Yuddhakaanda 2 Box Office Day 7: ವಾರ ಕಳೆದು ಹೋಯ್ತು, 'ಯುದ್ಧಕಾಂಡ 2' ಭವಿಷ್ಯ ಏನಾಯ್ತು?

ಅಜಯ್ ರಾವ್ ನಟಿಸಿ, ನಿರ್ಮಿಸಿದ ಸಿನಿಮಾ 'ಯುದ್ಧಕಾಂಡ ಚಾಪ್ಟರ್ 2' ನೋಡುವುದಕ್ಕೆ ದಿನದಿಂದ ದಿನಕ್ಕೆ ಜನರ ಹೆಚ್ಚಾಗುತ್ತಿದ್ದಾರೆ. ಸಮಾಜದ ಗಂಭೀರ ಸಮಸ್ಯೆ ಮೇಲೆ ಬೆಳಕು ಚೆಲ್ಲಿರುವ ಈ ಸಿನಿಮಾ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ. ಸ್ಟಾರ್‌ಗಿರಿಯನ್ನು ಬಿಟ್ಟು ಸಮಸ್ಯೆಯೊಂದರ ವಿರುದ್ಧ ಹೋರಾಡುವ ಅಜಯ್ ರಾವ್ ಸಿನಿಮಾವನ್ನು ಇಷ್ಟ ಪಡುತ್ತಿದ್ದಾರೆ.

'ಯುದ್ಧಕಾಂಡ ಚಾಪ್ಟರ್ 2' ಅನ್ನು ಜನರು ನಿಧಾನವಾಗಿ ಇಷ್ಟ ಪಡುವುದಕ್ಕೆ ಶುರು ಮಾಡಿದ್ದಾರೆ. ರೆಗ್ಯೂಲರ್ ಲವ್ ಸ್ಟೋರಿ, ಆಕ್ಷನ್ ಸಿನಿಮಾಗಳಿಗಿಂತ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಕೋರ್ಟ್ ರೂಮ್ ಡ್ರಾಮ ಸಾಮಾನ್ಯವಾಗಿ ಗೆದ್ದಿರುವ ಉದಾಹರಣೆ ಕಮ್ಮಿಯಿದೆ. ಆದರೆ, ಪರಭಾಷೆಯಲ್ಲಿ ಕೋರ್ಟ್ ರೂಮ್‌ ಡ್ರಾಮ ಶೈಲಿಯ ಸಿನಿಮಾಗಳು ಬಾಕ್ಸಾಫೀಸ್‌ ಅನ್ನು ಕೊಳ್ಳೆಯುತ್ತಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಸಿಗುತ್ತವೆ.

Ajay Rao film Yuddhakaanda chapter 2 Karnataka Box office day 7 collection report

ಈ ಕಾರಣಕ್ಕೆ ಅಜಯ್ ರಾವ್ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದರು. ಸಿನಿಮಾ ಬಿಡುಗಡೆಗೆ ಅಡೆತಡೆಗಳಾಗಿದ್ದರೂ, ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿತ್ತು. ವಿಶೇಷ ಅಂದರೆ, 'ಯುದ್ಧಕಾಂಡ 2' ರಿಲೀಸ್ ಆದ ದಿನದಿಂದ ಇಲ್ಲಿವರೆಗೂ ನಿಧಾನಗತಿಯಲ್ಲಿಯೇ ಮುನ್ನುಗ್ಗುತ್ತಿದೆ. ಥಿಯೇಟರ್‌ನಲ್ಲಿ ಸರಿಯಾಗಿ ಏಳು ದಿನಗಳನ್ನು ಪೂರೈಸಿರುವ ಈ ಸಿನಿಮಾ ಗಳಿಸಿದ್ದೆಷ್ಟು? ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕಲೆಕ್ಷನ್ ಆಗಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

7ನೇ ದಿನ 'ಯುದ್ಧಕಾಂಡ 2' ಗಳಿಸಿದ್ದೆಷ್ಟು?

ಅಜಯ್ ರಾವ್ 'ಯುದ್ಧಕಾಂಡ 2' ಟ್ರೇಡ್ ಎಕ್ಸ್‌ಪರ್ಟ್‌ಗಳನ್ನು ಗೊಂದಲಕ್ಕೆ ಸಿಲುಕಿದೆ. ಯಾಕಂದ್ರೆ, ಈ ಸಿನಿಮಾ ಹಿಟ್ ಅಂತಲೂ ಹೇಳುವುದಕ್ಕೆ ಆಗುತ್ತಿಲ್ಲ. ಫ್ಲಾಪ್ ಅಂತಲೂ ಹೇಳುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಕಾರಣ ಕಳೆದ ಏಳು ದಿನಗಳಿಂದ ಆಗುತ್ತಿರುವ ಬಾಕ್ಸಾಫೀಸ್ ಕಲೆಕ್ಷನ್. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, 'ಯುದ್ಧಕಾಂಡ 2' ಸಿನಿಮಾ ಏಳನೇ ದಿನ 24 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ಆರನೇ ದಿನ ಈ ಸಿನಿಮಾ ಕಲೆಕ್ಷನ್ 27 ಲಕ್ಷ ರೂಪಾಯಿ ಆಗಿತ್ತು. ವೀಕ್‌ ಡೇಸ್‌ನಲ್ಲೂ ಕಲೆಕ್ಷನ್ ಸ್ಥಿರವಾಗಿರುವುದು ಸಿನಿಮಾ ಮಂದಿಗೆ ಅಚ್ಚರಿ ಮೂಡಿಸಿದೆ.

ಏಳು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಯುದ್ಧಕಾಂಡ 2' ಸಿನಿಮಾಗೆ ಈ ಏಳು ದಿನಗಳಲ್ಲಿ ಸಿಕ್ಕಿರುವ ರೆಸ್ಪಾನ್ಸ್ ನೋಡದರೆ, ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಹೆಚ್ಚಾಗಬೇಕಿತ್ತು. ಆದರೆ, ಏಳು ದಿನಗಳಿಂದ ಒಂದೇ ತರಹದ ಕಲೆಕ್ಷನ್ ಆಗಿದೆ. ಇದು ಅಪರೂಪದಲ್ಲಿ ಅಪರೂಪ. ಇತ್ತೀಚೆಗೆ ಸಕ್ಸಸ್ ಮೀಟ್‌ನಲ್ಲಿ ನಟ ಅಜಯ್ ರಾವ್ ನಿಧಾನವಾಗಿ ಸಿನಿಮಾ ಗೆದ್ದರೂ ಪರ್ವಾಗಿಲ್ಲ. ನನ್ನಲ್ಲಿ ತಾಳ್ಮೆಯಿದ್ದು, ಕಾಯುತ್ತೇನೆ. ಈ ಸಿನಿಮಾ 100 ದಿನಗಳನ್ನು ಪೂರೈಸುತ್ತೆ ಎಂದು ಹೇಳಿದ್ದರು. ಸದ್ಯ ಒಂದು ವಾರದಲ್ಲಿ 'ಯುದ್ಧಕಾಂಡ 2' ಸಿಇಮಾ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದರ ಡಿಟೈಲ್ಸ್ ಇಲ್ಲಿದೆ.

Ajay Rao film Yuddhakaanda chapter 2 Karnataka Box office day 7 collection report

ಮೊದಲ ದಿನ ₹24 ಲಕ್ಷ
2ನೇ ದಿನ ₹33 ಲಕ್ಷ
3ನೇ ದಿನ ₹30 ಲಕ್ಷ
4ನೇ ದಿನ ₹32 ಲಕ್ಷ
5ನೇ ದಿನ ₹31 ಲಕ್ಷ
6ನೇ ದಿನ ₹27 ಲಕ್ಷ
7ನೇ ದಿನ ₹24 ಲಕ್ಷ
ಒಟ್ಟು ₹2.01 ಕೋಟಿ

ವೀಕೆಂಡ್‌ನಲ್ಲಿ ಹೆಚ್ಚಾಗುತ್ತಾ ಕಲೆಕ್ಷನ್?

'ಯುದ್ಧಕಾಂಡ 2' ಸಿನಿಮಾಗೆ ಎರಡನೇ ವೀಕೆಂಡ್ ಶುರುವಾಗಿದೆ. ಮೊದಲ ವೀಕೆಂಡ್‌ ಹೆಚ್ಚೇನೂ ಲಾಭ ಆಗಿರಲಿಲ್ಲ.ಆದರೆ, ಮೌತ್‌ ಪಬ್ಲಿಸಿಟಿ ನಿಧಾನವಾಗಿ ಕೆಲಸ ಮಾಡುತ್ತಿರುವ ಹಾಗಿದೆ. ಹೀಗಾಗಿ ಎರಡನೇ ವೀಕೆಂಡ್‌ನಲ್ಲಿ 'ಯುದ್ಧಕಾಂಡ 2' ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆಯಿದೆ. ಈಗಿನಷ್ಟೇ ಕಲೆಕ್ಷನ್ ಆದರೆ, 2.50 ಕೋಟಿಯಿಂದ 2.75 ಕೋಟಿ ಆಗಬಹುದು. ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ನಡೆದರೆ, 3 ಕೋಟಿಯಿಂದ 3.50 ಕೋಟಿ ರೂಪಾಯಿವರೆಗೂ ಆಗಬಹುದು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Rao film Yuddhakaanda chapter 2 Karnataka Box office day 7 collection report
Read more about: ajay rao sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X