ಭಗ್ನಪ್ರೇಮಿ ಯುಜ್ವೇಂದ್ರ ಚಹಲ್‌ಗೆ ಸಿಕ್ಕಿದಳೇ ಹೊಸ ಗೆಳತಿ? ಯಾರಿದು ಆರ್‌ಜೆ ಮಹ್ವಾಶ್?

ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್‌ ಹಾಗೂ ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಚಹಲ್ ಅಭಿಮಾನಿಗಳು ಕ್ರಿಕೆಟಿಗನ ದಾಂಪತ್ಯದಲ್ಲಿ ಎದುರಾದ ಬಿರುಗಾಳಿ ಬಗ್ಗೆ ಮರುಕ ವ್ಯಕ್ತಪಡಿಸಿದ್ದರು. ವಿಚ್ಛೇದನ, ಕೋರ್ಟ್, ಕಚೇರಿ ಅದರಲ್ಲಿ ಮುಳುಗಿರುವಾಗಲೇ ಯುಜುವೇಂದ್ರ ಚಹಲ್ ಜೊತೆ ಯುವತಿಯೊಬ್ಬಳು ದುಬೈನಲ್ಲಿ ಚಾಂಪಿಯನ್ಸ್ ಟ್ರೋಪಿ 2025 ವೇಳೆ ಕಾಣಿಸಿಕೊಂಡಿದ್ದಾರೆ.

ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಫೈನಲ್‌ಗೆ ಭಾರತ ತಂಡವನ್ನು ಬೆಂಬಲಿಸುವುದಕ್ಕೆ ಯುಜುವೇಂದ್ರ ಚಹಲ್ ಆಗಮಿಸಿದ್ದರು. ಈ ವೇಳೆ ಗ್ಯಾಲರಿಯಲ್ಲಿ ಚಹಲ್ ಜೊತೆಯಲ್ಲಿ ಯುವತಿಯೊಬ್ಬಳು ಕಾಣಿಸಿಕೊಂಡಿದ್ದರು. ಹಲವು ಬಾರಿ ಇವರಿಬ್ಬರ ಕಡೆ ಕ್ಯಾಮರಾ ಫೋಕಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಹಲ್ ಹೊಸ ಗರ್ಲ್‌ಫ್ರೆಂಡ್ ಅಂತ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

Who is RJ Mahvash Spotted with Yuzvendra Chahal in the Champions Trophy 2025 final

ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಇದೆಲ್ಲ ನಡೆದು ಒಂದು ತಿಂಗಳು ಅಂತರದಲ್ಲಿ ಯುಜ್ವೇಂದ್ರ ಚಹಲ್ ಜೊತೆ ಹೊಸ ಹುಡುಗಿ ಪ್ರತ್ಯಕ್ಷ ಆಗಿದ್ದಾಳೆ. ಆಕೆಗೆ ಸಿನಿಮಾರಂಗದೊಂದಿಗೆ ನಂಟಿದೆ. ಹಾಗಿದ್ದರೆ, ಚಹಲ್‌ಗೆ ಹೊಸ ಗೆಳತಿ ಸಿಕ್ಕಿದಳೇ? ಚಹಲ್ ಜೊತೆ ಕಾಣಿಸಿಕೊಂಡ ಯುವತಿ ಯಾರು? ಇದೆಲ್ಲವನ್ನು ತಿಳಿಯುವುದಕ್ಕೆ ಮುಂದೆ ಓದಿ.

ಚಾಂಪಿಯನ್ಸ್ ಟ್ರೋಫಿ 2025 ಫೈನಲ್‌ನಲ್ಲಿ ಸ್ಪಿನ್ನರ್‌ಗಳ ಬೌಲಿಂಗ್‌ನಿಂದ ಭಾರತಕ್ಕೆ ಗೆಲುವು ಸಿಕ್ಕಿತ್ತು. ಇದೇ ವೇಳೆ ಭಾರತದ ಮತ್ತೊಬ್ಬ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ನೆನಪಿಸಿಕೊಳ್ಳಲಾಗಿತ್ತು. ಆ ಕೂಡಲೇ ಕ್ಯಾಮರಾ ಮ್ಯಾನ್ ಚಹಲ್ ಕೂತಿದ್ದ ಕಡೆಗೆ ಕ್ಯಾಮರಾ ತಿರುಗಿಸಿದ್ದರು. ಆಗ ಚಹಲ್ ಪಕ್ಕದಲ್ಲಿಯೇ ಹೈ ವೋಲ್ಟೇಜ್ ಸ್ಮೈಲ್ ಕೊಡುತ್ತಾ ಚಹಲ್ ಪಕ್ಕದಲ್ಲಿಯೇ ಕೂತಿದ್ದ ಯುವತಿ ಕಾಣಿಸಿಕೊಂಡಿದ್ದಾಳೆ. ಆ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಅವರಿಬ್ಬರ ವಿಡಿಯೋಗಳು ವೈರಲ್ ಆಗುವುದಕ್ಕೆ ಶುರುವಾಗಿವೆ.

ಚಹಲ್ ಪಕ್ಕದಲ್ಲಿ ಕೂತಿದ್ದ ಯುವತಿ ಯಾರು?

ಯುಜ್ವೇಂದ್ರ ಚಹಲ್ ಪಕ್ಕದಲ್ಲಿ ಕೂತಿದ್ದ ಯುವತಿಯ ಹೆಸರು ಆರ್‌ಜೆ ಮಹ್ವಾಶ್. ಕೆಲವೆಡೆ ಈಕೆ ವೃತ್ತಿಯಲ್ಲಿ ಆರ್‌ಜೆ ಎಂದು ವರದಿಯಾಗಿದೆ. ಆದರೆ, ಈಕೆ ಸಿನಿಮಾರಂಗದೊಂದಿಗೂ ಗುರುತಿಸಿಕೊಂಡಿದ್ದಾರೆ. ನಟಿಯಾಗಿ, ನಿರ್ಮಾಪಕಿಯಾಗಿ ಆರ್‌ಜೆ ಮಹ್ವಾಶ್ ಹಿಂದಿ ಚಿತ್ರರಂಗದಲ್ಲಿ ಚಿರಪರಿಚಿತ. ಸದ್ಯ ಈಕೆ ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಆರ್‌ಜೆ ಮಹ್ವಾಶ್ 'ಸೆಕ್ಷನ್ 108' ಎನ್ನುವ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಹಾಗೇ ಒಂದು ವೆಬ್ ಸೀರಿಸ್‌ನಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆರ್‌ಜೆ ಮಹ್ವಾಶ್ ಚಿತ್ರರಂಗದಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಪ್ರತ್ನಿಸುತ್ತಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿದೆ. ಈ ಸಮಯದಲ್ಲಿ ಚಹಲ್ ಜೊತೆ ಕಾಣಿಸಿಕೊಂಡಿದ್ದು ನೆಟ್ಟಿಗರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಗೆಳತಿನಾ? ಪ್ರೇಯಸಿನಾ?

ದುಬೈನಲ್ಲಿ ನಡೆದ ಚಾಂಪಿಯನ್ ಟ್ರೋಫಿಯಲ್ಲಿ ಯುಜ್ವೇಂದ್ರ ಚಹಲ್ ಹಾಗೂ ಆರ್‌ಜೆ ಮಹ್ವಾಶ್ ಕಾಣಿಸಿಕೊಳ್ಳುವುದಕ್ಕೂ ಮುನ್ನವೇ ಈ ಜೋಡಿ ಸುದ್ದಿಯಲ್ಲಿತ್ತು. ಆದರೆ, ಚಹಲ್ ಹಾಗೂ ಆರ್‌ಜೆ ಮಹ್ವಾಶ್ ಕೇವಲ ಸ್ನೇಹಿತರಷ್ಟೇ ಎಂದು ಹೇಳಲಾಗುತ್ತಿದೆ. ಆದರೆ, ಇವರಿಬ್ಬರ ಕೆಮಿಸ್ಟ್ರಿಯನ್ನು ನೋಡಿ ನೆಟ್ಟಿಗರು ಮಾತ್ರ ಏನೋ ಮಿಸ್ಟರಿ ಇದೆ ಅಂತ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

More from Filmibeat

English summary
Who is RJ Mahvash? Spotted with Yuzvendra Chahal in the Champions Trophy 2025 final
Read more about: cricket love story actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X