Yuddhakaanda 2 Box Office Day 4: ಸೋಮವಾರದ ಪರೀಕ್ಷೆ ಗೆದ್ದಿತೇ ಅಜಯ್ ರಾವ್ 'ಯುದ್ಧಕಾಂಡ 2'?
ಅಜಯ್ ರಾವ್ ಬಹಳ ದಿನಗಳ ಬಳಿಕ ಚಿತ್ರಮಂದಿರಗಳ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. 'ಯುದ್ಧಕಾಂಡ 2' ಸಿನಿಮಾವನ್ನು ತಾವೇ ನಿರ್ಮಿಸಿ, ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಈ ಸಿನಿಮಾ ಸುಮಾರು 6 ರಿಂದ 8 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಆಗಿದೆ. ಅಂದ್ಮೇಲೆ ಸಿನಿಮಾ ಕಲೆಕ್ಷನ್ ಅಷ್ಟೇ ಜೋರಾಗಿರಬೇಕಾದ ಅನಿವಾರ್ಯತೆಯಿದೆ.
ಕಳೆದ ಮೂರು ದಿನಗಳಲ್ಲಿ 'ಯುದ್ಧಕಾಂಡ 2' ಬಾಕ್ಸಾಫೀಸ್ ಕಲೆಕ್ಷನ್ ಅಷ್ಟೊಂದು ಸದ್ದು ಮಾಡಿಲ್ಲ. ಆದರೆ, ಫಸ್ಟ್ ಡೇ ಫಸ್ಟ್ ಶೋನಲ್ಲಿ ಸಿಕ್ಕಿರುವ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಮೊದಲ ಮೂರು ದಿನಗಳಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದ್ದು, ಸೋಮವಾರದ ಪರೀಕ್ಷೆಯನ್ನು ಗೆಲ್ಲುತ್ತಾ? ಎನ್ನುವ ನಿರೀಕ್ಷೆಯಿತ್ತು.

ಅಜಯ್ ರಾವ್, ಪ್ರಕಾಶ್ ಬೆಳೆವಾಡಿ ಹಾಗೂ ಅರ್ಚನಾ ಜೋಯಿಸ್ ಅಂತಹ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ ಹಾಗೂ ಟೀಸರ್ ಮೂಲಕ ಕುತೂಹಲ ಕೆರಳಿಸಿದ್ದ 'ಯುದ್ಧಕಾಂಡ 2' ನಿನ್ನೆ (ಏಪ್ರಿಲ್ 21) ಸೋಮವಾರ ಗಳಿಸಿದ್ದು ಎಷ್ಟು? ಸೋಮವಾರದ ಪರೀಕ್ಷೆಯನ್ನು ಗೆದ್ದಿತೇ? ಎನ್ನುವುದನ್ನು ತಿಳಿಯಲು ಮುಂದೆ ಓದಿ.
4ನೇ ದಿನ 'ಯುದ್ಧಕಾಂಡ 2' ಕಲೆಕ್ಷನ್?
ಅಜಯ್ ರಾವ್ ಸಿನಿಮಾ 'ಯುದ್ಧಕಾಂಡ 2' ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ಚೇತರಿಕೆ ಕಂಡಿದೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬಿತ್ತರಿಸುವ ಸ್ಯಾಕ್ನಿಲ್ಕ್.ಕಾಮ್ ನಾಲ್ಕನೇ ದಿನದ ಕಲೆಕ್ಷನ್ ಅನ್ನು ಬಿತ್ತರಿಸಿದೆ. ಇದರ ಪ್ರಕಾರ, 'ಯುದ್ಧಕಾಂಡ 2' ಸಿನಿಮಾ ನಾಲ್ಕನೇ ದಿನ ಅಂದರೆ ಸೋಮವಾರ ಚೇತರಿಕೆ ಕಂಡಿದ್ದು, ಬಾಕ್ಸಾಫೀಸ್‌ನಲ್ಲಿ 32 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ. ಭಾನುವಾರಕ್ಕಿಂತಲೂ ಎರಡು ಲಕ್ಷ ಹೆಚ್ಚು ಕಲೆಕ್ಷನ್ ಆಗಿರುವುದು ವಿಶೇಷ.

ಸೋಮವಾರದ ಪರೀಕ್ಷೆ ಗೆದ್ದಿತೇ?
ಪ್ರತಿಯೊಂದು ಸಿನಿಮಾದ ಯಶಸ್ಸನ್ನು ಮೊದಲ ಸೋಮವಾರದ ಕಲೆಕ್ಷನ್ ಲೆಕ್ಕ ಹಾಕುತ್ತಾರೆ. 'ಯುದ್ಧಕಾಂಡ 2' ಕೂಡ ಸೋಮವಾರ ಕಲೆಕ್ಷನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು. ಅದರಂತೆ, ನಿನ್ನೆ (ಏಪ್ರಿಲ್ 21) 'ಯುದ್ಧಕಾಂಡ 2' ಕಲೆಕ್ಷನ್‌ನಲ್ಲಿ ಗಣನೀಯವಾಗಿ ಇಳಿಕೆಯಾಗಿಲ್ಲ. ಸ್ಯಾಕ್ನಿಲ್ಕ್.ಕಾಮ್ ವರದಿ ಪ್ರಕಾರ, ಭಾನುವಾರಕ್ಕಿಂತ ಸೋಮವಾರ ಎರಡು ಲಕ್ಷ ಹೆಚ್ಚು ಕಲೆಕ್ಷನ್ ಆಗಿದೆ. ಹೀಗಾಗಿ ಸೋಮವಾರವೂ ಕೂಡ ಕಲೆಕ್ಷನ್ ಸ್ಟಡಿಯಾಗಿದೆ ಎಂದು ಹೇಳಬಹುದು.
4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಅಜಯ್ ರಾವ್ ನಟಿಸಿ, ನಿರ್ಮಿಸಿರುವ 'ಯುದ್ಧಕಾಂಡ 2' ನಾಲ್ಕು ದಿನಗಳಲ್ಲಿ ಅದ್ಭುತ ಕಲೆಕ್ಷನ್ ಅಲ್ಲದೇ ಹೋದರೂ, ಕಲೆಕ್ಷನ್ ಸ್ಡಡಿಯಾಗಿದೆ. ಫಸ್ಟ್ ಡೇ ಒಳ್ಳೆಯ ಒಪನಿಯನ್ ಸಿಕ್ಕಿದ್ದರಿಂದ ನಿಧಾನವಾಗಿ ಜನರು ಬಂದು ಸಿನಿಮಾ ನೋಡುತ್ತಿದ್ದಾರೆ. ಅದಕ್ಕೆ ಸೋಮವಾರ ಕಲೆಕ್ಷನ್ ಸಾಕ್ಷಿ. ಈ ನಾಲ್ಕು ದಿನಗಳಲ್ಲಿ 'ಯುದ್ಧಕಾಂಡ 2' ಒಟ್ಟು ಕಲೆಕ್ಷನ್ 1.19 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಮೊದಲ ದಿನ ₹24 ಲಕ್ಷ
2ನೇ ದಿನ ₹33 ಲಕ್ಷ
3ನೇ ದಿನ ₹30 ಲಕ್ಷ
4ನೇ ದಿನ ₹32 ಲಕ್ಷ
ಒಟ್ಟು ₹1.19 ಕೋಟಿ
ಮುಂದೆ ಹೇಗಿರುತ್ತೆ ಕಲೆಕ್ಷನ್?
ಮೊದಲ ನಾಲ್ಕು ದಿನಗಳಲ್ಲಿ 'ಯುದ್ಧಕಾಂಡ 2' ಕಲೆಕ್ಷನ್ ಕೋಟಿಯಲ್ಲಿ ಇಲ್ಲದೇ ಇದ್ದರೂ, ಸ್ಟಡಿಯಾಗಿದೆ. ಹೀಗಿ ಮುಂದುವರೆದರೆ ಈ ಸಿನಿಮಾ ಈ ವಾರದ ಅಂತ್ಯದ ಒಳಗೆ ಎರಡು ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದು. ಮೌತ್ ಪಬ್ಲಿಸಿಟಿ ಹೆಚ್ಚಾಗಿ ಜನರು ಥಿಯೇಟರ್‌ಗೆ ಬರೋಕೆ ಶುರು ಮಾಡಿದರೆ, ಚಿತ್ರತಂಡಕ್ಕೆ ಲಾಭ ಆಗಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











