ಸೇಫ್ ಹ್ಯಾಂಡ್ಸ್ ಚಾಲೆಂಜ್‌ಗೆ ದೀಪಿಕಾ, ಪ್ರಿಯಾಂಕಾ ನಾಮಿನೇಟ್ ಮಾಡಿದ WHO

ಕೊರೊನಾ ವೈರಸ್ ಭೀತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ 'ಸೇಫ್ ಹ್ಯಾಂಡ್ಸ್' ಚಾಲೆಂಜ್ ಆರಂಭವಾಗಿದೆ. 'ಐಸ್ ಬಕೆಟ್ ಚಾಲೆಂಜ್'ನಂತಹ ಮೋಜಿನ ಸವಾಲುಗಳನ್ನು ಒಬ್ಬರಿಂದ ಒಬ್ಬರಿಗೆ ರವಾನಿಸಿ ಮಜಾ ತೆಗೆದುಕೊಳ್ಳುತ್ತಿದ್ದ ಬಾಲಿವುಡ್ ಮಂದಿ ಹಾಗೂ ಇತರೆ ಸೆಲೆಬ್ರಿಟಿಗಳು ಈಗ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅದರ ಭಾಗವೇ ಸೇಫ್ ಹ್ಯಾಂಡ್ಸ್ ಚಾಲೆಂಜ್.

Recommended Video

ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಪುನೀತ್ ರಾಜ್ ಕುಮಾರ್ | Puneeth Rajkumar | Birthday | Filmibeat Kannada

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗಳನ್ನು ಹೆಚ್ಚು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕರೆ ನೀಡಿದೆ. ಅದನ್ನು ಆಂದೋಲನದಂತೆ ಪಸರಿಸಲು 'ಸೇಫ್ ಹ್ಯಾಂಡ್ಸ್ ಚಾಲೆಂಜ್‌'ಅನ್ನು ಆರಂಭಿಸಿದೆ. ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರನ್ನು ಈ ಸವಾಲಿಗೆ WHO ಪ್ರಧಾನ ನಿರ್ದೇಶಕ ಡಾ. ಟೆಡ್ರೊಸ್ ಅಢಾನೊಮ್ ಘೆಬ್ರೆಯೆಸಸ್ ನಾಮನಿರ್ದೇಶನ ಮಾಡಿದ್ದಾರೆ.

WHO Nominates Deepika Padukone And Priyanka Chopra To Safe Hands Challenge

ಕೈಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಜತೆಗೆ, ಮೂರು ಜನರನ್ನು ಹೆಸರಿಸಿ ಅವರಿಗೆ ಈ ಸವಾಲನ್ನು ವರ್ಗಾಯಿಸುವುದು 'ಸೇಫ್ ಹ್ಯಾಂಡ್ಸ್ ಚಾಲೆಂಜ್' ಅಭಿಯಾನದ ಪ್ರಕ್ರಿಯೆ. ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅವರಲ್ಲದೆ ಬಿಲ್ ಗೇಟ್ಸ್, ಡಾ. ಜೇನ್ ರುತ್ ಅಸೆಂಗ್, ಮ್ಯಾಗಿ ಡಿ ಬ್ಲಾಕ್, ಪೌಲೋ ಡೈಬಾಲಾ, ಅರ್ನಾಲ್ಡ್ ಶ್ವಾರ್ಜಿನೆಗರ್ ಮುಂತಾದವರನ್ನು ಕೂಡ ಟೆಡ್ರೋಸ್ ಹೆಸರಿಸಿದ್ದಾರೆ.

ಮಾರ್ಚ್ 13ರಂದು ಡಬ್ಲ್ಯುಎಚ್ಒ ಈ ಚಾಲೆಂಜ್‌ಅನ್ನು ಆರಂಭಿಸಿದ್ದು, ಈಗಾಗಲೇ ಅನೇಕ ಸೆಲೆಬ್ರಿಟಿಗಳು ಕೈಗಳನ್ನು ಸರಿಯಾದ ರೀತಿಯಲ್ಲಿ ತೊಳೆದುಕೊಳ್ಳುವ ರೀತಿಯನ್ನು ತೋರಿಸುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

More from Filmibeat

English summary
WHO has nominated Deepika Padukone and Priyanka Chopra among the celebrities to join Safe Hands challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X