National Film Awards 2021: ಅತೀ ಹೆಚ್ಚು ರಾಷ್ಟ್ರ ಪ್ರಶಸ್ತಿ ಬಾಚಿಕೊಂಡ ಸಿನಿಮಾಗಳು ಯಾವುವು ಗೊತ್ತೇ?
ಇಂದು(ಆಗಸ್ಟ್ 24) 2021ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದ ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಉತ್ತರ ಭಾರತದ ಸಿನಿಮಾಗಳು ಹಾಗೂ ದಕ್ಷಿಣ ಭಾರತದ ಸಿನಿಮಾ ನಡುವೆ ಪೈಪೋಟಿ ಇತ್ತು. ಈಗ ರಾಷ್ಟ್ರ ಪ್ರಶಸ್ತಿಯಲ್ಲೂ ಆ ಪೈಪೋಟಿನೇ ಕಾಣಿಸುತ್ತಿದೆ. ಹಾಗೇ ಬಾಲಿವುಡ್ ಸಿನಿಮಾ ಮತ್ತು ಪ್ರಾದೇಶಿಕ ಸಿನಿಮಾಗಳ ವಿಭಾಗದಲ್ಲೂ ಸ್ಪರ್ಧೆ ಏರ್ಪಟ್ಟಿತ್ತು.

ಕೋವಿಡ್ 19 ಬಳಿಕ ಸಿನಿಮಾಗಳು ನಿಧಾನವಾಗಿ ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದವು. ಇದೇ ಸಂದರ್ಭದಲ್ಲಿ ಕೆಲವು ಸಿನಿಮಾಗಳು ಮಾತ್ರ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡಿದ್ದವು. ಮತ್ತೆ ಜನರನ್ನು ಚಿತ್ರಮಂದಿಗೆ ಕರೆತರುವಲ್ಲಿ ಯಶಸ್ವಿ ಆದವು. ಸುಮಾರು 20 ಭಾಷೆಯಿಂದ 280 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಇಂದು (ಆಗಸ್ಟ್ 24) ರಿಲೀಸ್ ಪಟ್ಟಿಯಲ್ಲಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಸಿನಿಮಾಗಳು ಪಟ್ಟಿ ಇಲ್ಲಿದೆ.
ರಾಜಮೌಳಿಯ 'RRR'ಗೆ 5 ಪ್ರಶಸ್ತಿ
ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು RRR ಸಿನಿಮಾ ಗಮನ ಸೆಳೆದಿತ್ತು. ಹಾಗೇ 2021ನೇ ಸಾಲಿನಲ್ಲಿ ಅತೀ ಹೆಚ್ಚು ರಾಷ್ಟ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸುಮಾರು ಐದು ಪ್ರಶಸ್ತಿಗಳನ್ನು ವಿವಿಧ ವಿಭಾಗದಲ್ಲಿ ಗಿಟ್ಟಿಸಿಕೊಂಡಿದ್ದಾರೆ. ಆ ಐದು ವಿಭಾಗದಲ್ಲಿ ಗೆದ್ದ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.

'RRR' ರಾಷ್ಟ್ರ ಪ್ರಶಸ್ತಿಗಳ ಪಟ್ಟಿ
ಸಾಹಸ ನಿರ್ದೇಶನ: ಕಿಂಗ್ ಸೋಲೊಮನ್
ನೃತ್ಯ ನಿರ್ದೇಶನ: ಪ್ರೇಮ್ ರಕ್ಷಿತ್
ಸ್ಪೆಷಲ್ ಎಫೆಕ್ಟ್ಸ್: ವಿ. ಶ್ರೀನಿವಾಸ್ ಮೋಹನ್
ಹಿನ್ನೆಲೆ ಸಂಗೀತ: ಎಂ ಎಂ ಕೀರವಾಣಿ
ಹಿನ್ನೆಲೆ ಗಾಯಕ: ಕಾಲ ಭೈರವ
'ಗಂಗೂಬಾಯಿ ಕಾಠಿಯಾವಾಡಿ'
ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ಕಾಂಬಿನೇಷನ್‌ನ ಮೊದಲ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ'. ಈ ಸಿನಿಮಾ ಕೂಡ 2021ನೇ ಸಾಲಿನ ಐದು ವಿಭಿನ್ನ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. 'ಗಂಗೂಬಾಯಿ ಕಾಠಿಯಾವಾಡಿ' ಕೂಡ ಹಲವು ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ನಿರೀಕ್ಷೆಯನ್ನು ಮಾಡಲಾಗಿತ್ತು. ಅದರಂತೆ 5 ಪ್ರಶಸ್ತಿ ಗೆದ್ದಿದೆ.

'ಗಂಗೂಬಾಯಿ ಕಾಠಿಯಾವಾಡಿ ಪ್ರಶಸ್ತಿ ಪಟ್ಟಿ
ಅತ್ಯುತ್ತಮ ಮೇಕಪ್: ಪ್ರೀತಿ ಶೀಲ್ ಸಿಂಗ್ ಡಿಸೋಜಾ
ಅತ್ಯುತ್ತಮ ಸಂಕಲನ: ಸಂಜಯ್ ಲೀಲಾ ಬನ್ಸಾಲಿ
ಅತ್ಯುತ್ತಮ ಚಿತ್ರಕಥೆ: ಸಂಜಯ್ ಲೀಲಾ ಬನ್ಸಾಲಿ
ಅತ್ಯುತ್ತಮ ಡೈಲಾಗ್: ಉತ್ಕರ್ಷಿಣಿ ವಸಿಷ್ಠ, ಪ್ರಕಾಶ್ ಕಪಾಡಿಯಾ
ಅತ್ಯುತ್ತಮ ನಟಿ: ಆಲಿಯಾ ಭಟ್
'ಸರ್ದಾರ್ ಉದಮ್'
ವಿಕ್ಕಿ ಕೌಶಲ್ ಅಭಿನಯದ 'ಸರ್ದಾರ್ ಉದಮ್' ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ದೇಶ ಭಕ್ತಿ ಸಾರುವ ಸಿನಿಮಾವನ್ನು ಸಿನಿಪ್ರಿಯರು ಇಷ್ಟ ಪಟ್ಟಿದ್ದರು. ಈ ಸಿನಿಮಾ ಸುಮಾರು ಐದು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿದೆ.
'ಸರ್ದಾರ್ ಉದಮ್' ಪ್ರಶಸ್ತಿ ಪಟ್ಟಿ
ಅತ್ಯುತ್ತಮ ಹಿಂದಿ ಸಿನಿಮಾ
ಅತ್ಯುತ್ತಮ ವಸ್ತ್ರ : ವಿನ್ಯಾಸ ವೀರ ಕಪೂರ್ ಈ
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಡಿಮಿಟ್ರಿ ಮಲಿಚ್, ಮಾನ್ಸಿ ಧ್ರುವ್
ಅತ್ಯುತ್ತಮ ರೀ ರೆಕಾರ್ಡಿಂಗ್: ಸಿನೋಯ್ ಜೋಸೆಫ್
ಅತ್ಯುತ್ತಮ ಛಾಯಾಗ್ರಹಣ: ಅವಿಕ್ ಮುಖ್ಯೋಪಾಧ್ಯಯ


Click it and Unblock the Notifications











