₹30 ಕೋಟಿ ಸಂಭಾವನೆ ಕೇಳುವ ಭಾರತದ ನಟಿ ಯಾರು? ಆಕೆ ಬಳಿಕ ಇರುವ ಆಸ್ತಿ ಎಷ್ಟು?
ಭಾರತೀಯ ಚಿತ್ರರಂಗದಲ್ಲಿ ಹೀರೋ ಹಾಗೂ ಹೀರೋಯಿನ್‌ಗೆ ನೀಡುವ ಸಂಭಾವನೆಯಲ್ಲಿ ತಾರತಮ್ಯ ಆಗುತ್ತಿದೆ. ಹೀರೋಗೆ ಕೊಡುವ ಅರ್ಧದಷ್ಟು ಸಂಭಾವನೆಯನ್ನೂ ಕೊಡುವುದಿಲ್ಲ ಅಂತ ಹಲವು ನಾಯಕಿಯರು ಅಳಲು. ಇಂದಿಗೂ ದಕ್ಷಿಣ ಭಾರತದ ನಟಿಯರು ಇಂತಹದ್ದೊಂದು ಆರೋಪ ಮಾಡುತ್ತಲೇ ಇದ್ದಾರೆ. ಆದರೆ, ಇಲ್ಲೊಬ್ಬ ನಟಿ ಮಾತ್ರ 30 ಕೋಟಿ ರೂಪಾಯಿ ಕೇಳುತ್ತಾರಂತೆ.
ಹೀರೊಯಿನ್‌ಗೆ ಸಂಭಾವನೆ ಸಿಗುವುದು ನಿಜಕ್ಕೂ ಕಡಿಮೆ. ಕನ್ನಡ ಚಿತ್ರರಂಗದಲ್ಲಂತೂ ನಾಯಕಿಯರು ಪಡೆಯುವ ಸಂಭಾವನೆ ತೀರಾ ಕಡಿಮೆ. ಇದೇ ದಶಕಗಳ ಹಿಂದೆ ಮೋಹಕತಾರೆ ರಮ್ಯಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಅನ್ನೋ ಮಾತಿತ್ತು. ಆಗಿನ್ನೂ ಸ್ಯಾಂಡಲ್‌ವುಡ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಹಾಗಿದ್ದರೂ, 30 ಲಕ್ಷ ರೂಪಾಯಿಯಿಂದ 60 ಲಕ್ಷ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಿದ್ದರು. ಅದೇ ಸೂಪರ್‌ಸ್ಟಾರ್‌ಗಳು 3 ರಿಂದ 5 ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಿದ್ದರು.

ಈಗ ಸಿನಿಮಾರಂಗ ಬದಲಾಗಿದೆ. ಕಲಾವಿದರು ಪಡೆಯುವ ಸಂಭಾವನೆ ಕೂಡ ಹೆಚ್ಚಾಗಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಸಿಗುತ್ತಿದೆ. ಅದೇ ಒಂದು ವೇಳೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದರೆ, ಸಂಭಾವನೆ ಗಗನಕ್ಕೇರುತ್ತೆ. ಸದ್ಯ ಬಾಲಿವುಡ್ ನಟಿಯೊಬ್ಬರು ಒಂದು ಸಿನಿಮಾಗೆ 30 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರಂತೆ. ಆ ನಟಿ ಯಾರು ಗೊತ್ತೇ?..
ಬಾಲಿವುಡ್‌ನ ನಿರ್ಮಾಪಕರ ವಲಯದಲ್ಲಿ ಈ ನಟಿಯ ಬಗ್ಗೆನೇ ಚರ್ಚೆ. ಅಂದ್ಹಾಗೆ, ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಮತ್ಯಾರೂ ಅಲ್ಲ ದೀಪಿಕಾ ಪಡುಕೋಣೆ. ಈ ನಟಿಯ ಸಿನಿಮಾಗಳು ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ. ಈ ಕಾರಣಕ್ಕೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಒಂದು ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರಂತೆ.
ಹೃತಿಕ್ ರೋಷನ್ ನಟಿಸಿದ್ದ 'ಫೈಟರ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ದೀಪಿಕಾ ಪಡುಕೋಣೆ ಬರೋಬ್ಬರಿ 15 ಕೋಟಿ ರೂಪಾಯಿಯಿಂದ 20 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಮೂಲಕ ದೀಪಿಕಾ ಪಡುಕೋಣೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದರು.

ದೀಪಿಕಾ ಪಡುಕೋಣೆಯ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಕಲ್ಕಿ 2898 AD'ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಪ್ರಭಾಸ್ ನಟಿಸಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಜೂನ್ 27ಕ್ಕೆ ರಿಲೀಸ್ ಆಗುತ್ತಿದ್ದು, ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಚಿತ್ರಕ್ಕೂ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
'ಕಲ್ಕಿ 2898 AD' ಸಿನಿಮಾಗೆ ದೀಪಿಕಾ ಪಡುಕೋಣೆ 30 ಕೋಟಿ ರೂಪಾಯಿ ಸಂಭಾವನೆ ಪಡೆದಿರಬಹುದೆಂದು ಅಂದಾಜಿಸಲಾಗಿದೆ. 'ಕಲ್ಕಿ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಮೆಗಾ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ರೆಡಿಯಾಗಿರುವ ಸಿನಿಮಾದಲ್ಲಿ ದೀಪಿಕಾ ಪಾತ್ರ ಕುತೂಹಲ ಹುಟ್ಟಿಸಿದೆ.


Click it and Unblock the Notifications











