De De Pyaar De 2 Box Office: ಅಜಯ್ ದೇವಗನ್-ಮಾಧನ್ ಕಾಮಿಡಿ ಓಕೆ.. ಬಾಕ್ಸಾಫೀಸ್ ಕಥೆಯೇನು?
ಬಾಲಿವುಡ್‌ನಲ್ಲಿ ಸೀಕ್ವೆಲ್ಸ್ ವರ್ಕ್ ಔಟ್ ಆಗುತ್ತಾ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಗೋದು ಬಾಕಿಯಿದೆ. ಈ ವಾರ ಅಜಯ್ ದೇವಗನ್, ರಕುಲ್ ಪ್ರೀತ್ ಸಿಂಗ್, ಆರ್.ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ದೇ ದೇ ಪ್ಯಾರ್ ದೇ 2' ರಿಲೀಸ್ ಆಗಿದೆ. ಇದು ಆರು ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ದೇ ದೇ ಪ್ಯಾರ್ ದೇ' ಸಿನಿಮಾದ ಸೀಕ್ವೆಲ್. ಹೀಗಾಗಿ ಬಾಲಿವುಡ್ ಮಂದಿ ಈ ಸೀಕ್ವೆಲ್ ಮೇಲೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
'ದೇ ದೇ ಪ್ಯಾರ್ ದೇ 2' ಸಿನಿಮಾದಲ್ಲಿ ಕಾಮಿಡಿ ಹಾಗೂ ಎಮೋಷನ್ಸ್ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇದೊಂದು ಮಲ್ಟಿಸ್ಟಾರರ್ ಸಿನಿಮಾ ಆಗಿದ್ದರೂ ಅಜಯ್ ದೇವಗನ್ ಹಾಗೂ ರಕುಲ್ ಪ್ರೀತ್ ಸಿಂಗ್ ಲೀಡ್ ರೋಲ್‌ನಲ್ಲಿದ್ದಾರೆ. ಆರು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಈಗ ಆ ಸಿನಿಮಾದ ಸೀಕ್ವೆಲ್ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ.

'ದೇ ದೇ ಪ್ಯಾರ್ ದೇ 2' ಸಿನಿಮಾದ ಮೂಲಕ ರಕುಲ್ ಪ್ರೀತ್ ಸಿಂಗ್ ಕಮ್ ಬ್ಯಾಕ್ ಮಾಡಿದ್ದಾರೆ. ಇವರ ಕರಿಯರ್‌ಗೂ ಈ ಸಿನಿಮಾ ಗೆಲ್ಲಲೇ ಬೇಕಿದೆ. ಇನ್ನೊಂದು ಕಡೆ ಅಜಯ್ ದೇವಗನ್ ಕಾಮಿಡಿ ಸೆನ್ಸ್‌ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತೇ? ಮೊದಲ ದಿನ ಈ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ದೇ ದೇ ಪ್ಯಾರ್ ದೇ 2' ಡೇ 1 ಕಲೆಕ್ಷನ್
ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ದೇ ದೇ ಪ್ಯಾರ್ ದೇ 2' ನವೆಂಬರ್ 14ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಅಜಯ್ ದೇವಗನ್, ರಕುಲ್ ಪ್ರೀತ್ ಸಿಂಗ್ ನಟಿಸಿದ 2019ರ 'ದೇ ದೇ ಪ್ಯಾರ್ ಡೇ' ಕಥೆ ಇಲ್ಲೂ ಮುಂದುವರೆದಿದೆ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ, ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ ಮೊದಲ ದಿನ ಭಾರತದಾದ್ಯಂತ ಕೇವಲ ₹8.5 ಕೋಟಿ (Net) ಕಲೆಕ್ಷನ್ ಆಗಿದೆ. ಅಜಯ್ ದೇವಗನ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಕಲೆಕ್ಷನ್ ತೀರಾ ಕಡಿಮೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್.
ಆಕ್ಯೂಪೆನ್ಸಿ ಹೇಗಿದೆ?
'ದೇ ದೇ ಪ್ಯಾರ್ ದೇ 2' ಸಿನಿಮಾ ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ, ಅಡ್ವಾನ್ಸ್ ಬುಕಿಂಗ್‌ನಿಂದ 30 ಸಾವಿರ ಟಿಕೆಟ್‌ಗಳು ಸೇಲ್ ಆಗುವ ನಿರೀಕ್ಷೆಯಿತ್ತು. ಆದರೆ, ಕೇವಲ 16 ಸಾವಿರ ಟಿಕೆಟ್‌ಗಳು ಮಾತ್ರ ಸೇಲ್ ಆಗಿತ್ತು. ಹಾಗೇ ಮೊದಲ ದಿನ ಥಿಯೇಟರ್‌ನಲ್ಲೂ ಪ್ರೇಕ್ಷಕರು ಸಿನಿಮಾ ನೋಡಿದ್ದು ಅಷ್ಟಕ್ಕಷ್ಟೇ. ಸ್ಯಾಕ್ನಿಲ್ಕ್ ಪ್ರಕಾರ, ಮಾರ್ನಿಂಗ್ ಶೋ ಕೇವಲ ಶೇ.7.46 ಆಕ್ಯೂಪೆನ್ಸಿ ಇದ್ದರೆ, ಮಧ್ಯಾಹ್ನದ ಶೋ ಶೇ.10.66, ಸಂಜೆ ಶೋ ಶೇ.12.80, ರಾತ್ರಿ ಶೋ ಶೇ.25.26 ರಷ್ಟಿತ್ತು.

'ದೇ ದೇ ಪ್ಯಾರ್ ದೇ' ಕಲೆಕ್ಷನ್ ಎಷ್ಟಿತ್ತು?
2019ರಲ್ಲಿ ತೆರೆಕಂಡಿದ 'ದೇ ದೇ ಪ್ಯಾರ್ ದೇ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಮೊದಲ ದಿನವೇ ₹10.41 ಕೋಟಿ ಕಲೆಕ್ಷನ್ ಮಾಡಿತ್ತು. ವಿದೇಶದಲ್ಲಿ 650 ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದರೆ, ಭಾರತದಲ್ಲಿ 3200 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಲೈಫ್ ಟೈಮ್ ಕಲೆಕ್ಷನ್ ₹104.13 ಕೋಟಿ ಹಾಗೂ ವಿಶ್ವದಾದ್ಯಂತ ₹143 ಕೋಟಿ ಕಲೆಕ್ಷನ್ ಮಾಡಿತ್ತು. ಹೀಗಾಗಿ ಈ ಸಿನಿಮಾದ ಕಲೆಕ್ಷನ್ ಮೇಲೂ ನೀರಿಕ್ಷೆಯಿದೆ. ವೀಕೆಂಡ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ ಇನ್ನೂ ಹೆಚ್ಚಾಗಬಹುದೆಂಬ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











