"ಯಶ್ ಫೋನ್ ಮಾಡಿ 'KGF 3'ಗೆ ರೆಡಿ ಆಗಿ ಅಂದ್ರು": 'ಚಾಪ್ಟರ್ 3' ಬಗ್ಗೆ ರವೀನಾ ಟಂಡನ್ ಹೇಳಿದ್ದಿಷ್ಟು?

ಯಶ್ ಹೊಸ ಸಿನಿಮಾ ಅನೌನ್ಸ್ ಮಾಡುತ್ತಿಲ್ಲ. ಪ್ರಶಾಂತ್ ನೀಲ್ 'ಸಲಾರ್' ಇನ್ನೂ ರಿಲೀಸ್ ಆಗಿಲ್ಲ. ಇಬ್ಬರೂ ಅದ್ಯಾವಾಗ ಮತ್ತೆ ಒಟ್ಟಿಗೆ ಸೇರುತ್ತಾರೋ? 'ಕೆಜಿಎಫ್ ಚಾಪ್ಟರ್ 3' ಮತ್ಯಾವಾಗ? ಸೆಟ್ಟೇರುತ್ತೋ ಅವರಿಬ್ಬರಿಗೆ ಗೊತ್ತು.

'ಕೆಜಿಎಫ್ 3' ಸದ್ಯಕ್ಕಿಲ್ಲ ಅಂತ ಕೆಲವು ದಿನಗಳ ಹಿಂದೆನೇ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿತ್ತು. ಹೀಗಿದ್ದರೂ, 'ಕೆಜಿಎಫ್ ಚಾಪ್ಟರ್ 3' ಬಗ್ಗೆ ಚರ್ಚೆ ಆಗುತ್ತಲೇ ಇದೆ. ಯಶ್ ಹಾಗೂ ಪ್ರಶಾಂತ್ ನೀಲ್ ಫ್ಯಾನ್ಸ್‌ಗೆ 'ಕೆಜಿಎಫ್ 3' ಆದಷ್ಟು ಬೇಗೆ ಸೆಟ್ಟೇರಬೇಕಿದೆ. ಇದೆಲ್ಲ ಏನೇ ಇದ್ದರೂ, ಇಬ್ಬರಿಂದಲೂ ಅಧಿಕೃತ ಮಾಹಿತಿ ಮಾತ್ರ ಹೊರಬಿದ್ದಿಲ್ಲ.

Yash called and said that ready for KGF 3 says Raveena Tandon Video Goes Viral

ಈ ಮಧ್ಯೆ ರವೀನಾ ಟಂಡನ್ 'ಕೆಜಿಎಫ್ 3' ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನು ರಿವೀಲ್ ಮಾಡಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ರಮಿಕಾ ಸೇನ್ ಖ್ಯಾತಿಯ ರವೀನಾ 'ಕೆಜಿಎಫ್ 3' ಬಗ್ಗೆ ಪಾಸಿಟಿವ್ ಆಗಿ ಮಾತಾಡಿದ್ದಾರೆ. ಸ್ವತ: ಹಾಗೂ ಪ್ರಶಾಂತ್ ನೀಲ್ 'ಚಾಪ್ಟರ್ 3' ಬಗ್ಗೆ ಏನಂದ್ರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇದೇ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

"KGF 3ಗೆ ರೆಡಿ ಆಗಿ ಅಂದ್ರು"

ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಕಳೆದ ವರ್ಷ ರಿಲೀಸ್ ಆಗಿದ್ದ 'ಕೆಜಿಎಫ್ 2' ಮೆಗಾಬ್ಲಾಕ್‌ ಬಸ್ಟರ್ ಲಿಸ್ಟ್ ಸೇರಿತ್ತು. ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಯಶ್ ಗಲ್ಲಾಪೆಟ್ಟಿಯಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದರು. ಇಲ್ಲಿಂದ 'ಕೆಜಿಎಫ್ 3' ಸಿನಿಮಾ ಮಾಡುವಂತೆ ಟೀಮ್‌ ಮೇಲೆ ಒತ್ತಡ ಜೋರಾಗಿದೆ. ಈ ಸಿನಿಮಾ ಯಾವಾಗ ಸೆಟ್ಟೇರುತ್ತೆ? ಕಾದು ಕೂತವರಿಗೆ ರವೀನಾ ಟಂಡನ್ ಚಿಕ್ಕದೊಂದು ಸುಳಿವು ಬಿಟ್ಟು ಕೊಟ್ಟಿದ್ದಾರೆ. 'ಕೆಜಿಎಫ್ 2 ಮೊದಲ ವಾರ್ಪಿಕೋತ್ಸವದಂದು ಯಶ್ ಹಾಗೂ ರವೀನಾ ಟಂಡನ್ ನಡುವೆ ನಡೆದ ಸಂಭಾಷಣೆಯನ್ನು ರಿವೀಲ್ ಮಾಡಿದ್ದಾರೆ.

"ಆ ದಿನ ಸಂಜೆ ಯಶ್ ನನಗೆ ಫೋನ್ ಮಾಡಿದ್ದರು. ನಾವಿಬ್ಬರು ಮೊದಲ ವಾರ್ಷಿಕೋತ್ಸವವನ್ನು ಸೆಲೆಬ್ರೆಟ್ ಮಾಡಿಕೊಂಡೆವು. ಹಾಗೇ ಪ್ರಶಾಂತ್ ಫೋನ್ ಮಾಡಿದ್ರು. ಇದೇ ವೇಳೆ ನೀವು ಕೆಜಿಎಫ್ 3ಗೆ ರೆಡಿಯಾಗಬೇಕು ಅಂತ ಯಶ್ ಹೇಳಿದ್ರು. ಆಗ ಮೊದಲ ಸೀನ್‌ನಲ್ಲೇ ನನ್ನನ್ನು ಸಾಯಿಸಬೇಡ ಅಂತ ಹೇಳಿದೆ. ಹೀಗೆ ಜೋಕ್ ಮಾಡಿಕೊಂಡೆವು. ಆದರೆ, ಕೆಜಿಎಫ್ 3 ಯಾವಾಗ ಬರುತ್ತೆ ಅನ್ನೋದು ನನಗೆ ಗೊತ್ತಿಲ್ಲ. ನಾವೆಲ್ಲರೂ ಅದು ಬರಲಿ ಅಂತ ಕಾಯುತ್ತಿದ್ದೇವೆ. ಪ್ರಶಾಂತ್ ನೀಲ್ ಕೂಡ ಆದಷ್ಟು ಬೇಗ ಮಾಡೋಣ ಅಂತ ಹೇಳಿದ್ದಾರೆ." ಎಂದು ರವೀನಾ ಟಂಡನ್ ಹೇಳಿದ್ದಾರೆ.

ಮೊದಲು ವಿಶ್ ಮಾಡಿದ್ದು ರಾಧಿಕಾ ಪಂಡಿತ್

ಕೆಲವೇ ದಿನಗಳ ಹಿಂದೆ ಏಪ್ರಿಲ್ 14ರಂದು 'ಕೆಜಿಎಫ್ 2' ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಈ ವೇಳೆ ಬಾಲಿವುಡ್ ನಟಿ ರವೀನಾ ಟಂಡನ್‌ಗೆ ಮೊದಲು ವಿಶ್ ಮಾಡಿದ್ದು ಯಶ್ ಪತ್ನಿ ರಾಧಿಕಾ ಪಂಡಿತ್. ಈ ಬಗ್ಗೆನೂ ರವೀನಾ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

"ಇತ್ತೀಚೆಗೆ ನಾನು 'ಕೆಜಿಎಫ್ 2' ಸಿನಿಮಾ ಮೊದಲ ವಾರ್ಷಿಕೋತ್ಸವ ಮಾಡಿದೆವು. ನನಗೆ ಆ ದಿನ ಮೊದಲು ಮೆಸೇಜ್ ಮಾಡಿದ್ದು, ಯಶ್ ಪತ್ನಿ ರಾಧಿಕಾ. ರಮಿಕಾ ಸೇನ್ ಅಂತಹ ಪಾತ್ರವನ್ನು ಯಾರೂ ಮಾಡುವುದಕ್ಕೆ ಸಾಧ್ಯವೇ ಇಲ್ಲ ಅಂತ ಅವರು ಹೇಳಿದ್ರು. ನಮ್ಮ ಬದುಕು ಬದಲಾಯಿಸಿದ್ದಕ್ಕೆ ಧನ್ಯವಾದಗಳು ಎಂದರು" ಎಂದು ರವೀನಾ ಟಂಡನ್ ಹೇಳಿದ್ದಾರೆ.

"ಯಶ್ ಬಳಿಕ ರಮಿಕಾಗೆ ಚಪ್ಪಾಳೆ"

ಇದೇ ವಿಡಿಯೋದಲ್ಲಿ 'ಕೆಜಿಎಫ್ 2' ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆನೂ ಮಾತಾಡಿದ್ದಾರೆ. ಯಶ್ ಬಳಿಕ ಈ ಸಿನಿಮಾದಲ್ಲಿ ತಮ್ಮ ಪಾತ್ರವನ್ನೇ ಜನರು ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕೆ ದೇವರಿಗೆ, ಪ್ರಶಾಂತ್‌ಗೆ, ಯಶ್‌ಗೆ ಧನ್ಯವಾದಗಳನ್ನು ಹೇಳುತ್ತಿರುವುದಾಗಿ ರವೀನಾ ಟಂಡನ್ ಹೇಳಿದ್ದಾರೆ.

"ಕೆಜಿಎಫ್ ಎಲ್ಲಾ ವಿಭಾಗದಲ್ಲೂ ಬೇರೆಯದ್ದೇ ಲೆವೆಲ್‌ನಲ್ಲಿ ಇತ್ತು. ಕೆಲವು ಸಮಯದಲ್ಲಿ, ನಾನು ಒಂದು ಶಾಟ್ ಮಾಡುವಾಗ ಪ್ರಶಾಂತ್ ನೀಲ್ ನೋಡುತ್ತಿದ್ದೆ. ನಾನೇನಾದರೂ ಕಡಿಮೆ ಪರ್ಫಾಮೆನ್ಸ್ ಮಾಡಿದ್ದೇನಾ? ಅಂತ ನೋಡುತ್ತಿದ್ದೆ. ಹೌದು, ಮೇಡಂ ಇನ್ನು ಸ್ವಲ್ಪ ಹೈ ಬೇಕು ಎಂದು ಹೇಳಿದ್ದರು. ಪ್ರಶಾಂತ್ ಓವರ್ ಆಕ್ಟಿಂಗ್ ಮಾಡುತ್ತಿಲ್ಲ ತಾನೇ ಅಂತ ಕೇಳಿದ್ದೆ. ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು ನಿರ್ದೇಶಕರೇ ಬಾಸ್ ಎನ್ನುತ್ತಿದ್ದರು. ಅದನ್ನು ನಾನು ನಂಬುತ್ತೇನೆ. ನಿರ್ದೇಶಕರಷ್ಟೇ ಎಲ್ಲರನ್ನೂ ನೋಡುತ್ತಿರುತ್ತಾರೆ. ಹೀಗಾಗಿ ನಾನು ಯಾವ ನಿರ್ದೇಶಕರಿಗೂ ಪ್ರಶ್ನೆ ಮಾಡಿಲ್ಲ. ನನಗೆ ಇಲ್ಲಿ ಪ್ರಶಾಂತ್ ಬಾಸ್ ಆಗಿದ್ದರು." ಎಂದು ರವೀನಾ ಟಂಡನ್ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Yash called and said that ready for KGF 3 says Ramika Sen fame Raveena Tandon Video Goes Viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X