Yuddhakaanda 2 Box Office Day 2: 2ನೇ ದಿನ ಬಾಕ್ಸಾಫೀಸ್‌ನಲ್ಲಿ ಯುದ್ಧ ಸಾರಿತೇ 'ಯುದ್ಧಕಾಂಡ'?

ಈ ವಾರ ರಿಲೀಸ್ ಆಗಿರುವ ಕನ್ನಡ ಸಿನಿಮಾಗಳಲ್ಲಿ ಅಜಯ್ ರಾಜ್ ನಟಿಸಿರುವ 'ಯುದ್ಧಕಾಂಡ ಚಾಪ್ಟರ್ 2' ಕೂಡ ಒಂದು. ಫಸ್ಟ್ ಡೇ ಫಸ್ಟ್ ಶೋಗೆನೇ ಈ ಸಿನಿಮಾಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ತೆರೆಮೇಲೆ ಬಿಂಬಿಸುವ ಪ್ರಯತ್ನ ಸಿನಿಮಾದಲ್ಲಿ ಮಾಡಲಾಗಿದೆ. ಇಲ್ಲಿ ಅಜಯ್ ರಾವ್ ವಕೀಲರಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೋರ್ಟ್‌ ರೂಮ್ ಡ್ರಾಮವನ್ನು ಪ್ರೇಕ್ಷಕರು ನೋಡಿದ್ದು ತೀರಾ ಕಡಿಮೆ. ಆದರೆ, ಬೇರೆ ಭಾಷೆಯ ಸಿನಿಮಾಗಳಲ್ಲಿ ಈಗಾಗಲೇ ಕೋರ್ಟ್‌ ರೂಮ್‌ ಡ್ರಾಮದಂತಹ ಜಾನರ್‌ನ ಸಿನಿಮಾಗಳು ತೆರೆಕಂಡು ಯಶಸ್ವಿಯಾಗಿವೆ. ಈ ಕನ್ನಡದಲ್ಲಿ ಅಜಯ್ ರಾವ್ ಕನ್ನಡದಲ್ಲಿ ಇಂತಹದ್ದೊಂದು ಟ್ರೆಂಡ್ ಅನ್ನು ಹುಟ್ಟಾಕುತ್ತಾರಾ? ಅನ್ನೋದು 'ಯುದ್ಧಕಾಂಡ 2' ಯಶಸ್ಸು ಹೇಳಬೇಕಿದೆ.

Ajay Rao starrer Yuddhakaanda chapter 2 movie day 2 box office collection report

ಪವನ್ ಭಟ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಗಂಭೀರ ವಿಷಯವನ್ನು ತೆಗೆದುಕೊಳ್ಳಲಾಗಿದೆ. ಅಜಯ್ ರಾವ್ ಹಾಗೂ ಪ್ರಕಾಶ್ ಬೆಳವಾಡಿಯವರ ಮುಖಾ ಮುಖಿ ಈ ಸಿನಿಮಾದ ಹೈಲೈಟ್. 'ಕೆಜಿಎಫ್' ಖ್ಯಾತಿಯ ಅರ್ಚನಾ ಜೋಯಿಸ್ ಈ ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾಕ್ಸಾಫೀಸ್‌ನಲ್ಲಿ ಸಾಧಾರಣ ಓಪನಿಂಗ್ ಪಡೆದಿರುವ 'ಯುದ್ಧಕಾಂಡ 2' ಸಿನಿಮಾಗೆ ಎರಡನೇ ದಿನ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

2ನೇ ದಿನದ ಕಲೆಕ್ಷನ್ ಎಷ್ಟು?

ಅಜಯ್ ರಾವ್ ಪ್ರಯತ್ನಕ್ಕೆ ಮೆಚ್ಚುವಂತಹದ್ದೇ. ಆದರೆ, ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆದರೆ ಮಾತ್ರ ಬಾಕ್ಸಾಫೀಸ್‌ ಯುದ್ಧದಲ್ಲಿ ಗೆದ್ದಂತೆ. ಮೊದಲ ದಿನ 'ಯುದ್ಧಕಾಂಡ 2' ಸಿನಿಮಾಗೆ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಬಾಕ್ಸಾಫೀಸ್ ವರದಿಗಳನ್ನು ಮಾಡುವ ಸ್ಯಾಕ್ನಿಲ್ಕ್.ಕಾಮ್ ವರದಿ ಪ್ರಕಾರ, ಅಜಯ್ ರಾವ್ 'ಯುದ್ಧಕಾಂಡ 2' ಎರಡನೇ ದಿನ ಚೇತರಿಕೆ ಕಂಡಿದೆ. 2ನೇ ದಿನ 33 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

2 ದಿನಗಳ ಕಲೆಕ್ಷನ್ ಎಷ್ಟು?

'ಯುದ್ಧಕಾಂಡ 2' ಮೌತ್‌ ಪಬ್ಲಿಸಿಟಿಯಿಂದ ಪ್ರೇಕ್ಷಕರಿಗೆ ತಲುಪಬೇಕು. ಮೂರು ದಿನ ಬ್ಯಾಕ್ ಟು ಬ್ಯಾಕ್ ರಜೆಗಳು ಇದ್ದರೂ, ಅದು ಈ ಸಿನಿಮಾಗೆ ಉಪಯೋಗ ಆದಂತೆ ಕಾಣುತ್ತಿಲ್ಲ. ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದಂತೆ ಎರಡನೇ ದಿನ ಚೇತರಿಕೆ ಕಂಡಿದೆ. ಮೂರನೇ ದಿನವೂ 50 ಲಕ್ಷ ರೂಪಾಯಿ ನಿರೀಕ್ಷ ಮಾಡಲಾಗಿದೆ. ಮೊದಲನೇ ದಿನ 24 ಲಕ್ಷ ರೂಪಾಯಿ, ಎರಡನೇ ದಿನ 33 ಲಕ್ಷ ರೂಪಾಯಿ ಗಳಿಕೆ ಸೇರಿ ಒಟ್ಟು 57 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ.

Ajay Rao starrer Yuddhakaanda chapter 2 movie day 2 box office collection report

3 ದಿನಕ್ಕೆ ಕೋಟಿ ಆಗುತ್ತಾ?

'ಯುದ್ಧಕಾಂಡ ಚಾಪ್ಟರ್ 2' ಬಾಕ್ಸಾಫೀಸ್‌ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗಬೇಕು. ಇನ್ನೊಂದು ವಾರದೊಳಗೆ ಈ ಸಿನಿಮಾ ಪಿಕಪ್ ಆಗಲೇಬೇಕಿದೆ. ಹಾಗೇ ಮುಂದಿನವಾರ ಕೂಡ ದೊಡ್ಡ ಸಿನಿಮಾಗಳು ರಿಲೀಸ್ ಇಲ್ಲದೇ ಇರುವುದರಿಂದ 'ಯುದ್ಧಕಾಂಡ 2' ಈ ಅವಕಾಶವನ್ನು ಬಳಸಿಕೊಂಡರೇ ಸಿನಿಮಾಗೆ ಅನುಕೂಲ ಆಗಲಿದೆ. ಇನ್ನು ಮೂರನೇ ದಿನ 50 ಲಕ್ಷ ರುಪಾಯಿ ಕಲೆಕ್ಷನ್ ಮಾಡಿದರೆ, ಮೂರು ದಿನಕ್ಕೆ ಒಂದು ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತೆ.

'ಕೇಸರಿ 2'ಗೂ ಭರ್ಜರಿ ರೆಸ್ಪಾನ್ಸ್

ಅಜಯ್ ರಾವ್ ಸಿನಿಮಾಗೆ ಅಕ್ಷಯ್ ಕುಮಾರ್ ಸಿನಿಮಾ 'ಕೇಸರಿ 2' ಟಕ್ಕರ್ ಕೊಡುತ್ತಿದೆ. ಅಕ್ಷಯ್, ಆರ್.ಮಾಧವನ್, ಅನನ್ಯಾ ಪಾಂಡೆ ನಟಿಸಿದ ಈ ಸಿನಿಮಾ ಉತ್ತರ ಭಾರತಕ್ಕಿಂತ ಬೆಂಗಳೂರು ಹಾಗೂ ಚೆನ್ನೈನಲ್ಲಿ ಉತ್ತಮ ಕಲೆಕ್ಷನ್ ಮಾಡಿರುವುದ ಅಚ್ಚರಿ ಮೂಡಿದೆ. ಈ ಸಿನಿಮಾ ಕೂಡ ಕೋರ್ಟ್ ರೂಮ್ ಡ್ರಾಮ ಆಗಿರುವುದು ಮತ್ತೊಂದು ವಿಶೇಷ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ajay Rao starrer Yuddhakaanda chapter 2 movie day 2 box office collection report;
Read more about: ajay rao sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X