Yuddhakaanda 2 Box Office Day 8:8ನೇ ದಿನ 'ಯುದ್ಧಕಾಂಡ 2' ಕಲೆಕ್ಷನ್‌ ಏರಿಕೆ ಆಯ್ತಾ? ಇಳಿಕೆ ಆಯ್ತಾ?

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾಗಳ ಅಗತ್ಯವಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆಗೆ ಉತ್ತಮ ಕತೆಯನ್ನು ಆಧರಿಸಿದ ಚಿತ್ರಗಳ ಅವಶ್ಯಕತೆಯಿದೆ. ಕನ್ನಡ ಚಿತ್ರರಂಗ ತೀರ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಅಜಯ್ ರಾವ್ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪ್ರಯೋಗಕ್ಕೆ ಒಳಪಡದ ಕೋರ್ಟ್ ರೂಮ್ ಡ್ರಾಮಾ ಶೈಲಿಯ ಸಬ್ಜೆಕ್ಟ್‌ ಅನ್ನು ಆಯ್ಕೆ ಮಾಡಿಕೊಂಡು, ನಟಿಸಿದ್ದಷ್ಟೇ ಅಲ್ಲದೆ ನಿರ್ಮಾಣ ಕೂಡ ಮಾಡಿದ್ದರು. ಅದುವೇ 'ಯುದ್ಧಕಾಂಡ ಚಾಪ್ಟರ್ 2'.

'ಯುದ್ಧಕಾಂಡ ಚಾಪ್ಟರ್ 2' ಬಿಡುಗಡೆಯಾಗಿ ಒಂದು ವಾರ ಕಳೆದು ಹೋಗಿದೆ. ಸಮಾಜದಲ್ಲಿರುವ ಅತ್ಯಾಚಾರದಂತಹ ಗಂಭೀರ ಸಮಸ್ಯೆಯನ್ನು ಇಟ್ಟುಕೊಂಡು ಕೋರ್ಟ್‌ ರೂಮ್ ಡ್ರಾಮಾವನ್ನು ಸೃಷ್ಟಿಸಲಾಗಿತ್ತು. ಪವನ್ ಭಟ್ ಈ ಸಿನಿಮಾವನ್ನು ನಿರ್ದೇಶಿಸಿದ್ದರೆ, ಅಜಯ್ ರಾವ್ ನಾಯಕನಾಗಿ ನಟಿಸುವುದರ ಜೊತೆ ನಿರ್ಮಾಣಕ್ಕೂ ಕೈ ಹಾಕಿದ್ದರು. ಈಗಾಗಲೇ ಹೇಳಿಕೊಂಡಂತೆ ಈ ಸಿನಿಮಾಗೆ ಸುಮಾರು 6 ರಿಂದ 8 ಕೋಟಿ ರೂಪಾಯಿ ಖರ್ಚಾಗಿದೆ.

Ajay Rao courtroom drama Yuddhakaanda 2 box office collection day 8 report

ಹಾಗಿದ್ದರೆ, 'ಯುದ್ಧಕಾಂಡ 2' ಹಾಕಿದ ಹಣವನ್ನು ವಾಪಾಸ್ ಪಡೆಯುತ್ತಾ? ಈ ಎಂಟು ದಿನಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ಸ್ಲೋ ಅಂಡ್ ಸ್ಟಡಿಯಾಗಿ ಮುನ್ನುಗ್ಗುತ್ತಿದ್ದ 'ಯುದ್ಧಕಾಂಡ 2' ಎಂಟನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಹಾಕಿದ ಬಂಡವಾಳವನ್ನು ಎತ್ತಿಕೊಳ್ಳುತ್ತಾ? ಎರಡನೇ ಈ ಸಿನಿಮಾದ ಭವಿಷ್ಯ ಏನಿರುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಯುದ್ಧಕಾಂಡ 2' 8ನೇ ದಿನದ ಕಲೆಕ್ಷನ್ ಏನು?

ಅಜಯ್ ರಾವ್ ನಟಿಸಿದ 'ಯುದ್ಧಕಾಂಡ 2'ಕ್ಕೆ ಫಸ್ಟ್ ಡೇ ಫಸ್ಟ್ ಶೋ ಉತ್ತಮ ಪ್ರತಿಕ್ರಿಯೆ ಏನೋ ಸಿಕ್ಕಿತ್ತು. ಆದರೆ, ಅಂದುಕೊಂಡಷ್ಟು ಜನರು ಥಿಯೇಟರ್‌ ಕಡೆಗೆ ನುಗ್ಗಿ ಬಂದಿಲ್ಲ. ಬಾಕ್ಸಾಫೀಸ್‌ನಲ್ಲಿ ಕಳೆದ ಏಳು ದಿನಗಳಿಂಲೂ ಹೆಚ್ಚು ಕಡಿಮೆ ಒಂದೇ ಮೊತ್ತದ ಕಲೆಕ್ಷನ್ ಆಗುತ್ತಿದೆ. ಇನ್ನು ಎಂಟನೇ ದಿನ ಕಲೆಕ್ಷನ್‌ನಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, 8ನೇ ದಿನ 'ಯುದ್ಧಕಾಂಡ 2' ಬಾಕ್ಸಾಫೀಸ್ ಕಲೆಕ್ಷನ್ 26 ಲಕ್ಷ ರೂಪಾಯಿ. ಏಳನೇ ದಿನ ಕೂಡ ಹೆಚ್ಚು ಕಡಿಮೆ ಇಷ್ಟೇ ಕಲೆಕ್ಷನ್ ಆಗಿತ್ತು. ಅಂದರೆ, 24 ಲಕ್ಷ ರೂಪಾಯಿ.

Ajay Rao courtroom drama Yuddhakaanda 2 box office collection day 8 report

8 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಯುದ್ಧಕಾಂಡ ಚಾಪ್ಟರ್ 2' ಬಾಕ್ಸಾಫೀಸ್‌ ಲೆಕ್ಕಾಚಾರ ಹಾಕುವುದು ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಚಾಲೆಂಜಿಂಗ್ ಆಗಿದೆ. ಯಾಕಂದ್ರೆ, ಕಳೆದ 8 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಎರಡು ಮೂರು ಲಕ್ಷಗಳಲ್ಲಿ ವ್ಯತ್ಯಾಸ ಕಾಣುತ್ತಿದೆ. ಈ ಎಂಟೂ ದಿನಗಳಲ್ಲಿ ಒಂದೇ ಕಲೆಕ್ಷನ್ ಆಗುತ್ತಿದೆ. ತೀರಾ ಏರಿಕೆಯೂ ಆಗುತ್ತಿಲ್ಲ. ಇಲ್ಲ ಇಳಿಕೆನೂ ಆಗುತ್ತಿಲ್ಲ ಈ 8 ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 2.27 ಕೋಟಿ ರೂಪಾಯಿ (Net) ಆಗಿದ್ದರೆ, 2.53 ಕೋಟಿ (Gross) ಆಗಿದೆ ಎನ್ನುತ್ತಿದೆ ಸ್ಯಾಕ್ನಿಲ್ಕ್.

ಮೊದಲ ದಿನ - ₹24 ಲಕ್ಷ
2ನೇ ದಿನ - ₹33 ಲಕ್ಷ
3ನೇ ದಿನ - ₹30 ಲಕ್ಷ
4ನೇ ದಿನ - ₹32 ಲಕ್ಷ
5ನೇ ದಿನ - ₹31 ಲಕ್ಷ
6ನೇ ದಿನ - ₹27 ಲಕ್ಷ
7ನೇ ದಿನ - ₹24 ಲಕ್ಷ
8ನೇ ದಿನ - ₹26 ಲಕ್ಷ
ಒಟ್ಟು - ₹2.27 ಕೋಟಿ (Net)

ವೀಕೆಂಡ್‌ನಲ್ಲಿ ಮೋಡಿ ಮಾಡುತ್ತಾ?

'ಯುದ್ಧಕಾಂಡ 2' ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಈ ವೀಕೆಂಡ್‌ನಲ್ಲಿ ಏನಾದರೂ ಸದ್ದು ಮಾಡುತ್ತಾ ಎನ್ನುವುದನ್ನು ನೋಡಬೇಕಿದೆ. ಶನಿವಾರ ಹಾಗೂ ಭಾನುವಾರ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಏರಿಕೆಯಾದರೆ, ಸಿನಿಮಾದ ಕಲೆಕ್ಷನ್ ಮೂರು ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ. ಅಲ್ಲದೆ ಮುಂದಿನ ವಾರ ಕೂಡ ಯಾವುದೇ ಬಿಗ್ ಸಿನಿಮಾಗಳಿಲ್ಲ. ಹೀಗಾಗಿ 4 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Rao courtroom drama Yuddhakaanda 2 box office collection day 8 report;
Read more about: ajay rao sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X