ಬಾಲಿವುಡ್ ಸಿನಿಮಾ ಬೇಡ ಅಂದಿದ್ದು ಅಲ್ಲು ಅರ್ಜುನ್ ಒಬ್ಬರೇ ಅಲ್ಲ: ರಾಕಿ ಭಾಯ್‌ಗೂ ಸಿಕ್ಕಿತ್ತು ಆಫರ್!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋದು ದೊಡ್ಡ ಕನಸಾಗಿತ್ತು. ದಕ್ಷಿಣ ಭಾರತದ ನಟ-ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು ಅಂತ ದಕ್ಷಿಣ ಭಾರತದ ಸಿನಿಮಾಗಳನ್ನು ಬಿಟ್ಟು ಹೋಗಿದ್ದು ಇದೆ. ಕೆಲವರಿಗೆ ಬಾಲಿವುಡ್‌ನಲ್ಲಿ ಯಶಸ್ಸು ಸಿಕ್ಕಿದ್ದರೆ, ಮತ್ತೆ ಕೆಲವರು ಎರಡೂ ಕಡೆ ಸಿನಿಮಾ ಇಲ್ಲದೆ ಕರಿಯರ್ ಹಾಳು ಮಾಡಿಕೊಂಡಿದ್ದು ಇದೆ. ಬಾಲಿವುಡ್‌ನಲ್ಲಿ ಸಿನಿಮಾಗಳ ವ್ಯಾಪ್ತಿ ದೊಡ್ಡದಿದೆ. ಅಲ್ಲಿನ ನಟ-ನಟಿಯರಿಗೆ ಸಿಗುವ ಸಂಭಾವನೆನೂ ದೊಡ್ಡದಿದೆ. ಹೀಗಾಗಿ ದಕ್ಷಿಣ ಭಾರತದ ಕಲಾವಿದರ ಕಣ್ಣು ಬಾಲಿವುಡ್‌ ಮೇಲಿದೆ.

ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬಾಲಿವುಡ್ ಸಿನಿಮಾಗಳೊಂದಿಗೆ ಸೆಣೆಸಾಡುತ್ತಿವೆ. ಗಲ್ಲಾಪಟ್ಟಿಗೆಯಲ್ಲಿ ದಾಖಲೆ ಬರುತ್ತಿವೆ. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಕೆಲವು ಸೂಪರ್‌ಸ್ಟಾರ್‌ಗಳು ಬಾಲಿವುಡ್ ಆಫರ್‌ಗಳನ್ನು ತಿರಸ್ಕರಿಸಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ತಮಗೆ ಬಂದಿದ್ದ ಆಫರ್ ರಿಜೆಕ್ಟ್ ಮಾಡಿದ್ದರು. ಹಾಗಂತ ಇವರೊಬ್ಬರೇ ಅಲ್ಲ ರಾಕಿ ಭಾಯ್ ಯಶ್ ಕೂಡ ಬಾಲಿವುಡ್‌ ಆಫರ್‌ಗೆ ನೋ ಅಂತಾನೇ ಹೇಳಿದ್ದರು. ಅಂತಹ ದಕ್ಷಿಣ ಭಾರತದ ಸ್ಟಾರ್‌ಗಳ ಪಟ್ಟಿ ಇಲ್ಲಿದೆ.

Yash, Mahesh Babu, Allu Arjun, Anushka And other south stars rejected Bollywood movies

ಅಲ್ಲು ಅರ್ಜುನ್

ಇತ್ತೀಚೆಗ ಅಲ್ಲು ಅರ್ಜುನ್‌ಗೆ ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಶಾರುಖ್ ಖಾನ್ ಅಭಿನಯಿಸುತ್ತಿರುವ 'ಜವಾನ್' ಸಿನಿಮಾಗಾಗಿ ಐಕಾನ್ ಸ್ಟಾರ್ ಅನ್ನು ಅಪ್ರೋಚ್ ಮಾಡಲಾಗಿತ್ತು. ಈ ಸಿನಿಮಾ ಅಲ್ಲು ಅರ್ಜುನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಅಲ್ಲು ಅರ್ಜುನ್ ಸರಾಸಗಟಾಗಿ ತಿರಸ್ಕರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. 'ಪುಷ್ಪ 2' ಸಿನಿಮಾದಲ್ಲಿ ಬ್ಯುಸಿಯಾಗಿರುವ ಕಾರಣ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಅತಿಥಿ ಪಾತ್ರದಲ್ಲಿ ನಟಿಸಲು ಅಲ್ಲು ಅರ್ಜುನ್ ಒಪ್ಪುತ್ತಿಲ್ಲ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.

ಮಹೇಶ್ ಬಾಬು

ದಕ್ಷಿಣ ಭಾರತದ ಹ್ಯಾಂಡ್‌ಸಮ್ ಆಕ್ಟರ್ ಮಹೇಶ್ ಬಾಬುಗೂ ಬಾಲಿವುಡ್‌ನಿಂದ ಆಫರ್ ಬಂದಿತ್ತು. ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶಿಸುತ್ತಿರುವ 'ಎನಿಮಲ್' ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಬೇಕಿತ್ತು. ಆದರೆ, ಅವರು ಒಪ್ಪಲಿಲ್ಲ. ಈಗ ಆ ಪಾತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸುತ್ತಿದ್ಧಾರೆ. ಇವರೊಂದಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Yash, Mahesh Babu, Allu Arjun, Anushka And other south stars rejected Bollywood movies

ಅನುಷ್ಕಾ ಶೆಟ್ಟಿ

ದಕ್ಷಿಣ ಭಾರತದಲ್ಲಿ ಜನಪ್ರಿಯ ನಟ ಅನುಷ್ಕಾ ಶೆಟ್ಟಿಗೂ ಬಾಲಿವುಡ್ ಮಂದಿ ಆಫರ್ ಕೊಟ್ಟಿದ್ದರು. ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾ ಬಳಿಕ ವಿಶ್ವದಾದ್ಯಂತ ಜನಪ್ರಿಯತೆ ಮತ್ತಷ್ಟು ಉತ್ತುಂಗಕ್ಕೇರಿದೆ. ಹಿಂದೊಮ್ಮೆ ರೋಹಿತ್ ಶೆಟ್ಟಿ ನಿರ್ದೆಶಿಸುತ್ತಿದ್ದ 'ಸಿಂಗಂ' ಸಿನಿಮಾಗೆ ಆಫರ್ ಕೊಟ್ಟಿದ್ದರು. ಆದರೆ, ಅನುಷ್ಕಾ ಶೆಟ್ಟಿ ಈ ಆಫರ್ ತಿರಸ್ಕರಿಸಿದ್ದರು. ಆ ಬಳಿಕ ಇದು ಕಾಜಲ್ ಅಗರ್ವಾಲ್ ಪಾಲಾಯ್ತು. ಅಷ್ಟೇ ಅಲ್ಲದೆ 'ಇತ್ತಿಫಾಖ್' ಅನ್ನೋ ಸಿನಿಮಾವನ್ನೂ ತಿರಸ್ಕರಿಸಿದ್ದರು ಎಂದು ವರದಿಯಾಗಿತ್ತು.

More from Filmibeat

English summary
Yash, Mahesh Babu, Allu Arjun, Anushka Shetty And other south superstars Who rejected Bollywood movies, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X