್ತು.

ಇದರಿಂದ ಕೋಪಗೊಂಡ ಅಬ್ಬಾಸ್ ಕ್ಯಾರಾವ್ಯಾನಿನೊಳಗೆ ಹೋಗಿ ಕೂತ್ತಿದ್ದರು. ಈ ಘಟನೆ ಬಳಿಕ ಅಬ್ಬಾಸ್ ಹಾಗೂ ಐಶ್ವರ್ಯಾ ರೈ ಬಳಿ ನಿರ್ದೇಶಕರು ಸಂಧಾನ ಮಾಡಿದ್ದರು. ಆ ಬಳಿಕವೇ ಸಿನಿಮಾದ ಚಿತ್ರೀಕರಣ ಮುಂದುವರೆದಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇದೇ ಸುದ್ದಿ ಈಗ ಮತ್ತೆ ವೈರಲ್ ಆಗುತ್ತಿದೆ.

More from Filmibeat

English summary
There is news that once Aishwarya Rai Bachchan slapped a famous Tamil actor. Do you know why?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X