Ramayana Glimpe: ರಣ್‌ಬೀರ್ ತಾಳ್ಮೆ.. ಯಶ್ ಬಿರುಗಾಳಿ.. 'ರಾಮಾಯಣ' ಗ್ಲಿಂಪ್ಸ್ ನೋಡಿ ಏನಂದ್ರು ನೆಟ್ಟಿಗರು?

ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಡೆಡ್ ಸಿನಿಮಾ 'ರಾಮಾಯಣ' ಮೊದಲ ತುಣುಕುಗಳನ್ನು ರಿವೀಲ್ ಮಾಡಿದೆ. ಇದಕ್ಕಾಗಿಯೇ ಇಷ್ಟು ದಿನ ಕಾದು ಕೂತಿದ್ದ ರಾಕಿಂಗ್ ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಆದರೆ, ರಾಮಾಯಾಣದಂತಹ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ ಅದರದ್ದೇ ಆದ ಸಮಯ ಬೇಕು. ಸಂಶೋಧನೆ ಮಾಡಿ ಅಖಾಡಕ್ಕೆ ಇಳಿಯಬೇಕು. ಸದ್ದಿಲ್ಲದೆ ಶೂಟಿಂಗ್ ಮುಗಿಸಿರುವ ನಿರ್ದೇಶಕ ನಿತೀಶ್ ತಿವಾರಿ ಈಗ ಚಿಕ್ಕದೊಂದು ಝಲಕ್ ಅನ್ನು ರಿಲೀಸ್ ಮಾಡಿದ್ದಾರೆ.

ನಿನ್ನೆಯಿಂದಲೂ (ಜುಲೈ 2) 'ರಾಮಾಯಣ' ಗ್ಲಿಂಪ್ಸ್ ಬಗ್ಗೆನೇ ಚರ್ಚೆಗಳಾಗುತ್ತಿದ್ದವು. ಅದರಲ್ಲೂ ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅಂತಹ ನಟರನ್ನು 'ರಾಮಾಯಣ'ದಂತಹ ಪೌರಾಣಿಕ ಸಿನಿಮಾದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ಕೂಡ ಕುತೂಹಲದಿಂದ ಕಾಯುತ್ತಿದ್ದರು. ಅವರ ನಿರೀಕ್ಷೆಯಂತೆಯೇ ಈ ಪೌರಾಣಿಕ ಕಥೆಯನ್ನು ಆಧರಿಸಿದ ಸಿನಿಮಾದ ಮೊದಲು ತುಣುಕುಗಳು ಹೊರ ಬಿದ್ದಿವೆ.

Yash Ranbir Kapoor Sai Pallavi starrer Ramayana first glimpse twitter review and reaction

ಇಂದು (ಜುಲೈ 3) 12.10ಕ್ಕೆ ದೇಶದ ಒಂಬತ್ತು ಪ್ರಮುಖ ನಗರಗಳಲ್ಲಿ 'ರಾಮಾಯಣ' ಸಿನಿಮಾದ ಗ್ಲಿಂಪ್ಸ್ ಅನ್ನು ಪ್ರದರ್ಶನ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ, ಚೆನ್ನೈ, ಅಹಮದಾಬಾದ್, ಕೊಲ್ಕತಾ, ಪುಣೆ, ಕೊಚ್ಚಿಯಲ್ಲಿ ಈ ಸಿನಿಮಾ ಗ್ಲಿಂಪ್ಸ್ ಅನ್ನು ಪ್ರದರ್ಶನ ಮಾಡಲಾಗಿದೆ. ಹಾಗಿದ್ದರೆ, 'ರಾಮಾಯಣ'ವನ್ನು ಕಣ್ತುಂಬಿಕೊಂಡಿರುವ ಸಿನಿಪ್ರಿಯರು ಟ್ವಿಟರ್‌ನಲ್ಲಿ (ಎಕ್ಸ್) ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

ರಣ್‌ಬೀರ್ ತಾಳ್ಮೆ, ಯಶ್ ಬಿರುಗಾಳಿ

"ರಾಮಾಯಣ ಗ್ಲಿಂಪ್ಸ್ ಮೈಜುಂ ಎನಿಸುತ್ತಿದೆ. ರಾಮ vs ರಾವಣ ಮುಖಾಮುಖಿ ಅದ್ಭುತವಾಗಿದೆ. ದವಡೆಯನ್ನು ಬಿಗಿ ಹಿಡಿರುವಂತಹ ದೃಶ್ಯಗಳು, ದೈವಿಕ ಭಾವ ಮೂಡಿಸುವ ದೃಶ್ಯಗಳಿಂದ ಜೀವಂತವಾಗಿಸಿದೆ. ಇದಕ್ಕೆ ವಿಶ್ವ ದರ್ಜೆಯ DNEGಯವರ ವಿಎಫ್‌ಎಕ್ಸ್, ಐಮಾಕ್ಸ್‌ನಲ್ಲಿ ಈ ಸಿನಿಮಾವನ್ನು ನೋಡುವುದೇ ಒಂದು ಮಜಾ. ರಣ್‌ಬೀರ್ ತಾಳ್ಮೆಯ ಪವರ್ ಹಾಗೂ ಯಶ್ ಬಿರುಗಾಳಿ ಈ ಸಿನಿಮಾದ ಹೈಲೈಟ್" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ರಾಮಾಯಣ ಯಶ್ ಸಿನಿಮಾ

ಯಶ್ ಅಭಿಮಾನಿಗಳು 'ರಾಮಾಯಣ' ಸಿನಿಮಾದ ತುಣುಕುಗಳನ್ನು ಕಣ್ತುಂಬಿ ಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಈ ವೇಳೆ 'ರಾಮಾಯಣ' ಗ್ಲಿಂಪ್ಸ್ ನೋಡಿ ಯಶ್‌ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಫೇಸ್ ರಾಕಿ ಭಾಯ್ ಯಶ್. ಈ ಸಿನಿಮಾಗೆ ಇಷ್ಟೊಂದು ಹೈಪ್ ಸಿಕ್ಕಿರುವುದಕ್ಕೆ ಯಶ್ ಕಾರಣ ಎಂದು ಇನ್ನೊಬ್ಬರ ನೆಟ್ಟಿಗರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಾಕ್ಸಾಫೀಸ್‌ನಲ್ಲಿ ಚರಿತ್ರೆ ಬರೆಯುತ್ತಾ?

ಕೇವಲ 'ರಾಮಾಯಣ' ಗ್ಲಿಂಪ್ಸ್ ನೋಡಿನೇ ನೆಟ್ಟಿಗರು ಥ್ರಿಲ್ ಆಗಿದ್ದಾರೆ. ಅದರಲ್ಲೂ ಹಿಂದಿ ಆಡಿಯನ್ಸ್‌ಗೆ ಈ ಸಿನಿಮಾ ಚರಿತ್ರೆ ಬರೆಯುತ್ತೆ ಎಂಬ ನಂಬಿಕೆ ಬಂದಿದೆ. "ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇತಿಹಾಸವನ್ನು ಬರೆಯುತ್ತೆ. ನಿತೀಶ್ ತಿವಾರಿ ಹಾಗೂ ಅವರ ತಂಡಕ್ಕೆ ಹ್ಯಾಟ್ಸ್ ಆಫ್. ಹಿಂದಿಯ ಡೊಮೆಸ್ಟಿಕ್ ಲೆವೆಲ್‌ನಲ್ಲಿ ₹1000 ಕೋಟಿ ದಾಖಲಿಸುವ ಮೊದಲ ಸಿನಿಮಾ ಆಗಬಹುದು" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಖಳನಾಯಕನ ಮರುವ್ಯಾಖ್ಯಾನ ಆಗುತ್ತೆ

"ರಾಕಿಂಗ್ ಸ್ಟಾರ್ ಯಶ್ ಬಾಸ್ ರಾವಣನ ಅವತಾರದಲ್ಲಿ ಬೆಂಕಿಯಾಗಿದ್ದಾರೆ. ಖಂಡಿತವಾಗಿಯೂ ಖಳನಾಯಕ ಅನ್ನೋದನ್ನು ಮರು ವ್ಯಾಖ್ಯಾನ ಮಾಡಲಿದ್ದಾರೆ" ಎಂದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬೆಸ್ಟ್ ನಟರು ಸಿಕ್ಕಿದ್ಮೇಲೆ ಇನ್ನೇನು ಮಾಡ್ಬಹುದು?

"ರಾಮಾಯಣ.. ಅಖಾಡದಿಂದ ₹2000 ಕೋಟಿ ಗಳಿಸುವಂತೆ ಮಾಡಿದ್ದ ವ್ಯಕ್ತಿ. ಪ್ರಪಂಚದ ಬೆಸ್ಟ್ ಸ್ಟೋರಿ, ಬೆಸ್ಟ್ ವಿಎಫ್‌ಎಕ್ಸ್ ಟೀಮ್ ಹಾಗೂ ಬೆಸ್ಟ್ ಮ್ಯೂಸಿಕ್ ಪ್ರಡ್ಯೂಸರ್ಸ್ ಹಾಗೂ ಬೆಸ್ಟ್ ನಟರು ಸಿಕ್ಕಿದರೆ ಇನ್ನು ಏನು ಮಾಡಬಹುದು" ಎಂದು ಮತ್ತೊಬ್ಬ ನೆಟ್ಟಿಗರು ರಾಮಾಯಣ ಸಿನಿಮಾದ ಗ್ಲಿಂಪ್ಸ್ ಬಗ್ಗೆ ಬರೆದುಕೊಂಡಿದ್ದಾರೆ.

ರಾಮಾಯಣ ಗ್ಲಿಂಪ್ಸ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಅದ್ಭುತ ವೀವ್ಸ್ ಅನ್ನು ಪಡೆದುಕೊಳ್ಳುತ್ತಿದೆ. ರಣ್‌ಬೀರ್ ಹಾಗೂ ಯಶ್ ಅವತಾರಗಳನ್ನು ಮುಗಿಬಿದ್ದು ನೋಡುತ್ತಿದ್ದಾರೆ.

Take a Poll

More from Filmibeat

English summary
Yash, Ranbir Kapoor, Sai Pallavi starrer Ramayana first glimpse twitter review and reaction;
Read more about: ramayana yash ranbir kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X