twitter
    For Quick Alerts
    ALLOW NOTIFICATIONS  
    For Daily Alerts

    'ಶಿಕ್ಷಣ ಅಥವಾ ಹಿಜಾಬ್ ಆಯ್ಕೆ ಮುಸ್ಲಿಂ ಮಹಿಳೆಯರಿಗೆ ಮಾಡುತ್ತಿರುವ ಅನ್ಯಾಯ': 'ದಂಗಲ್' ನಟಿ ಝೈರಾ ವಾಸಿಂ

    |

    ಬಾಲಿವುಡ್‌ನ ಮಾಜಿ ನಟಿ ಝೈರಾ ವಾಸಿಂ ಕರ್ನಾಟಕದ ಹಿಜಾಬ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಹಿಜಾಬ್ ಧರಿಸದೆ ಕಾಲೇಜುಗಳಿಗೆ ಬರುವುದಿಲ್ಲವೆಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಇದು ಈಗ ರಾಷ್ಟ್ರ ಮಟ್ಟದ ವಿವಾದವಾಗಿದೆ. ಈ ಹಿಜಾಬ್ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಕೋರ್ಟ್‌ನಲ್ಲಿ ತೀರ್ಪು ಸಿಗುವವರೆಗೂ ಹಿಜಾಬ್ ಪ್ರಕರಣಕ್ಕೆ ಅಂತ್ಯ ಕಾಣುವುದು ಅನುಮಾನ. ಇನ್ನೊಂದು ಕಡೆ ಹಿಜಾಬ್ ಪ್ರಕರಣದ ಬಗ್ಗೆ ಬಾಲಿವುಡ್ ಸೆಲೆಬ್ರೆಟಿಗಳು ತಮ್ಮ ಅಭಿಪ್ರಾಯವನ್ನು ಹೊರ ಹಾಕುತ್ತಲೇ ಇದ್ದಾರೆ. ಈಗ ಬಾಲಿವುಡ್ ಮಾಜಿ ನಟಿ ಝೈರಾ ವಾಸಿಂ ಹಿಜಾಬ್ ಬಗ್ಗೆ ಮೌನ ಮುರಿದಿದ್ದಾರೆ.

    ಕರ್ನಾಟಕದ ಹಿಜಾಬ್ ಪ್ರಕರಣದ ಬಗ್ಗೆ ಈಗಾಗಲೇ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಮೌನ ಮುರಿದಿದ್ದಾರೆ. ಬಾಲಿವುಡ್‌ನ ಹಿರಿಯ ಸಾಹಿತಿ ಜಾವೆದ್ ಅಖ್ತರ್, ಸೋನಂ ಕಪೂರ್, ಸ್ವರ ಭಾಸ್ಕರ್, ಭೂಮಿ ಪಡ್ನೆಕರ್ ಸೇರಿದಂತೆ ಹಲವು ಮಂದಿ ಹಿಜಾಬ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಇದೇ ವೇಳೆ ತಾನು ಮಾಡುತ್ತಿರುವ ಕೆಲಸ ತನ್ನ ನಂಬಿಕೆಯ ವಿರುದ್ಧವಾಗಿದೆ ಎಂದು ನಟನೆ ತಿಲಾಂಜಿ ಹೇಳಿದ್ದ ಝೈರಾ ವಾಸಿಂ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

    'ಬಡವರ ಮಕ್ಕಳನ್ನೇ ಯಾರೋ ಟಾರ್ಗೆಟ್ ಮಾಡಿದ್ದಾರೆ': ಹಿಜಾಬ್ ಬಗ್ಗೆ ಕವಿರಾಜ್ ಪ್ರತಿಕ್ರಿಯೆ 'ಬಡವರ ಮಕ್ಕಳನ್ನೇ ಯಾರೋ ಟಾರ್ಗೆಟ್ ಮಾಡಿದ್ದಾರೆ': ಹಿಜಾಬ್ ಬಗ್ಗೆ ಕವಿರಾಜ್ ಪ್ರತಿಕ್ರಿಯೆ

    ಇಸ್ಲಾಂನಲ್ಲಿ ಹಿಜಾಬ್ ಆಯ್ಕೆಯಲ್ಲ ಹೊಣೆ

    ಇಸ್ಲಾಂನಲ್ಲಿ ಹಿಜಾಬ್ ಆಯ್ಕೆಯಲ್ಲ ಹೊಣೆ

    ಝೈರಾ ವಾಸಿಂ ಇನ್‌ಸ್ಟಾಗ್ರಾಂ ಹಿಜಾಬ್ ಬಗ್ಗೆ ಮಾರುದ್ದದ ಫೋಸ್ಟ್‌ ಹಾಕಿದ್ದಾರೆ. ಇಸ್ಲಾಂನಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ಆಯ್ಕೆಯಲ್ಲ ಅದೊಂದು ಜವಾಬ್ದಾರಿ. ಆದರೆ ಒಬ್ಬ ವ್ಯಕ್ತಿ ಸರ್ವಶಕ್ತನಿಗೆ ಸಂಪೂರ್ಣವಾಗಿ ಶರಣಾದಾಗ ಮಾತ್ರ ಆ ಹೊಣೆ ಬರುತ್ತದೆ. ಹಿಜಾಬ್ ಅನ್ನು ಆಯ್ಕೆ ಎನ್ನುವವರು ಅಜ್ಞಾನದಿಂದ ಹೀಗೆ ಮಾತನಾಡುತ್ತಿದ್ದಾರೆ. ಹಿಜಾಬ್ ಧರಿಸಿದ ಮಹಿಳೆ ತಾನು ನಂಬಿದ ದೇವರು ತನಗೆ ಒಪ್ಪಿಸಿದ ಹೊಣೆಯನ್ನು ಪೂರೈಸುತ್ತಾಳೆ. ನಾನು ಒಬ್ಬ ಮಹಿಳೆಯಾಗಿ ಹಿಜಾಬ್ ಅನ್ನು ನಮ್ರತೆಯಿಂದ ಧರಿಸುತ್ತಿದ್ದೇನೆ. ಕೇವಲ ಧಾರ್ಮಿಕ ಹಿತಾಸಕ್ತಿಗಾಗಿ, ಈ ವ್ಯವಸ್ಥೆಯನ್ನುಹದಗೆಡಿಸಿ, ವಿರೋಧಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಿ ." ಎಂದು ಹೇಳಿದ್ದಾರೆ.

    ಹಿಜಾಬ್ ಮತ್ತು ಶಿಕ್ಷಣ ಎನ್ನುವುದು ಅನ್ಯಾಯ

    "ಮುಸ್ಲಿಂ ಮಹಿಳೆಯರ ವಿರುದ್ಧ ಈ ಪಕ್ಷಪಾತ ಮಾಡುವುದು ಮತ್ತು ಶಿಕ್ಷಣ ಮತ್ತು ಹಿಜಾಬ್ ನಡುವೆ ಅವರು ನಿರ್ಧರಿಸಬೇಕಾದ ವ್ಯವಸ್ಥೆಗಳನ್ನು ಹುಟ್ಟುಹಾಕುವುದು ಸಂಪೂರ್ಣ ಅನ್ಯಾಯ. ನಿರ್ದಿಷ್ಟವಾದ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ನೀವು ಮಾಡುತ್ತಿರುವ ಒತ್ತಾಯ ನಿಮ್ಮ ಅಜೆಂಡಾವನ್ನು ತಿಳಿಸುತ್ತದೆ. ನೀವು ಹುಟ್ಟಾಕಿದ ಜಾಲದಲ್ಲಿ ಅವರು ಬೀಳದೆ ಇದ್ದರೆ, ಅವರನ್ನು ಟೀಕೆಗೆ ಒಳಪಡಿಸುತ್ತೀರಿ." ಎಂದು ಝೈರಾ ವಾಸಿಂ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಝೈರಾ ವಾಸಿಂಗೆ ಬೆಂಬಲ

    ಝೈರಾ ವಾಸಿಂಗೆ ಬೆಂಬಲ

    ಸೋಶಿಯಲ್ ಮೀಡಿಯಾದಲ್ಲಿ ಝೈರಾ ವಾಸಿಂ ಫೋಸ್ಟ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. "ಕಟು ಸತ್ಯ.. ನಾನು ಸಲ್ಯೂಟ್ ಮಾಡುತ್ತೇನೆ.. ನಮ್ಮೆಲರನ್ನೂ ಅಲ್ಲ ಸರಿದಾರಿಯನ್ನು ತೋರಿಸಲಿ." ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಹಿಜಾಬ್ ಬಗ್ಗೆ ಬರೆದ ಪೋಸ್ಟ್ ವೈರಲ್ ಆಗುತ್ತಿದೆ. ಝೈರಾ ವಾಸಿಂ ಅಭಿಪ್ರಾಯಗಳಿಗೆ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಲಿವುಡ್ ಮಾಜಿ ನಟಿಗೆ ಬೆಂಬಲ ವ್ಯಕ್ತವಾಗುತ್ತಿದೆ.

    ನಟನೆಗೆ ಗುಡ್‌ಬೈ ಹೇಳಿದ್ದ ಝೈರಾ

    ನಟನೆಗೆ ಗುಡ್‌ಬೈ ಹೇಳಿದ್ದ ಝೈರಾ

    ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ 'ದಂಗಲ್' ಚಿತ್ರದಲ್ಲಿ ಆಮಿರ್ ಖಾನ್ ಮಗಳಾಗಿ ಕಾಣಿಸಿಕೊಂಡು ಮಗನ ಸೆಳೆದಿದ್ದರು. ಬಳಿಕ ಆಮಿರ್ ಖಾನ್ ನಿರ್ಮಾಣದ 'ಸೀಕ್ರೆಟ್ ಸೂಪರ್‌ಸ್ಟಾರ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ, 2019 ಜೂನ್ ತಿಂಗಳಲ್ಲಿ, "ಧರ್ಮದ ಜೊತೆಗಿನ ಸಂಬಂಧಕ್ಕೆ ನಟನೆ ಅಡ್ಡಿಯುಂಟು ಮಾಡುತ್ತದೆ. ಸಿನಿಮಾಗೆ ಕಾಲಿಟ್ಟಾಗ ಜನರು ನನ್ನ ರೋಲ್ ಮಾಡಲ್ ಎಂದು ಕೊಂಡಾಡಿದ್ದರು. ಆದರೆ, ನಾನು ಎಂದಿಗೂ ಹಾಗಬೇಕು ಎಂದುಕೊಂಡಿರಲಿಲ್ಲ. ನಟಿಯಾಗಿ ಇರಲಿ ನನಗೆ ಕಷ್ಟವಾಗುತ್ತಿದ್ದು. ಬೇರೆ ಯಾರೋ ಆಗಿರಲು ನನ್ನಿಂದ ಸಾಧ್ಯವಿಲ್ಲ." ಎಂದು ಚಿತ್ರರಂಗಕ್ಕೆ ಗುಡ್‌ ಬೈ ಹೇಳಿದ್ದರು.

    English summary
    Zaira Wasim on the hijab row choice between education or the hijab is an absolute injustice to muslim women.
    Monday, February 21, 2022, 9:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X