Just In
Don't Miss!
- News
‘ನಕಲಿ ವ್ಯಾಕ್ಸಿನೇಷನ್’ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್
- Education
Karnataka SSLC Exam 2021: ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾತಿ ಕಡ್ಡಾಯ ಇಲ್ಲ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Automobiles
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- Lifestyle
ಶೇವಿಂಗ್ ಟಿಪ್ಸ್: ಹೀಗೆ ಮಾಡಿದರೆ ತ್ವಚೆ ಮೃದುವಾಗಿರುತ್ತೆ, ತುರಿಕೆ ಇರಲ್ಲ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ನನ್ನಿಂದ ಸಾಕಷ್ಟು ಹಣ ಪಡೆದಿದ್ದೀಯ ನೀನು' ಕರೀನಾ ಗೆ ಅನಿಲ್ ಕಪೂರ್ ಟಾಂಗ್
ನಟ ಅನಿಲ್ ಕಪೂರ್ ಇತ್ತೀಚೆಗೆ ಕರೀನಾ ಕಪೂರ್ ನಡೆಸಿಕೊಡುವ 'ವಾಟ್ ವುಮನ್ ವಾಂಟ್' ಟಾಕ್ ಶೋ ನಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ, 'ನಟಿಯರಿಗೆ ನಟರಷ್ಟೆ ಸಂಭಾವನೆ ನೀಡಬೇಕು ಅಲ್ಲವೆ?' ಎಂಬ ಪ್ರಶ್ನೆಯನ್ನು ಕರೀನಾ , ಅನಿಲ್ ಕಪೂರ್ ಮುಂದಿಟ್ಟರು. ಇದಕ್ಕೆ ಉತ್ತರಿಸಿದ ಅನಿಲ್ ಕಪೂರ್, 'ನೀನಂತು ನನ್ನಿಂದ ಸಾಕಷ್ಟು ಹಣ ಪಡೆದಿದ್ದೀಯ' ಎಂದು ಹೇಳಿದ್ದಾರೆ.
ಗಳಿಸಿದ್ದ ಗೌರವವನ್ನೆಲ್ಲಾ ಈ ಸಿನಿಮಾದಲ್ಲಿ ಪಣಕ್ಕಿಟ್ಟಿದ್ದೇನೆ: ಅನಿಲ್ ಕಪೂರ್
ಕರೀನಾ ನಟಿಸಿದ್ದ 'ವೀರ್ ದಿ ವೆಡ್ಡಿಂಗ್' ಸಿನಿಮಾಕ್ಕೆ ಅನಿಲ್ ಕಪೂರ್ ಸಹ ನಿರ್ಮಾಪಕರಾಗಿದ್ದರಂತೆ. ಆಗ ಪ್ರೊಡಕ್ಷನ್ ಸಿಬ್ಬಂದಿ ಕರೆ ಮಾಡಿ ಕರೀನಾ ಹೆಚ್ಚು ಹಣ ಕೇಳುತ್ತಿದ್ದಾರೆ ಎಂದರಂತೆ, ಆಗ ಅನಿಲ್ ಕಪೂರ್, 'ಕರೀನಾ ಎಷ್ಟು ಕೇಳುತ್ತಾರೊ ಅಷ್ಟು ಕೊಟ್ಟು ಬಿಡಿ' ಎಂದರಂತೆ.
ಮುಂದುವರೆದು ಮಾತನಾಡಿರುವ ಅನಿಲ್ ಕಪೂರ್, 'ನೀನು ಮಾತ್ರವಲ್ಲ ಸಾಕಷ್ಟು ಮಂದಿ ನಾಯಕಿಯರು ಸಾಕಷ್ಟು ಹಣ ಪಡೆದಿದ್ದಾರೆ. ನಾನು ನಟಿಸಿದ ಸಿನಿಮಾದಲ್ಲಿಯೇ ನನಗಿಂತಲೂ ನಾಯಕಿಯರು ಹೆಚ್ಚು ಸಂಭಾವನೆ ಪಡೆದಿದ್ದಾರೆ. ಆದರೆ ನಾನು ಯಾವುದೇ ಸಮಸ್ಯೆ ಇಲ್ಲದೆ ಅರಾಮವಾಗಿ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ' ಎಂದಿದ್ದಾರೆ ಅನಿಲ್.
ಸೇನಾ ಸಮವಸ್ತ್ರಗೆ ಅವಮಾನ; ಕ್ಷಮೆಯಾಚಿಸಿದ ನಟ ಅನಿಲ್ ಕಪೂರ್
ಹಾಲಿವುಡ್ ಸಿನಿಮಾಗಳಲ್ಲಿ ಕೆಲವು ನಾಯಕರು ಮೊದಲೇ ಷರತ್ತು ಹಾಕುತ್ತಿದ್ದಾರಂತೆ. ನಟಿಯರು ನಮ್ಮಷ್ಟೆ ಸಂಭಾವನೆ ಪಡೆಯುವಂತಿದ್ದರೆ ಮಾತ್ರವೇ ನಾವು ಸಿನಿಮಾದಲ್ಲಿ ನಟಿಸುತ್ತೇವೆಂದು, ಅದೇ ಪದ್ಧತಿ ಬಾಲಿವುಡ್‌ನಲ್ಲಿಯೂ ಬರಬೇಕು ಎಂದಿದ್ದಾರೆ ಕರೀನಾ ಕಪೂರ್.