Yuddhakaanda 2 Box Office Day 1: ಯುದ್ಧ ಗೆದ್ದಿತೇ 'ಯುದ್ಧಕಾಂಡ 2'; ಸಿನಿಮಾ ಕಲೆಕ್ಷನ್ ಹೇಗಿದೆ?

ಒಂದು ಲಾಂಗ್ ಗ್ಯಾಪ್ ಬಳಿಕ ಅಜಯ್ ರಾಜ್ 'ಯುದ್ಧಕಾಂಡ ಚಾಪ್ಟರ್ 2' ಸಿನಿಮಾ ಮೂಲಕ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. ಸ್ವತ: ಅಜಯ್ ರಾವ್ ಅವರೇ ನಿರ್ಮಾಣ ಮಾಡಿರುವುದು ಮತ್ತೊಂದು ವಿಶೇಷ. ಕನ್ನಡದಲ್ಲಿ ಕೋರ್ಟ್ ರೂಮ್ ಡ್ರಾಮಗಳು ತೀರಾ ಕಡಿಮೆ. ಬಾಲಿವುಡ್‌ನಲ್ಲಿ ಹೆಚ್ಚಾಗುತ್ತಿರುವ ಈ ಟ್ರೆಂಡ್ ಅನ್ನು ಅಜಯ್ ರಾವ್ ಬಹುಬೇಗನೇ ಫಾಲೋ ಮಾಡಿದಂತೆ ಇದೆ.

ಕೋರ್ಟ್ ರೂಮ್‌ ಡ್ರಾಮ ಓಟಿಟಿ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಬಾಲಿವುಡ್‌ನಲ್ಲಿ ನಡೆದ ಚಮತ್ಕಾರ ಸ್ಯಾಂಡಲ್‌ವುಡ್‌ನಲ್ಲಿ ನಡೆಯಬೇಕಿದೆ. ಅಂತಹದ್ದೊಂದು ಪ್ರಯತ್ನಕ್ಕೆ ಅಜಯ್ ರಾವ್ ಕೈ ಹಾಕಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಹಿಂದೆ ಬಿದ್ದಿರೋ ಸ್ಟಾರ್ ನಟರಿಂದ ಕೊಂಚ ದೂರ ಸರಿದು, ಕಮರ್ಷಿಯಲ್ ಜೊತೆ ಗಂಭೀರ ಸಮಸ್ಯೆಯನ್ನು ಇಟ್ಟಿಕೊಂಡು ಬಾಕ್ಸಾಫೀಸ್‌ನಲ್ಲಿ ಯುದ್ಧ ಸಾರುವುದಕ್ಕೆ ಮುಂದಾಗಿದ್ದಾರೆ.

Ajay Rao starrer Yuddhakaanda chapter 2 movie day 1 box office collection report

ಬಹಳ ವರ್ಷಗಳ ಬಳಿಕ ತಮ್ಮ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ 'ಯುದ್ಧಕಾಂಡ 2' ಸಿನಿಮಾವನ್ನು ಭರ್ಜರಿಯಾಗಿ ಪ್ರಚಾರ ಮಾಡಿದ್ದರು. ತನ್ನೆಲ್ಲಾ ಸಮಸ್ಯೆಗಳನ್ನು ಪೂರೈಸಿಕೊಂಡು 'ಯುದ್ಧಕಾಂಡ 2' ಸಿನಿಮಾ ನಿನ್ನೆ (ಏಪ್ರಿಲ್ 18) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಹಾಗಿದ್ದರೆ, ಈ ಕನ್ನಡದ ಕೋರ್ಟ್ ರೂಮ್ ಡ್ರಾಮಗೆ ಪ್ರೇಕ್ಷಕರಿಂದ ಪ್ರತಿಕ್ರಿಯೆ ಹೇಗೆ ಸಿಕ್ಕಿದೆ? ಬಾಕ್ಸಾಫೀಸ್‌ನಲ್ಲಿ ಮೊದಲ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಯುದ್ಧಕಾಂಡ 2' ಕಲೆಕ್ಷನ್ ಎಷ್ಟು?

ಅಜಯ್ ರಾವ್ 'ಯುದ್ಧಕಾಂಡ 2' ಸಿನಿಮಾಗೆ ಪ್ರೇಕ್ಷಕರಿಂದ ಸಾಧಾರಾಣ ಓಪನಿಂಗ್ ಸಿಕ್ಕಿದೆ. ಅದೆಷ್ಟೇ ಸಿನಿಮಾ ಬಗ್ಗೆ ಪ್ರಚಾರ ಮಾಡಿದರೂ, ನಿನ್ನೆ ಜನರು ಥಿಯೇಟರ್‌ಗೆ ಬಂದು ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನೋಡಿಲ್ಲ. ಬಹುಶ: ಮೌತ್ ಪಬ್ಲಿಸಿಟಿಯಿಂದ ಮುಂದಿನ ದಿನಗಳಲ್ಲಿ ಜನರು ಥಿಯೇಟರ್‌ಗೆ ಬರಬಹುದು. ಅಂದ್ಹಾಗೆ, ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ವರದಿ ಮಾಡುವ ಸ್ಯಾಕ್ನಿಲ್ಕ್ ವೆಬ್‌ ಸೈಟ್‌ ಪ್ರಕಾರ, 'ಯುದ್ಧಕಾಂಡ 2' ಮೊದಲ ದಿನ 27ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

Ajay Rao starrer Yuddhakaanda chapter 2 movie day 1 box office collection report

ಎಲ್ಲೆಲ್ಲಿ ಹೇಗಿದೆ ಕಲೆಕ್ಷನ್?

ಕರ್ನಾಟಕದ ವಿತರಕರ ಪ್ರಕಾರ, 'ಯುದ್ಧಕಾಂಡ ಚಾಪ್ಟರ್ 2'ಗೆ ಸಿಂಗಲ್‌ ಸ್ಕ್ರೀನ್‌ಗಳಿಗಿಂತ ಮಲ್ಟಿಪ್ಲೆಕ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಏನೂ ಸಿಕ್ಕಿಲ್ಲ. ಆದರೆ, ವೀಕೆಂಡ್‌ನಲ್ಲಿ ಸಿನಿಮಾದ ಮೊದಲನೇ ದಿನಕ್ಕಿಂತ ಹೆಚ್ಚಿನ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಕೊನೆಯ ಪಕ್ಷ ಎರಡು ದಿನಗಳಲ್ಲಿ 35 ರಿಂದ 40 ಲಕ್ಷ ರೂಪಾಯಿ ಕಲೆಕ್ಷನ್ ಆದರೆ, ಮೂರು ದಿನಕ್ಕೆ ಒಂದು ಕೋಟಿ ರೂಪಾಯಿ ಗಳಿಕೆ ಮಾಡಿದಂತೆ ಆಗುತ್ತೆ.

'ಕೇಸರಿ 2' ಟಕ್ಕರ್

ಈ ವಾರ ಎರಡು ಕೋರ್ಟ್‌ ರೂಮ್ ಸಿನಿಮಾಗಳು ರಿಲೀಸ್ ಆಗಿವೆ. ಅಜಯ್ ರಾವ್ ನಟಿಸಿರುವ 'ಯುದ್ಧಕಾಂಡ 2' ಜೊತೆಗೆ ಬಾಲಿವುಡ್‌ನ 'ಕೇಸರಿ 2' ಕೂಡ ಇದೇ ದಿನ ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್, ಆರ್ ಮಾಧವನ್ ನಟಿಸಿದ ಈ ಸಿನಿಮಾಗೆ ಮೊದಲ ದಿನದ ಮೊದಲ ಮೂರು ಶೋಗಳಿಗೆ ಅಷ್ಟು ಒಳ್ಳೆಯ ಓಪನಿಂಗ್ ಸಿಕ್ಕಿರಲಿಲ್ಲ. ಆದರೆ, ಸಂಜೆಯ ವೇಳೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿತ್ತು. ಹೀಗಾಗಿ ಕರ್ನಾಟಕದಲ್ಲಿ 'ಕೇಸರಿ 2' ಒಳ್ಳೆಯ ಓಪನಿಂಗ್ ಸಿಕ್ಕಿಲ್ಲ. ಆದರೂ, ರೆಸ್ಪಾನ್ಸ್ ಚೆನ್ನಾಗಿ ಇರುವುದರಿಂದ ಮುಂದಿನ ದಿನಗಳಲ್ಲಿ 'ಯುದ್ಧಕಾಂಡ 2'ಗೆ ಟಕ್ಕರ್ ಕೊಡುವ ಸಾಧ್ಯತೆಯಿದೆ.

'ಯುದ್ಧಕಾಂಡ 2' ಯಾಕೆ ಗೆಲ್ಲಬೇಕು?

'ಯುದ್ಧಕಾಂಡ ಚಾಪ್ಟರ್ 2' ಸಿನಿಮಾ ಗೆದ್ದರೆ, ಅಜಯ್ ರಾವ್‌ಗಷ್ಟೇ ಅಲ್ಲ. ಕನ್ನಡ ಚಿತ್ರರಂಗ ಯಶಸ್ಸಿನ ಕಡೆಗೆ ಮರಳುವುದಕ್ಕೆ ಸಹಾಯವಾಗುತ್ತೆ. ಚಿತ್ರರಂಗದಲ್ಲಿ ಇಂತಹ ಎಕ್ಸ್‌ಪೆರಿಮೆಂಟ್ ಸಿನಿಮಾಗಳ ಸಂಖ್ಯೆ ಹೆಚ್ಚಾಗಬಹುದು. ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು, ಹೊಸ ಹೊಸ ಕಥೆಗಳ ಕಡೆ ಮುಖ ಮಾಡುವ ಧೈರ್ಯ ಮಾಡುತ್ತಾರೆ. ಅದಕ್ಕೆ 'ಯುದ್ಧಕಾಂಡ 2' ಮುಂದಿನ ದಿನಗಳಲ್ಲಿ ಹೇಗೆ ಸದ್ದು ಮಾಡುತ್ತೆ? ಅನ್ನೋದರ ಮೇಲೆ ಎಲ್ಲವೂ ನಿಂತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Rao starrer Yuddhakaanda chapter 2 movie day 1 box office collection report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X