ಹಾರ್ದಿಕ್ ಪಾಂಡ್ಯ ಜೊತೆ ತಳುಕು ಹಾಕೊಂಡಿರೋ ಜಾಸ್ಮಿನ್ ವಾಲಿಯಾ ಯಾರು? ಗ್ರೀಸ್ ಹೋಟೆಲ್‌ನಲ್ಲಿ ಇಬ್ಬರೂ ಜೊತೆಗಿದ್ದರೇ?
ಭಾರತದ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಹೆಸರು ವಿಚ್ಛೇದನದ ಬಳಿಕ ಹೆಚ್ಚು ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಬಾಲಿವುಡ್ ನಟಿಯರಿಂದ ಹಿಡಿದು ಈಗ ಬ್ರಿಟಿಷ್ ಗಾಯಕಿಯವರೆಗೂ ಇವರ ಹೆಸರು ತಳಕು ಹಾಕಿಕೊಳ್ಳುತ್ತಿದೆ. ಸದ್ಯ ಗಾಯಕಿಯೊಬ್ಬರ ಜೊತೆ ಹಾರ್ದಿಕ್ ಪಾಂಡ್ಯ ಗ್ರೀಸ್‌ನ ಹೋಟೆಲ್ ಒಂದರಲ್ಲಿ ತಂಗಿದ್ದರು ಅನ್ನೋ ಮಾತು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಅಂದ್ಹಾಗೆ ಹಾರ್ದಿಕ್ ಪಾಂಡ್ಯ ಜೊತೆ ತಳುಕು ಹಾಕಿಕೊಂಡಿರುವ ಆ ಗಾಯಕಿಯೇ ಜಾಸ್ಮಿನ್ ವಾಲಿಯಾ. ಈಕೆ ಬ್ರಿಟನ್‌ನ ಗಾಯಕಿ ಹಾಗೂ ಟಿವಿ ಶೋಗಳ ನಿರೂಪಕಿ ಕೂಡ ಹೌದು. ಸದ್ಯ ಜಾಸ್ಮಿನ್ ವಾಲಿಯಾ ಮ್ಯೂಸಿಕ್ ಇಂಡಸ್ಟ್ರಿ ಹಾಗೂ ಸೋಶಿಯಲ್ ಮೀಡಿಯಾ ಎರಡರಲ್ಲೂ ಮಿಂಚುತ್ತಿದ್ದಾರೆ. ಇದೇ ಜಾಸ್ಮಿನ್ ವಾಲಿಯಾ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದು ಹರಿದಾಡುತ್ತಿದೆ.

ಭಾರತದ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಜಾಸ್ಮಿನ್ ವಾಲಿಯಾ ಇಬ್ಬರೂ ಒಟ್ಟಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಗ್ರೀಸ್‌ನ ಐಷಾರಾಮಿ ಹೋಟೆಲ್‌ನಲ್ಲಿ ಈ ಜೋಡಿ ಒಟ್ಟಿಗೆ ಉಳಿದುಕೊಂಡಿತ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಜಾಸ್ಮಿನ್ ವಾಲಿಯಾ ವೃತ್ತಿ ಬದುಕನ್ನು ಬಿಟ್ಟು, ಆಕೆಯ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ..
ಜಾಸ್ಮಿನ್ ವಾಲಿಯಾ ಹುಟ್ಟಿದ್ದು ಇಂಗ್ಲೆಂಡ್‌ನ ಎಸ್ಸೆಕ್ಸ್ ನಗರದಲ್ಲಿ. ಈಕೆಯ ಪೋಷಕರು ಭಾರತೀಯ ಮೂಲದವರು. ಇಂಗ್ಲೆಂಡ್ ಬಂದು ನೆಲೆಸಿದ್ದಾರೆ. ಜಾಸ್ಮಿನ್ ವಾಲಿಯಾ ಬ್ರಿಟಿಷ್ ಟಿವಿ ರಿಯಾಲಿಟಿ ಸೀರಿಸ್ 'ದಿ ಒನ್ಲಿ ವೇ ಎಸ್ಸೆಕ್ಸ್' ನಲ್ಲಿ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಬದಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆದರೆ, ಬಹುಬೇಗನೇ ಕಿರುತೆರೆ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ರಿಯಾಲಿಟಿ ಶೋ ಆರಂಭ ಆದ ಎರಡೇ ವರ್ಷಗಳಲ್ಲಿ ಪೂರ್ಣ ಪ್ರಮಾಣದ ಸ್ಟಾರ್ ಕಾಸ್ಟ್ ಜೊತೆ ಕಾಣಿಸಿಕೊಳ್ಳಲು ಆರಂಭಿಸಿದ್ದರು.

ರಿಯಾಲಿಟಿ ಶೋನಲ್ಲಿ ಜಾಸ್ಮಿನ್ ವಾಲಿಯಾಗೆ ಒಳ್ಳೆಯ ಹೆಸರು ಬರುವುದಕ್ಕೆ ಶುರುವಾಗಿತ್ತು. ಆ ನಂತರ ಜಾಸ್ಮಿನ್ ತನ್ನ ಮ್ಯೂಸಿಕ್ ಕರಿಯರ್ ಕಡೆಗೆ ಹೆಚ್ಚಯ ಗಮನ ಹರಿಸಿದ್ದರು. ಹೀಗಾಗಿ 2014ರಲ್ಲಿ ಜಾಸ್ಮಿನ್ ವಾಲಿಯಾ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಇದರಲ್ಲಿ ಜನಪ್ರಿಯ ಹಾಡುಗಳನ್ನು ಹಾಡು ಅಪ್ಲೋಡ್ ಮಾಡುವುದಕ್ಕೆ ಶುರು ಮಾಡಿದ್ದರು. ನಿಧಾನಕ್ಕೆ ಈಕೆಯ ಹಾಡುಗಳು ಸಂಗೀತ ಪ್ರಿಯರ ಗಮನ ಸೆಳೆಯುವುದಕ್ಕೆ ಶುರು ಮಾಡಿತ್ತು.
ಈಕೆಯ ಹಾಡುಗಳನ್ನು ಜನರು ಇಷ್ಟ ಪಡುವುದಕ್ಕೆ ಶುರು ಮಾಡುತ್ತಿದ್ದಂತೆ ಗಾಯಕ ಜಾಕ್ ನೈಟ್ ಜೊತೆ ಸೇರಿಕೊಂಡು ಹಾಡುವುದಕ್ಕೆ ಆರಂಭಿಸಿದ್ದರು. 2017ರಲ್ಲಿ "ಬೊಮ್ ಡಿಗ್ಗಿ" ಅನ್ನುವ ಹಾಡನ್ನು ರಿಲೀಸ್ ಮಾಡಲಾಗಿತ್ತು. ಇದು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಇದೇ ಹಾಡನ್ನು ಬಾಲಿವುಡ್ ಸಿನಿಮಾ 'ಸೋನು ಕಿ ಟಿಟ್ಟು ಕಿ ಸ್ವೀಟಿ' ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಜಾಸ್ಮಿನ್ ವಾಲಿಯಾ ಕೇವಲ ಗಾಯಕಿ ಅಷ್ಟೇ ಅಲ್ಲ. ಈಗ ಸೋಶಿಯಲ್ ಮೀಡಿಯಾ ಸ್ಟಾರ್. ಈಕೆಯ ಇನ್‌ಸ್ಟಾಗ್ರಾಂನಲ್ಲಿ ಸುಮಾರು 5.7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ತನ್ನ ಇನ್‌ಸ್ಟಾಗ್ರಾಂನಲ್ಲಿ ಬೋಲ್ಡ್ ಫೋಟೊಗಳನ್ನು ಹಂಚಿಕೊಂಡು ಸುದ್ದಿಯಲ್ಲಿ ಇರುತ್ತಾರೆ. ಈಗ ಭಾರತೀಯ ಕ್ರಿಕೆಟ್ ಆಟಗಾರನ ಜೊತೆ ಗ್ರೀಸ್ ಹೋಟೆಲ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿ ಇದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದು, ನೆಟ್ಟಿಗರು ಡೇಟಿಂಗ್ ಮಾಡುತ್ತಿದ್ದಾರೆಂದು ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications











