ಶಾರುಖ್ ಕಾಲೆಳೆಯೋ ನೆಪದಲ್ಲಿ ಯಶ್ ಎಳೆದು ತಂದ ರಾಮ್‌ಗೋಪಾಲ್ ವರ್ಮಾ: ಆರ್‌ಜಿವಿ ಬಾಯಲ್ಲಿ ರಾಕಿ ಯಾಕೆ?

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದನ್ನೂ ಇನ್ನೂ ನಿಲ್ಲಿಸಿಲ್ಲ. ಕಳೆದೆರಡು ವಾರಗಳಿಂದ ಈ ಸಿನಿಮಾ ಹಿಂದೆ ಮುಂದೆ ನೋಡದೆ ಹಣ ದೋಚುತ್ತಲೇ ಇದೆ. ಒಂದೊಂದೇ ದಾಖಲೆಗಳನ್ನು ಧೂಳೀಪಟ ಮಾಡುತ್ತಿದೆ.

ಇಷ್ಟು ದಿನ ಬಾಲಿವುಡ್‌ ಮಿಸ್ ಮಾಡಿಕೊಂಡಿದ್ದ ವೈಭವವನ್ನು 'ಪಠಾಣ್' ತಂದುಕೊಂಡಿದೆ. ಬಾಲಿವುಡ್‌ಗೆ ಮರುಜೀವ ಕೊಟ್ಟ ಶಾರುಖ್ ಖಾನ್ ಬಗ್ಗೆ ರಾಮ್‌ ಗೋಪಾಲ್ ವರ್ಮಾ ಖಾರವಾಗಿ ಮಾಡಿದ್ದಾರೆ.

'ಪಠಾಣ್' ಸಕ್ಸಸ್ ಬಗ್ಗೆ ರಾಮ್‌ ಗೋಪಾಲ್ ವರ್ಮ ಖುಷಿಯಾಗಿಲ್ಲ. ಅದಕ್ಕೆ ರಾಕಿಂಗ್ ಸ್ಟಾರ್ ಯಶ್‌ಗೆ ಹೋಲಿಕೆ ಮಾಡಿ, ಶಾರುಖ್ ಖಾನ್‌ರನ್ನು ತೆಗಳಿದಿದ್ದಾರೆ. ವಿವಾದಗಳನ್ನೇ ಮೈಮೇಲೆ ಎಳೆದುಕೊಳ್ಳುವ ಆರ್‌ಜಿವಿ ರಾಕಿ ಭಾಯ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೋ..? ಇಲ್ಲಾ ಶಾರುಖ್ ಫ್ಯಾನ್ಸ್ ಕೋಪಕ್ಕೆ ತುತ್ತಾಗುತ್ತಾರೋ ಗೊತ್ತಿಲ್ಲ.

ಶಾರುಖ್ ವಿರುದ್ಧ ಆರ್‌ಜಿವಿ ಟೀಕೆ

ಶಾರುಖ್ ವಿರುದ್ಧ ಆರ್‌ಜಿವಿ ಟೀಕೆ

ಭಾರತೀಯ ಚಿತ್ರರಂಗದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಸದಾ ತಮ್ಮ ಹೇಳಿಕೆಗಳಿಂದಲೇ ಪೇಚಿಗೆ ಸಿಕ್ಕಿಕೊಳ್ಳುವ ವಿವಾದಾತ್ಮಕ ನಿರ್ದೇಶಕ. ಕೆಲವು ದಿನಗಳ ಬಳಿಕ ಶಾರುಖ್ ಖಾನ್ ಹಾಗೂ ಅವರ ಕಮ್‌ ಬ್ಯಾಕ್ ಸಿನಿಮಾ 'ಪಠಾಣ್' ಬಗ್ಗೆ ಟೀಕೆ ಮಾಡಿದ್ದಾರೆ. ಕಿಂಗ್ ಖಾನ್ ಅನ್ನು ಟೀಕೆ ಮಾಡುವ ಭರದಲ್ಲಿ ರಾಕಿ ಭಾಯ್ ಯಶ್‌ ಅನ್ನೂ ಎಳೆದು ತಂದಿದ್ದಾರೆ. ಈ ಹೇಳಿಕೆ ಯಾವ ನಟನ ಅಭಿಮಾನಿಗಳಿಗೆ ನಿದ್ದೆಕೆಡಿಸುತ್ತೋ ಗೊತ್ತಿಲ್ಲ. ಅಷ್ಟಕ್ಕೂ ವರ್ಮಾ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶಾರುಖ್, ಯಶ್ ಬಗ್ಗೆ ವರ್ಮಾ ಹೇಳಿದ್ದೇನು?

ಶಾರುಖ್, ಯಶ್ ಬಗ್ಗೆ ವರ್ಮಾ ಹೇಳಿದ್ದೇನು?

ರಾಮ್‌ ಗೋಪಾಲ್ ವರ್ಮಾ ಇತ್ತೀಚೆಗೆ 'ಕನೆಕ್ಟ್ ದಿಲ್ ಸೇ' ಅನ್ನೋ ವೇದಿಕೆಯಲ್ಲಿ ಸಂವಾದಕ್ಕೆ ಕುಳಿತಿದ್ದರು. ಈ ವೇಳೆ ರಾಮ್‌ ಗೋಪಾಲ್ ವರ್ಮಾ ಬಾಲಿವುಡ್‌ ಸಿನಿಮಾ 'ಪಠಾಣ್' ಬಾಕ್ಸಾಫೀಸ್‌ ಸಕ್ಸಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. " ನೋಡಿ.. ಯಾರಿಗೂ ಗೊತ್ತಿರದ ನಟ ಯಶ್ ₹500 ಕೋಟಿ ಬ್ಯುಸಿನೆಸ್ (ಕೆಜಿಎಫ್ 2) ಮಾಡೋದಾದ್ರೆ, ಶಾರುಖ್ ಖಾನ್ ₹500 ಕೋಟಿ ರೂ. ಬ್ಯುಸಿನೆಸ್ ಮಾಡೋದ್ರಲ್ಲಿ ಯಾವ ದೊಡ್ಡ ವಿಷಯ" ಎಂದು ಹೇಳಿದ್ದಾರೆ. ಇದೇ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.

'ಯಶ್‌ಗಿಂತ ಶಾರುಖ್‌ ದೊಡ್ಡ ನಟ'

'ಯಶ್‌ಗಿಂತ ಶಾರುಖ್‌ ದೊಡ್ಡ ನಟ'

ಆರ್‌ಜಿವಿ ಇಲ್ಲಿಗೆ ಸುಮ್ಮನಾಗಿಲ್ಲ. ಸ್ಟಾರ್‌ಢಮ್ ಬಗ್ಗೆನೂ ಅನುಮಾನ ವ್ಯಕ್ತಪಡಿಸಿದ್ದಾರೆ. "ಯಶ್‌ಗಿಂತ ಶಾರುಖ್ ಖಾನ್ ದೊಡ್ಡ ನಟ. ಆದರೆ, ಯಶ್ ಕೂಡ ಅಷ್ಟೇ ದೊಡ್ಡ ಬ್ಯುಸಿನೆಸ್ ಮಾಡುತ್ತಾರೆ. 'ಕಾಂತಾರ' ಅಥವಾ 'ಪುಷ್ಪ' ದೊಡ್ಡ ಹಿಟ್ ಆಗುತ್ತೆ. ಆದರೆ, ಹಿಂದಿಯಲ್ಲಿ ಯಾರಿಗೂ ಅಲ್ಲೂ ಅರ್ಜುನ್ ಗೊತ್ತಿಲ್ಲ. ಹಿಂದೆ ಇದ್ದಂತೆ ಸ್ಟಾರ್‌ಢಮ್ ಇದೆ ಅನ್ನೋದು ನನಗೀಗ ಅನುಮಾನ." ಎಂದು 'ಪಠಾಣ್' ಗೆದ್ದ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮಾ ಟೀಕೆ ಮಾಡಿದ್ದಾರೆ.

ಶಾರುಖ್ ಫೇಡಿಂಗ್ ಸ್ಟಾರ್

ಹಿಂದಿ ಬೆಲ್ಟ್‌ಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಸಕ್ಸಸ್‌ಗೆ ಕಾರಣಗಳೇನು ಅನ್ನೋದನ್ನು ಪರೀಕ್ಷಿಸುವುದಕ್ಕೆ ಹೆಚ್ಚು ಸಮಯ ಕೊಡಬೇಕು ಅಂತ ಆರ್‌ಜಿವಿ ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೂ ಮುನ್ನ ಶಾರುಖ್ ಖಾನ್ ಅನ್ನು ಫೇಡಿಂಗ್ ಸ್ಟಾರ್ ಅಂತ ಜರಿದು ಟ್ವೀಟ್ ಮಾಡಿದ್ದರು. ಅಲ್ಲದೆ ಬಾಲಿವುಡ್ ಮಂದಿಗೆ ದಕ್ಷಿಣ ಭಾರತದ ಮಸಾಲ ನಿರ್ದೇಶಕರ ಹಾಗೇ ಕಮರ್ಷಿಯಲ್ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಲು ಬರುವುದಿಲ್ಲ ಎಂದು ಹೇಳಿದ್ದರು.

More from Filmibeat

English summary
Yash Can Do What's Big Deal Shah Rukh Khan Doing 500 Crore With Pathaan Says Ram Gopal Varma, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X