Yuddhakaanda 2 Box Office Day 6: 6ನೇ ದಿನ ಬಾಕ್ಸಾಫೀಸ್‌ನಲ್ಲಿ ಯುದ್ಧ ಗೆದ್ದಿತೇ 'ಯುದ್ಧಕಾಂಡ 2'?

ಸ್ಯಾಂಡಲ್‌ವುಡ್‌ನಲ್ಲಿ ಅಪರೂಪಕ್ಕೆ ಎಂಬಂತೆ ಕೋರ್ಟ್ ರೂಮ್ ಡ್ರಾಮ ಶೈಲಿಯ ಸಿನಿಮಾ ಬಂದಿದೆ. ಅಜಯ್ ರಾವ್ ಈ ಪ್ರಯತ್ನ ಮುಂದಾಗಿದ್ದರು. ಸಾಕಷ್ಟು ಸವಾಲುಗಳನ್ನು ಎದುರಿಸಿ 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ಈಗ ಒಂದು ವಾರ ಕಳೆದಿದೆ. ಗಂಭೀರ ಸಮಸ್ಯೆಯನ್ನು ಹೊತ್ತು ಬಂದಿರುವ ಈ ಸಿನಿಮಾಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಕೋರ್ಟ್ ರೂಮ್ ಡ್ರಾಮ ಶೈಲಿಯ ಸಿನಿಮಾಗಳು ಬಾಲಿವುಡ್‌ನಲ್ಲಿ ಹೆಚ್ಚಾಗಿ ಯಶಸ್ಸು ಕಂಡಿವೆ. ಅದೇ ಜಾಡನ್ನು ಹಿಡಿದು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಬೇರೆ ಬೇರೆಯಲ್ಲಿ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಕನ್ನಡ ಚಿತ್ರರಂಗದಲ್ಲಿ 'ಯುದ್ಧಕಾಂಡ ಚಾಪ್ಟರ್ 2' ಇಂತಹದ್ದೇ ಒಂದು ಪ್ರಯತ್ನಕ್ಕೆ ಸಾಕ್ಷಿ. ಈ ಹಿಂದೆ ಬಂದ ಕೆಲವು ಸಿನಿಮಾಗಳಲ್ಲಿ ಕೋರ್ಟ್‌ ರೂಮ್ ಸೀನ್‌ಗಳಿತ್ತು. ಆದರೆ, ಅವು ಯಶಸ್ಸಿ ಹಾದಿ ಹಿಡಿಯುವಲ್ಲಿ ಸೋತಿದ್ದವು.

Ajay Rao film Yuddhakaanda chapter 2 Karnataka Box office day 6 collection report

ಈಗ ಅಜಯ್ ರಾವ್ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಇದೂವರೆಗೂ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಏರಿಳಿತಗಳಿಲ್ಲ. ಒಂದೇ ರೀತಿಯ ಕಲೆಕ್ಷನ್ ಆಗುತ್ತಿದೆ. ಕಳೆದ ಆರು ದಿನಗಳಲ್ಲಿ 'ಯುದ್ಧಕಾಂಡ 2' ಸಿನಿಮಾ ಬಾಕ್ಸಾಫೀಸ್‌ ಕಲೆಕ್ಷನ್ ಹೇಗಿದೆ? ಆರನೇ ದಿನ ಗಳಿಕೆಯಲ್ಲಿ ಚೇತರಿಕೆ ಕಂಡಿತೇ? ಇಲ್ಲವೇ? ಅನ್ನೋದನ್ನು ತಿಳಿಯಲು ಮುಂದೆ ಓದಿ.

6ನೇ ದಿನ 'ಯುದ್ಧಕಾಂಡ 2' ಕಲೆಕ್ಷನ್

ಅಜಯ್ ರಾವ್ ನಿರ್ಮಿಸಿ, ನಟಿಸಿದ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್‌ ವಿತರಣೆ ಮಾಡಿತ್ತು. ಕಳೆದ ವಾರ ರಿಲೀಸ್ ಆಗಿದ್ದ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ತೆರೆಮೇಲೆ ಅಜಯ್ ರಾವ್ ಹಾಗೂ ಪ್ರಕಾಶ್ ಬೆಳವಾಡಿಯವರ ವಾದ-ವಿವಾದಗಳು ಸಿನಿಪ್ರಿಯರಿಗೆ ಥ್ರಿಲ್ಲಿಂಗ್ ಎಕ್ಸ್‌ಪೀರಿಯನ್ಸ್ ಕೊಟ್ಟಿದೆ. ಹೀಗಾಗಿ ಸಿನಿಮಾ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಆಗಿ ಪರಿವರ್ತನೆಯಾಗಿಲ್ಲ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ನಿನ್ನೆ (ಏಪ್ರಿಲ್ 23) ಆರನೇ ದಿನ 27 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ.

Ajay Rao film Yuddhakaanda chapter 2 Karnataka Box office day 6 collection report

6 ದಿನಗಳಲ್ಲಿ ₹2 ಕೋಟಿ ದಾಟಿತೇ?

ಕನ್ನಡ ಚಿತ್ರರಂಗದ ಪರಿಸ್ಥಿತಿ ಕೆಟ್ಟದಾಗಿದೆ. ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಸಿನಿಮಗಳನ್ನು ರಿಲೀಸ್ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಇದರ ಹೊರತಾಗಿಯೂ 'ಯುದ್ಧಕಾಂಡ 2' ಸಿನಿಮಾವನ್ನು ರಿಲೀಸ್ ಮಾಡಿದ್ದರು. ಕಳೆದ ಆರು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 33 ರಿಂದ 24 ಲಕ್ಷ ರೂಪಾಯಿಯ ನಡುವೆಯೇ ಆಗುತ್ತಿದೆ. ಸ್ಲೋ ಅಂಡ್ ಸ್ಟಡಿಯಾಗಿ ಸಿನಿಮಾ ಮುನ್ನುಗುತ್ತಿದೆ. ಆರು ದಿನಗಳಲ್ಲಿ ಈ ಸಿನಿಮಾ 1.77 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಮೊದಲ ದಿನ ₹24 ಲಕ್ಷ
2ನೇ ದಿನ ₹33 ಲಕ್ಷ
3ನೇ ದಿನ ₹30 ಲಕ್ಷ
4ನೇ ದಿನ ₹32 ಲಕ್ಷ
5ನೇ ದಿನ ₹31 ಲಕ್ಷ
6ನೇ ದಿನ ₹27 ಲಕ್ಷ
ಒಟ್ಟು ₹1.77 ಕೋಟಿ

ಕಲೆಕ್ಷನ್ ಬಗ್ಗೆ ಅಜಯ್ ರಾವ್ ಏನಂತಾರೆ?

ಅಜಯ್ ರಾವ್ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಖುಷಿಯಾಗಿದ್ದಾರೆ. ಸಿನಿಮಾ ಗೆದ್ದಿದೆ ಎಂದು ಖುಷಿ ಪಟ್ಟಿದ್ದಾರೆ. ಹಾಕಿದ ಬಂಡವಾಳ ಬರುವುದಕ್ಕೆ ಇನ್ನೂ ಸಮಯಬೇಕು. ಆದರೆ, ಜನರಿಗೆ ಇಷ್ಟ ಆಗಿದ್ದೇ ದೊಡ್ಡ ಗೆಲುವು ಎಂದಿದ್ದಾರೆ. ಅಲ್ಲದೆ, ಸಿನಿಮಾ ನಿಧಾನವಾಗಿ ಮುಂದಕ್ಕೆ ಸಾಗುತ್ತಿದ್ದು, ತಾಳ್ಮೆಯಿಂದ ಕಾಯುತ್ತೇವೆ ಎಂದು ಸಕ್ಸಸ್ ಮೀಟ್‌ನಲ್ಲಿ ಅಜಯ್ ರಾವ್ ಹೇಳಿಕೊಂಡಿದ್ದರು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Rao film Yuddhakaanda chapter 2 Karnataka Box office day 6 collection report;
Read more about: ajay rao sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X