ಆಮಿರ್ ಖಾನ್ ಹೊಸ ಸಂಗಾತಿ ಗೌರಿ ಹಿನ್ನೆಲೆ ಏನು? ಬೆಂಗಳೂರಿಗೂ ಆಕೆಗೂ ಇರುವ ಸಂಬಂಧ ಏನು?
ಆಮಿರ್ ಖಾನ್ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್. ಅದು ಸಿನಿಮಾಗಳ ವಿಚಾರಕ್ಕೆ ಅಷ್ಟೇನಾ? ಈ ಪ್ರಶ್ನೆ ಸಹಜ. ಯಾಕಂದ್ರೆ ಈ ಸೂಪರ್‌ಸ್ಟಾರ್ ಕೌಟುಂಬಿಕ ಜೀವನದಲ್ಲಿ ಎಡವಿದ್ದಾರೆ. ಎರಡೆರಡು ಬಾರಿ ಸಾಂಸಾರಿಕ ಜೀವನದಿಂದ ಹೊರ ಬಂದಿದ್ದಾರೆ. ಕೌಟುಂಬಿಕ ಜೀವನವನ್ನು ಮುರಿದುಕೊಂಡಿದ್ದಾರೆ. ಹೀಗಾಗಿ ಪರ್ಫೆಕ್ಷನಿಸ್ಟ್ ಅನ್ನೋ ಪದ ಅವರ ವೃತ್ತಿ ಬದುಕಿಗೆ ಅಷ್ಟೇ ಸೀಮಿತ ಅನಿಸುತ್ತಿದೆ.
ತಮ್ಮ 60ನೇ ಹುಟ್ಟುಹಬ್ಬದಲ್ಲಿ ಹೊಸ ಸಂಗಾತಿಯನ್ನು ಪರಿಚಯಿಸಿದ್ದಾರೆ. ಬೆಂಗಳೂರು ಮೂಲದ ಗೌರಿ ಸ್ಟ್ರಾಟ್ ಎಂಬುವವರು ಆಮಿರ್ ಖಾನ್ ಅವರ ಹೊಸ ಸಂಗಾತಿ. ಕಳೆದ ಒಂದು ಒಂದೂವರೆ ವರ್ಷದಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಆಮಿರ್ ಖಾನ್ ಈ ವಿಷಯವನ್ನು ಮಾಧ್ಯಮಗಳ ಮುಂದೆ ಅಧಿಕೃತವಾಗಿ ರಿವೀಲ್ ಮಾಡಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಗೌರಿ ಯಾರು? ಹಿನ್ನೆಲೆ, ತಂದೆತಾಯಿ, ಶಿಕ್ಷಣದ ಬಗ್ಗೆ ಹುಡುಕಾಟ ಶುರುವಾಗಿದೆ.

ನೆಟ್ಟಿಗರಂತೂ ಹೊರಬಿದ್ದಿರೋ ಒಂದೆರಡು ಫೋಟೊಗಳನ್ನು ನೋಡಿ ಗೌರಿಯ ಸೌಂದರ್ಯಕ್ಕೆ ಮಾರು ಹೋಗಿತ್ತಿದ್ದಾರೆ. ಹಾಲಿವುಡ್ ನಟಿಯೊಂದಿಗೆ ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿಯೊಂದಿಗೆ ಹೋಲಿಕೆ ಮಾಡುವುದಕ್ಕೂ ಶುರು ಮಾಡಿದ್ದಾರೆ. ಅಷ್ಟಕ್ಕೂ ಗೌರಿ ಸ್ಟ್ರಾಟ್ ಯಾರು? ಬೆಂಗಳೂರಿಗೂ ಈಕೆಗೂ ಏನು ಸಂಬಂಧ? ಈಕೆಯ ಶಿಕ್ಷಣ ಏನು? ಏನು ಬ್ಯುಸಿನೆಸ್ ಮಾಡುತ್ತಾರೆ? ಇಂತಹ ಒಂದಿಷ್ಟು ವಿಷಯಗಳು ಇಲ್ಲಿವೆ.
ಆಮಿರ್ ಖಾನ್ ಸಂಗಾತಿ ಗೌರಿ ಹಿನ್ನೆಲೆ ಏನು?
60ನೇ ಬರ್ತ್‌ಡೇಗೆ ಆಮಿರ್ ಖಾನ್ ಪರಿಚಯಿಸಿದ ಮೂರನೇ ಸಂಗಾತಿ ಗೌರಿ ಸ್ಪ್ರಾಟ್ ಬೆಂಗಳೂರಿನವರು. ಹಾಗಂತ ಬೆಂಗಳೂರು ಮೂಲದವರು ಅನ್ನುವುದಕ್ಕೆ ಆಗಲ್ಲ. ಇವರ ತಾಯಿ ರಿಟಾ ಸ್ಪ್ರಾಟ್ ತಮಿಳುನಾಡು ಮೂಲದವರು. ತಂದೆಯ ಮೂಲ ಐರಿಶ್. ಆದರೆ, ಇವರ ಕುಟುಂಬ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ತಮ್ಮದೇ ಬ್ಯುಸಿನೆಸ್ ಅನ್ನು ಸೆಟಪ್ ಮಾಡಿದೆ. ಹೀಗಾಗಿ ಬೆಂಗಳೂರು ಗೌರಿ ಚಿರಪರಿಚಿತ.

ಗೌರಿ ಉದ್ಯಮಿಯೂ ಹೌದು
ಅಮಿರ್ ಖಾನ್ ಹೊಸ ಸಂಗಾತಿ ಗೌರಿ ಉದ್ಯಮಿ ಕೂಡ ಹೌದು ಎನ್ನಲಾಗಿದೆ. ಗೌರಿಯ ತಾಯಿ ರಿಟಾ ಸ್ಪ್ರಾಟ್ ಬೆಂಗಳೂರಿನಲ್ಲಿ ಸಲೂನ್ ಬ್ರ್ಯಾಂಡ್‌ನ ಓನರ್ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇನ್ನು ಗೌರಿಯ ಲಿಂಕ್ಡ್‌ಇನ್ ಪ್ರೋಫೈಲ್‌ನಲ್ಲಿ ಬಿಬ್ಲಂಟ್ ಅನ್ನುವ ಸಲೂನ್‌ನ ಪಾರ್ಟ್ನರ್ ಎಂದು ಹೇಳಿಕೊಂಡಿದ್ದಾರೆ. ಈ ಬ್ರ್ಯಾಂಡ್ ಸದ್ಯ ಮುಂಬೈನಲ್ಲಿ ಇದೆ ಎನ್ನಲಾಗಿದೆ. ಇನ್ನು ಗೌರಿ ಪ್ರಾಥಮಿಕ ಶಿಕ್ಷಣ ತಮಿಳುನಾಡಿನ ಬ್ಲೂ ಮೌಂಟೇನ್ ಶಾಲೆಯಲ್ಲಿ ಮುಗಿಸಿದ್ದಾರೆ. ಆ ಬಳಿಕ ಲಂಡನ್‌ನ ಕಲಾ ವಿಶ್ವವಿದ್ಯಾಲಯದಲ್ಲಿ ಫ್ಯಾಷನ್ ಸ್ಟೈಲಿಂಗ್ ಮತ್ತು ಫೋಟೋಗ್ರಫಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ಆಮಿರ್ ಖಾನ್ ಕಂಪನಿಯಲ್ಲಿ ಕೆಲಸ
ಗೌರಿ 25 ವರ್ಷಗಳಿಂದ ಪರಿಚಯ ಎಂದು ಸ್ವತ: ಆಮಿರ್ ಖಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಮಧ್ಯದಲ್ಲಿ ಸಂಪರ್ಕ ಬಿಟ್ಟು ಹೋಗಿತ್ತು. ಕಳೆದ ಒಂದೂವರೆ ವರ್ಷದಿಂದ ಇಬ್ಬರಲ್ಲೂ ಪ್ರೀತಿ ಚಿಗುರಿದ್ದು, ಈಗ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ. ಸದ್ಯ ಆಮಿರ್ ಖಾನ್ ಪ್ರೊಡಕ್ಷನ್ ಹೌಸ್‌ನಲ್ಲಿ ಗೌರಿ ಕೆಲಸ ಮಾಡುತ್ತಿದ್ದಾರೆ. ಆಮಿರ್ ಖಾನ್ ನಿರ್ಮಾಣದ ಸಿನಿಮಾಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗೌರಿಯೊಂದಿಗೆ ಬದುಕನ್ನು ಕಟ್ಟಿಕೊಳ್ಳುವ ಉತ್ಸಾಹದಲ್ಲಿ ಆಮಿರ್ ಇದ್ದಾರೆ.
ಹಾಲಿವುಡ್ ನಟಿಗೆ ಹೋಲಿಸಿದ ನೆಟ್ಟಿಗರು
ಆಮಿರ್ ಖಾನ್ ತಮ್ಮ ಹೊಸ ಸಂಗಾತಿಯನ್ನು ಪರಿಚಯಿಸಿದ್ದಾರೆ. ಇದರೊಂದಿಗೆ ಗೌರಿಯ ಫೋಟೊಗಳನ್ನು ರಿವೀಲ್ ಮಾಡದಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಇದರ ಹೊರತಾಗಿಯೂ ನೆಟ್ಟಿಗರು ಗೌರಿ ಪೋಟೊವನ್ನು ಹುಡುಕಿ ತೆಗೆದಿದ್ದು, ಹಾಲಿವುಡ್ ನಟಿ ಕೇಟ್ ಹೋಮ್ಸ್ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸಂಕೋವಿಚ್ ಅವರನ್ನು ನೋಡದಂತೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು 60ನೇ ವಯಸ್ಸಿನಲ್ಲಿ ಸೌಂದರ್ಯದ ಗಣಿಯನ್ನು ಪಡ್ಕೊಂಡಿದ್ದಾರೆ ಅಂತಾನೂ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











