Yuddhakaanda 2 Box Office Day 5: 5ನೇ ದಿನವೂ ಅದೇ ಕಲೆಕ್ಷನ್, 'ಯುದ್ಧಕಾಂಡ 2' ಗೆಲುವಿಗೆ ಇನ್ನೆಷ್ಟು ಬೇಕು?

ಅಜಯ್ ರಾವ್ ನಟಿಸಿ, ನಿರ್ಮಿಸಿದ 'ಯುದ್ಧಕಾಂಡ 2' ಬಿಡುಗಡೆಯಾಗಿ ಆರನೇ ದಿನಕ್ಕೆ ಕಾಲಿಟ್ಟಿದೆ. ಕೋರ್ಟ್‌ ರೂಮ್ ಡ್ರಾಮ ಶೈಲಿಯ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಬರುವುದೇ ಕಡಿಮೆ. ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಬೇರೆ ಚೆನ್ನಾಗಿಲ್ಲ. ಹೀಗಿದ್ದರೂ ಅಜಯ್ ರಾವ್ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದರು. ಈ ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಅಜಯ್ ರಾವ್ ಮತ್ತು ಅವರ ತಂಡ ಖುಷಿಯಾಗಿದೆ.

ಕರ್ನಾಟಕ ಬಾಕ್ಸಾಫೀಸ್‌ನಲ್ಲಿ 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾ ಸ್ಲೋ ಅಂಡ್ ಸ್ಟಡಿಯಾಗಿ ಮುನ್ನುಗ್ಗುತ್ತಿದೆ. ಕಳೆದ ಐದು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಒಂದೇ ರೀತಿಯಿದೆ. ಅಚ್ಚರಿ ಎಂದರೆ, ಸಿನಿಮಾ ಬಿಡುಗಡೆಯಾಗಿ ಐದು ದಿನಗಳ ಬಳಿಕವೂ ಅದೇ ಕಲೆಕ್ಷನ್ ಮುಂದುವರೆದಿದೆ. ಇದನ್ನೇ ಅಜಯ್ ರಾವ್ ಕೂಡ ಹೇಳಿಕೊಂಡಿದ್ದಾರೆ. ನಿಧಾನವಾಗಿ ಮುಂದಕ್ಕೆ ಹೋಗಲಿ. ತಾಳ್ಮೆಯಿಂದ ಕಾಯುತ್ತೇವೆ ಎಂದು ಸಿನಿಮಾ ಸಕ್ಸಸ್ ಮೀಟ್‌ನಲ್ಲಿ ಹೇಳಿದ್ದಾರೆ.

Ajay Rao starrer Yuddhakaanda 2 film day 5 Karnataka Box office collection report

ಇಷ್ಟೇ ಅಲ್ಲದೆ 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾ ನೂರು ದಿನಗಳನ್ನು ಪೂರೈಸುತ್ತೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ, ಅಜಯ್ ರಾವ್, ಪ್ರಕಾಶ್ ಬೆಳವಾಡಿ, ಅರ್ಚನಾ ಜೋಯಿಸ್ ನಟಿಸಿರುವ ಈ ಸಿನಿಮಾ ಐದನೇ ದಿನ ಗಳಿಸಿದ್ದು ಎಷ್ಟು? ಐದು ದಿನಗಳಲ್ಲಿ ಒಟ್ಟು ಎಷ್ಟು ಕೋಟಿ ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಯುದ್ಧಕಾಂಡ 2' ಐದನೇ ದಿನ ಕಲೆಕ್ಷನ್ ಎಷ್ಟು?

ಅಜಯ್ ರಾವ್ ತುಂಬಾನೇ ನಂಬಿಕೆಯಿಟ್ಟು ನಿರ್ಮಿಸಿ, ನಟಿಸಿದ ಸಿನಿಮಾವಿದು. ಹಾಗೇ ಗಂಭೀರವಾದ ಸಮಸ್ಯೆಯನ್ನು ಇಟ್ಟುಕೊಂಡು ಹೆಣೆದಿರುವ ಕಥೆಗೆ ಸಿನಿಮಾ ನೋಡಿದವರು ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಆದರೆ, ಈ ಕಲೆಕ್ಷನ್ ದೊಡ್ಡ ಮಟ್ಟಕ್ಕೆ ಆಗುತ್ತಿಲ್ಲ. ಕಳೆದ ಐದು ದಿನಗಳಿಂದ ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದರೂ ಒಂದೇ ರೀತಿಯ ಕಲೆಕ್ಷನ್ ಆಗುತ್ತಿದೆ. ಬಾಕ್ಸಾಫೀಸ್‌ ಕಲೆಕ್ಷನ್‌ ಅನ್ನು ವರದಿ ಮಾಡುವ ಸ್ಯಾಕ್ನಿಲ್ಕ್ ಪ್ರಕಾರ ಐದನೇ ದಿನವೂ 'ಯುದ್ಧಕಾಂಡ 2' ಗಳಿಸಿದ್ದು 31 ಲಕ್ಷ ರೂಪಾಯಿ. ನಾಲ್ಕನೇ ದಿನ ಈ ಸಿನಿಮಾ 32 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು.

Ajay Rao starrer Yuddhakaanda 2 film day 5 Karnataka Box office collection report

ಐದು ದಿನಗಳ ಒಟ್ಟು ಕಲೆಕ್ಷನ್

ಐಪಿಎಲ್ ಅಂತಹ ಸೀಸನ್‌ನಲ್ಲಿ ಅಜಯ್ ರಾವ್ ನಟಿಸಿದ 'ಯುದ್ಧಕಾಂಡ 2' ಸಿನಿಮಾ ರಿಲೀಸ್ ಮಾಡಲಾಗಿದೆ. ಬಹುಶ: ಬೇರೆ ಸಮಯದಲ್ಲಿ ತೆರೆಕಂಡಿದ್ದರೆ, ಥಿಯೇಟರ್‌ಗೆ ಜನರು ಬರುವ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದ್ದರೋ ಇಲ್ಲವೋ ಅದು ಬೇರೆ ಮಾತು. ಆದರೂ, ಕನ್ನಡ ಚಿತ್ರರಂಗ ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಈ ಸಿನಿಮಾದ ಗಳಿಕೆ ಚಿತ್ರತಂಡಕ್ಕೆ ಸಮಾಧಾನ ತಂದಿದೆ. ಐದು ದಿನಗಳಲ್ಲಿ ಒಟ್ಟು 1.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

ಮೊದಲ ದಿನ ₹24 ಲಕ್ಷ
2ನೇ ದಿನ ₹33 ಲಕ್ಷ
3ನೇ ದಿನ ₹30 ಲಕ್ಷ
4ನೇ ದಿನ ₹32 ಲಕ್ಷ
5ನೇ ದಿನ ₹31 ಲಕ್ಷ
ಒಟ್ಟು ₹1.50 ಕೋಟಿ

ಈ ವಾರದ ಭವಿಷ್ಯವೇನು?

ಸಹಜವಾಗಿ ಒಂದು ಸಿನಿಮಾ ಅಸಲಿ ತಾಕತ್ತು ಗೊತ್ತಾಗುವುದು ಮೊದಲ ಸೋಮವಾರ. ಆ ದಿನ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಸ್ಡಡಿಯಾಗಿ ಇದ್ದರೆ, ಆ ವಾರ ಉತ್ತಮ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಬಹುದು. ಸ್ಯಾಕ್ನಿಲ್ಕ್ ವರದಿಯಂತೆ ಸೋಮವಾರ ಈ ಸಿನಿಮಾ 32 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ ಮಂಗಳವಾರವೂ ಮುಂದುವರೆದಿದೆ. ಹೀಗಾಗಿ ಈ ವಾರದ ಅಂತ್ಯಕ್ಕೆ 'ಯುದ್ಧಕಾಂಡ 2' ಸಿನಿಮಾ 2 ಕೋಟಿಯಿಂದ 2.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿದೆ. ಇನ್ನು ನಿರ್ಮಾಪಕ ಅಜಯ್ ರಾವ್ 6 ರಿಂದ 8 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದಾರೆ ಎಂಬ ಸುದ್ದಿಯಿದ್ದು, ಹಾಕಿದ ಹಣ ಕೈ ಸೇರಲು ಇನ್ನೂ ಸಾಕಷ್ಟು ಸಮಯವಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Rao starrer Yuddhakaanda 2 film day 5 Karnataka Box office collection report;
Read more about: ajay rao sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X