Yuddhakaanda 2 Box Office Day 3: ಬಾಕ್ಸಾಫೀಸ್‌ನಲ್ಲಿ ಕೋಟಿ ದಾಟಿತೇ 'ಯುದ್ಧಕಾಂಡ 2'?
ಕಳೆದ ವಾರ ರಿಲೀಸ್ ಆಗಿದ್ದ 'ಯುದ್ಧಕಾಂಡ ಚಾಪ್ಟರ್ 2'ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ನೋಡಿದವರು 'ಯುದ್ಧಕಾಂಡ 2' ತಂಡಕ್ಕೆ ಭೇಷ್ ಎಂದಿದ್ದರು. ಅಜಯ್ ರಾವ್ ಹಾಗೂ ಅವರ ತಂಡವನ್ನು ಮೆಚ್ಚಿಕೊಂಡಿದ್ದರು. ಆದರೆ, ಮೊದಲ ಮೂರು ದಿನಗಳಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಗೆಲ್ಲುವುದಕ್ಕೆ ಹಿಂದೆ ಬಿದ್ದಿದೆ.
ಕನ್ನಡ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕಳೆದ ವಾರ ಎರಡು ಎರಡು ಕೋರ್ಟ್ ರೂಮ್ ಡ್ರಾಮ ಶೈಲಿಯ ಸಿನಿಮಾಗಳು ರಿಲೀಸ್ ಆಗಿದ್ದವು. ಬಾಲಿವುಡ್‌ನಲ್ಲಿ 'ಕೇಸರಿ 2' ಹಾಗೂ ಕನ್ನಡದಲ್ಲಿ 'ಯುದ್ಧಕಾಂಡ 2' ಈ ಎರಡೂ ಸಿನಿಮಾಗಳ ಬಗ್ಗೆ ಒಳ್ಳೆಯ ಒಪಿನಿಯನ್ ಸಿಕ್ಕಿದರೂ, ಸಿನಿಮಾ ಯಾಕೋ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿಲ್ಲ.

'ಯುದ್ಧಕಾಂಡ 2'ನಲ್ಲಿ ಅಜಯ್ ರಾವ್ ಹಾಗೂ ಪ್ರಕಾಶ್ ಬೆಳೆವಾಡಿಯ ಮುಖಾ ಮುಖಾಯೇ ಹೈಲೈಟ್. ಇವರಿಬ್ಬರ ಜಟಾಪಟಿ ಸ್ಕ್ರೀನ್ ಮೇಲೆ ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತೆ ಎನ್ನುವ ಅಭಿಪ್ರಾಯವಿದೆ. ಹಾಗೇ ಅರ್ಜನಾ ಜೋಯಿಸ್ ಅವರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗಿದ್ದರೆ, ಮೂರನೇ ದಿನ ಈ ಸಿನಿಮಾದ ಕಲೆಕ್ಷನ್ ಹೇಗಿದೆ? ಬಾಕ್ಸಾಫೀಸ್‌ನಲ್ಲಿ ಒಂದು ಕೋಟಿ ಕಲೆಕ್ಷನ್ ಮಾಡಿತೇ? ತಿಳಿಯುವುದಕ್ಕೆ ಮುಂದೆ ಓದಿ.
3ನೇ ದಿನ 'ಯುದ್ಧಕಾಂಡ 2' ಗಳಿಸಿದ್ದೆಷ್ಟು?
ಅಜಯ್ ರಾಜ್ ಸಿನಿಮಾ 'ಯುದ್ಧಕಾಂಡ 2' ಫಸ್ಟ್ ಡೇ ಫಸ್ಟ್ ಶೋ ಬಳಿಕ ನಿರೀಕ್ಷೆಯನ್ನು ಹುಟ್ಟಾಕಿತ್ತು. ರಜೆಗಳು ಇರುವುದರಿಂದ ಜನರು ಥಿಯೇಟರ್‌ಗೆ ಬಂದು ಸಿನಿಮಾವನ್ನು ನೋಡಬಹುದೆಂಬ ನಿರೀಕ್ಷೆ ಕೂಡ ಇತ್ತು. ಆದರೆ, ಇನ್ನೂ ಆ ಘಳಿಗೆ ಬಂದಿಲ್ಲ. ಈ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆಯೇನೋ ಸಿಕ್ಕಿದೆ. ಆದರೆ, ಅದು ಬಾಕ್ಸಾಫೀಸ್ ಸಕ್ಸಸ್ ಆಗಿ ಬದಲಾಗಬೇಕಿದೆ. ಸ್ಯಾಕ್ನಿಲ್ಕ್.ಕಾಮ್ ವರದಿ ಹೇಳುವಂತೆ 3ನೇ ದಿನ 'ಯುದ್ಧಕಾಂಡ 2' ಬಾಕ್ಸಾಫೀಸ್‌ನಲ್ಲಿ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳುತ್ತಿದೆ.

3 ದಿನಗಳಲ್ಲಿ ಕೋಟಿ ದಾಟಿತೇ ಕಲೆಕ್ಷನ್?
'ಯುದ್ಧಕಾಂಡ 2' ಮೂರು ದಿನಗಳಲ್ಲಿ ಒಂದು ಕೋಟಿಯನ್ನಾದರೂ ದಾಟಬಹುದೆಂಬ ನಿರೀಕ್ಷೆಯಿತ್ತು. ಒಟ್ಟು ಗಳಿಕೆಯ ಲೆಕ್ಕದಲ್ಲಿ ಒಂದು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ, 'ಯುದ್ಧಕಾಂಡ 2' ಮೂರು ದಿನಗಳಲ್ಲಿ 87 ಲಕ್ಷ ರೂಪಾಯಿ (Net)ಕಲೆಕ್ಷನ್ ಮಾಡಿದೆ. ಮೊದಲ ದಿನ 24 ಲಕ್ಷ ರೂಪಾಯಿ, ಎರಡನೇ ದಿನ 33 ಲಕ್ಷ ರೂಪಾಯಿ ಹಾಗೂ ಮೂರನೇ ದಿನ 30 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಮೂರನೇ ದಿನ ಭಾನುವಾರ ಆಗಿದ್ದರಿಂದ 50 ಲಕ್ಷ ರೂಪಾಯಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು.
ಸೋಮವಾರದ ಪರೀಕ್ಷೆ ಗೆಲ್ಲುತ್ತಾ?
ಯಾವುದೇ ಸಿನಿಮಾ ಇದ್ದರೂ, ಮೊದಲ ಮೂರು ದಿನ ಓಳ್ಳೆಯ ಕಲೆಕ್ಷನ್ ಆಗುತ್ತೆ. ಆದರೆ, ಅಸಲಿ ಪರೀಕ್ಷೆ ಎದುರಾಗುವುದು ಸೋಮವಾರ. ವಾರದ ಮೊದಲ ದಿನ ಸೋಮವಾರದಂದು ಚಿತ್ರಮಂದಿರಗಳಲ್ಲಿ ಉತ್ತಮ ಕಲೆಕ್ಷನ್ ಆದರೆ, ಸಿನಿಮಾ ಭವಿಷ್ಯದಲ್ಲಿ ಒಂದೊಳ್ಳೆ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಬಹುದು. ಹೀಗಾಗಿ ಸೋಮವಾರದ ಅಗ್ನಿಪರೀಕ್ಷೆಯಲ್ಲಿ ಅಜಯ್ ರಾಜ್ ಹಾಗೂ ತಂಡ ಗೆಲ್ಲಬೇಕಿದೆ.
ಭವಿಷ್ಯದ ಲೆಕ್ಕಾಚಾರವೇನು?
ಕರ್ನಾಟಕದ ವಿತರಕರ ಲೆಕ್ಕಾಚಾರದ ಪ್ರಕಾರ 'ಯುದ್ಧಕಾಂಡ 2' ಮೊದಲ ವಾರ 1.25 ಕೋಟಿಯಿಂದ 1.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು. ಮೊದಲ ವಾರದೊಳಗೆ ಮೌತ್ ಪಬ್ಲಿಸಿಟಿಯಾಗಿ ಜನರು ಥಿಯೇಟರ್‌ಗೆ ಬರೋಕೆ ಶುರು ಮಾಡಿದರೇ, ಈ ಸಿನಿಮಾ ಸೂಪರ್ ಸಕ್ಸಸ್ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಆದರೆ, ಆ ಚಮತ್ಕಾರ ಆಗುತ್ತಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











