ಸೈಫ್ ಅಲಿ ಖಾನ್‌ಗೆ ದುಷ್ಕರ್ಮಿಗಳು ಚಾಕು ಇರಿಯುವಾಗ ಕರೀನಾ ಕಪೂರ್ ಎಲ್ಲಿದ್ದರು?

ಬೆಳ್ಳಂಬೆಳಗ್ಗೆನೇ ಬಾಲಿವುಡ್‌ನಲ್ಲಿ ಆತಂಕ ಶುರುವಾಗಿದೆ. ನಟ ಸೈಫ್ ಅಲಿ ಖಾನ್‌ಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಈಗಾಗಲೇ ವರದಿಯಾಗಿರುವ ಪ್ರಕಾರ, ಕಳ್ಳತನಕ್ಕೆ ಮನೆಯೊಳಗೆ ನುಗ್ಗಿದ್ದವರು ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಬಾಲಿವುಡ್ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ವೈದ್ಯರು ಇನ್ನಷ್ಟೇ ಮಾಹಿತಿಯನ್ನು ನೀಡಬೇಕಿದೆ.

ಈ ಘಟನೆ ನಡೆಯುವಾಗ ಕರೀನಾ ಕಪೂರ್ ಹಾಗೂ ಮಕ್ಕಳು ಮನೆಯಲ್ಲಿ ಇರಲಿಲ್ಲ ಅಂತಾನೂ ವರದಿಯಾಗಿದೆ. ಸೈಫ್ ಅಲಿ ಖಾನ್ ಹಾಗೂ ಅವರ ಮನೆ ಕೆಲಸದವರು ಮಾತ್ರವೇ ಇದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಕೆಲಸವರೊಂದಿಗೆ ಕಿತ್ತಾಡುತ್ತಿದ್ದರು. ವಿಷಯ ತಿಳಿದು ಮಧ್ಯ ಪ್ರವೇಶಿಸಿದ ಸೈಫ್ ಅಲಿ ಖಾನ್‌ಗೆ ಚಾಕು ಇರಿದಿರುವ ಬಗ್ಗೆ ಮೂಲಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Where was wife Kareena Kapoor when Saif Ali Khan was stabbed at Mumbai Home

ಇಷ್ಟೆಲ್ಲ ನಡೆಯುವಾಗ ಪತ್ನಿ ಕರೀನಾ ಕಪೂರ್ ಖಾನ್ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆಯುವುದಕ್ಕೆ ಕೆಲವೇ ಗಂಟೆಗಳು ಮುನ್ನ ಕರೀನಾ ಕಪೂರ್ ತಮ್ಮ ಕುಟುಂಬದೊಂದಿಗೆ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೊಗಳನ್ನು ಕರೀನಾ ಶೇರ್ ಮಾಡಿಕೊಂಡಿದ್ದರು.

ಪತಿ ಸೈಫ್ ಅಲಿ ಖಾನ್‌ಗೆ ಚಾಕು ಇರಿಯುವ ಕೆಲವೇ ಗಂಟೆಗಳು ಮುನ್ನ ಕರೀನಾ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಕರೀಷ್ಮಾ ಕಪೂರ್ ಶೇರ್ ಮಾಡಿದ ಫೋಟೊಗಳಲ್ಲಿ ಸೋನಂ ಕಪೂರ್ ಹಾಗೂ ರಿಯಾ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಘಟನೆ ನಡೆಯುವ ವೇಳೆ ಅವರು ಮನೆಯಲ್ಲಿ ಇದ್ದರು ಅನ್ನೋದು ಸದ್ಯಕ್ಕೆ ಅಸ್ಪಷ್ಟವಾಗಿದೆ. ಮೂಲಗಳ ಪ್ರಕಾರ ಕರೀನಾ ಕಪೂರ್ ಬುಧವಾರ ರಾತ್ರಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು.

ಇಂದು (ಜನವರಿ 16) ಬೆಳಗ್ಗೆ 4 ಗಂಟೆ ಸುಮಾರಿಗೆ ಕಳ್ಳತನಕ್ಕೆ ಮುಂದಾಗಿದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಈ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಅಂತ ಕೆಲವೆಡ ವರದಿಯಾಗಿದೆ. ಮುಂಬೈ ಪೊಲೀಸರು ಹಾಗೂ ಕ್ರೈಂ ಬ್ರ್ಯಾಂಚ್‌ಗೆ ಸಂಬಂಧಿಸಿದ ಅಧಿಕಾರಿಗಳು ಸೈಫ್ ಅಲಿ ಖಾನ್ ನಿವಾಸದಲ್ಲಿ ಇದ್ದು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

"ಅಪರಿಚಿತ ವ್ಯಕ್ತಿಯೊಬ್ಬ ಸೈಫ್ ಅಲಿ ಖಾನ್ ಮನೆಯೊಳಗೆ ನುಗ್ಗಿದ್ದ. ಈ ವೇಳೆ ಸೈಫ್ ಅಲಿ ಖಾನ್ ಹಾಗೂ ಕಳ್ಳನ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸೈಫ್ ಅಲಿ ಖಾನ್‌ಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ತನಿಖೆ ನಡೆಯುತ್ತಿದೆ" ಮುಂಬೈ ಪೊಲೀಸರು ಮಾಧ್ಯಮಗಳಿಗೆ ಈ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇದೇ ವೇಳೆ ಸೈಫ್ ಅಲಿ ಖಾನ್ ಮನೆ ಕೆಲಸದವ ಕಳ್ಳನನ್ನು ಹಿಡಿಯುವುದಕ್ಕೆ ಪ್ರಯತ್ನಕ್ಕೆ ಮುಂದಾದಾಗ ಸೈಫ್ ಅಲಿ ಖಾನ್‌ಗೆ ಎಚ್ಚರ ಆಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೈಪ್ ಅಲಿ ಖಾನ್‌ಗೆ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲೋಕಮತ್ ವರದಿ ಮಾಡಿದೆ. ವೈದ್ಯರು ಸೈಫ್ ಅಲಿ ಖಾನ್‌ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ. ಸುಮಾರು 6 ಕಡೆಗಳಲ್ಲಿ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿಯಲಾಗಿದ್ದು, ಒಂದು ಕಡೆ ಬೆನ್ನು ಹುರಿಗೆ ಸಮೀಪವಿದೆ ಎಂದೂ ಕೂಡ ವರದಿ ಮಾಡಲಾಗಿದೆ. ಆದರೆ, ಇನ್ನೂ ಸೈಫ್‌ಗೆ ಈಗ ಹೇಗಿದ್ದಾರೆ? ಅವರ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಆಸ್ಪತ್ರೆಯ ವೈದ್ಯರು, ಕರೀನಾ ಹಾಗೂ ಅವರ ಕುಟುಂಬದವರು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.

More from Filmibeat

English summary
Where was wife Kareena Kapoor when Saif Ali Khan was stabbed at Mumbai Home?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X