Ileana D’Cruz: ಇಲಿಯಾನಾಳ ಸೀಕ್ರೆಟ್ ಗಂಡ ಮೈಕಲ್ ಡೋಲನ್ ಯಾರು? ಇಬ್ಬರೂ ಮದುವೆ ಆಗಿದ್ಯಾವಾಗ?

ಗೋವಾ ಬ್ಯೂಟಿ ಇಲಿಯಾನಾ ಡಿ'ಕ್ರೂಸ್ ಗರ್ಭಿಣಿಯಾಗಿದ್ದು, ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು ಎಲ್ಲವೂ ಸಂಚನ ಸೃಷ್ಟಿಸಿದೆ. ಇದೇ ಆಗಸ್ಟ್ 1ರಂದು ಇಲಿಯಾನಾ ಹಾಗೂ ಆಕೆಯ ಸೀಕ್ರೆಟ್ ಬಾಯ್‌ಫ್ರೆಂಡ್ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇಲಿಯಾನಾಗೆ ಗಂಡು ಮಗು ಜನಿಸಿದ್ದಷ್ಟೇ ಅಲ್ಲ. ಮಗುವಿಗೆ ಕೋವಾ ಫೀನಕ್ಸ್ ಡೋಲನ್ ಅಂತ ಹೆಸರಿಟ್ಟಿರೋ ವಿಷಯ ಕಾಡ್ಗಿಚ್ಚಿನಂತೆ ಹರಡಿತ್ತು. ಈ ಬೆನ್ನಲ್ಲೇ ಮಾಧ್ಯಮಗಳು ಡೋಲನ್ ಯಾರು? ಅನ್ನೋದನ್ನು ಜಾಲಾಡುವುದಕ್ಕೆ ಶುರು ಮಾಡಿತ್ತು. ಅದರಲ್ಲೂ ಬಾಲಿವುಡ್ ಮಂದಿಗೆ ಈ ಬಗ್ಗೆ ಸಾಕಷ್ಟು ಕುತೂಹಲವಿತ್ತು.

Viral; Who is Ileana D’Cruz husband Michael Dolan

ಗೋವಾ ಬ್ಯೂಟಿ ಇಲಿಯಾನಾ ಮಗುವಿನ ಫೋಟೊವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಇದೂವರೆಗೂ ರಹಸ್ಯವಾಗಿಟ್ಟಿದ್ದ ಪತಿಯ ಹೆಸರನ್ನು ಕೆಲವು ಮಾಧ್ಯಮಗಳು ಬಹಿರಂಗಪಡಿಸಿವೆ. ಇಷ್ಟೇ ಅಲ್ಲದೆ. ಇಲಿಯಾನಾ ಈಗಾಗಲೇ ತನ್ನ ಬಾಯ್‌ಫ್ರೆಂಡ್ ಜೊತೆ ಮದುವೆಯಾಗಿದ್ದಾರೆ ಎಂದೂ ವರದಿ ಮಾಡಲಾಗಿದೆ. ಅಸಲಿಗೆ ಆ ಮಿಸ್ಟರಿ ಮ್ಯಾನ್ ಅನ್ನೋದಕ್ಕೆ ಚಿಕ್ಕದೊಂದು ಸುಳಿವು ಸಿಕ್ಕಿದೆ.

ಇಲಿಯಾನಾ ಪತಿ ಯಾರು?

ಇಲಿಯಾನಾ ತಾನು ಗರ್ಭಿಣಿಯಾಗಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಷ್ಟೇ. ಆದರೆ, ಮಗುವಿನ ತಂದೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ, ಮದುವೆ ಆಗಿರುವ ಬಗ್ಗೆನೂ ಸುಳಿವು ನೀಡಿರಲಿಲ್ಲ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಕೆಲವರು ಇಲಿಯಾನಾಗೆ ಟ್ರೋಲ್ ಕೂಡ ಮಾಡಿದ್ದರು. ಈ ಬಗ್ಗೆ ಸಾವಿರಾರು ಕಮೆಂಟ್‌ಗಳನ್ನು ಮಾಡಿದ್ದರು. ಆದರೂ, ಇಲಿಯಾನಾ ಮಗುವಿನ ತಂದೆ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಇಲಿಯಾನಾ ಪತಿಯ ಹೆಸರು ಮೈಕಲ್ ಡೋಲನ್ ಎಂದು ತಿಳಿದು ಬಂದಿದೆ.

ಡೋಲನ್ ಹಿನ್ನೆಲೆಯೇನು? ಮದುವೆ ಆಗಿದ್ಯಾವಾಗ?

ಡಿಎನ್‌ಎ ವರದಿ ಮಾಡಿರುವ ಪ್ರಕಾರ, ಇಲಿಯಾನಾಳ ಪತಿಯ ಹೆಸರು ಮೈಕಲ್ ಡೋಲನ್. ಆದರೆ, ಈ ಮಿಸ್ಟರಿ ಮ್ಯಾನ್‌ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಯಾರು? ಯಾವ ದೇಶ? ಇಬ್ಬರ ಪರಿಚಯ ಆಗಿದ್ದು ಹೇಗೆ ಇಂತಹದ್ದೇ ವಿಷಯಗಳ ಬಗ್ಗೆ ಮಾಹಿತಿ ಇಲ್ಲ. ಆದರೆ, ಇಲಿಯಾನಾ ಹಾಗೂ ಮೈಕಲ್ ಡೋಲನ್ ಇಬ್ಬರೂ ಮೇ 13 ರಂದು ಮದುವೆ ಆಗಿದ್ದಾರೆ. ಒಂದು ವರ್ಷದಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದು, ಇಲಿಯಾನಾ ಪ್ರೆಗ್ನೆನ್ಸಿ ಬಗ್ಗೆ ಹೇಳಿಕೊಳ್ಳುವ ನಾಲ್ಕು ವಾರಗಳ ಹಿಂದಷ್ಟೇ ಮದುವೆ ಆಗಿದ್ದಾರೆ ಎನ್ನಲಾಗಿದೆ.

Viral; Who is Ileana D’Cruz husband Michael Dolan

ಚಿಕ್ಕದೊಂದು ಸುಳಿವು ಕೊಟ್ಟಿದ್ದ ಇಲಿಯಾನಾ

ಇಲಿಯಾನಾ ಆಗಾಗ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಡುತ್ತಿದ್ದಾರೆ. ಮಗುವಿನ ಜನ್ಮ ನೀಡುವ ಕೆಲವೇ ದಿನಗಳ ಹಿಂದಷ್ಟೇ ಇಲಿಯಾನಾ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಬಾಯ್‌ಫ್ರೆಂಡ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಅದು ಬಿಟ್ಟರೆ, ಮಗುವಿನ ಫೋಟೊ ಜೊತೆ ಹೆಸರನ್ನು ಶೇರ್ ಮಾಡಿಕೊಳ್ಳುವಾಗ ಸರ್‌ ನೇಮ್ ಅನ್ನು ರಿವೀಲ್ ಮಾಡಿದ್ದಾರೆ. ಇದೇ ಜಾಡನ್ನು ಹಿಡಿದು ಮದುವೆವರೆಗೂ ಮಾಹಿತಿ ಕಲೆ ಹಾಕಿವೆ.

'ಕೋವಾ ಫಿನಿಕ್ಸ್ ಡೋಲನ್' ಹೆಸರಿನ ಅರ್ಥವೇನು?

ಇಲಿಯಾನಾ ಡಿ'ಕ್ರೂಸ್ ತನ್ನ ಗಂಡುವಿಗೆ 'ಕೋವಾ ಫಿನಿಕ್ಸ್ ಡೋಲನ್' ಅಂತ ಹೆಸರಿಟ್ಟಿದ್ದಾರೆ. ಈ ಹೆಸರಿನ ಅರ್ಥವನ್ನೂ ಹುಡುಕಲಾಗಿದೆ. ಇಲಿಯಾನ ಮಗುವಿನ ಮೊದಲ ಹೆಸರು 'ಕೋವಾ' ಅಂದರೆ, ಯೋಧ, ವೀರ ಎಂಬ ಅರ್ಥವನ್ನು ಕೊಡುತ್ತೆ ಎಂದು ಹೇಳಲಾಗಿದೆ. ಇನ್ನೊಂದು ಅರ್ಥದಲ್ಲಿ " ಭಯ ಇಲ್ಲದವನು" ಎಂಬ ಅರ್ಥವನ್ನು ಕೊಡುತ್ತದೆ ಎಂದು ವರದಿಯಾಗಿದೆ.

More from Filmibeat

English summary
Who is Ileana D’Cruz husband Michael Dolan discussion around social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X