Housefull 5 Box Office Day 10: ವೀಕೆಂಡ್‌ನಲ್ಲಿ ಗೆದ್ದ 'ಹೌಸ್‌ಫುಲ್ 5';10ನೇ ದಿನದ ಕಲೆಕ್ಷನ್ ಎಷ್ಟು?
ಬಾಲಿವುಡ್‌ನ ಜನಪ್ರಿಯ ಕಾಮಿಡಿ ಸೀರಿಸ್ 'ಹೌಸ್‌ಫುಲ್'ನ ಐದನೇ ಚಾಪ್ಟರ್ ರಿಲೀಸ್ ಆಗಿ 11ನೇ ದಿನಕ್ಕೆ ಕಾಲಿಟ್ಟಿದೆ. ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್‌ಮುಖ್, ಜಾಕ್ವೆಲೀನ್ ಫರ್ನಾಂಡೀಸ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಹಾಸ್ಯವೇ ಪ್ರಧಾನ. ಈ ಸಿನಿಮಾ ಬಿಡುಗಡೆಯಾದ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೊಡ್ಡ ಸ್ಟಾರ್‌ಕಾಸ್ಟ್ ಹೊರತಾಗಿಯೂ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿರಲಿಲ್ಲ.
'ಹೌಸ್‌ಫುಲ್ 5' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮೊದಲ ವಾರ ಭರ್ಜರಿ ಕಲೆಕ್ಷನ್ ಆಗಿತ್ತು. ಆದರೆ, ಎರಡನೇ ವಾರದ ಹೊತ್ತಿಗೆ 'ಹೌಸ್‌ಫುಲ್ 5' ಸಿನಿಮಾದ ಕಲೆಕ್ಷನ್ ಡ್ರಾಪ್ ಆಗಿದ್ದರೂ ಎರಡನೇ ವಾರದ ವೀಕೆಂಡ್‌ನಲ್ಲಿ ಚೇತರಿಸಿಕೊಂಡಿದೆ. 'ಹೌಸ್‌ಫುಲ್ 2' ರಿಲೀಸ್ ಆದ ಎರಡನೇ ಭಾನುವಾರ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

ಜನಪ್ರಿಯ ಕಾಮಿಡಿ ಸೀರಿಸ್ 'ಹೌಸ್‌ಫುಲ್ 5' ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಗದೇ ಹೋದರೂ ಬಾಕ್ಸಾಫೀಸ್‌ನಲ್ಲಿ ₹150 ಕೋಟಿಯನ್ನು ಬಾಚಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೆ, 10ನೇ ದಿನ ಈ ಮಲ್ಟಿಸ್ಟಾರರ್ ಸಿನಿಮಾ ಗಳಿಸಿದ್ದೆಷ್ಟು? ಭಾರತದಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ವಿಶ್ವದಾದ್ಯಂತ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
10ನೇ ದಿನ ಹೌಸ್‌ಫುಲ್ 5 ಗಳಿಸಿದ್ದೆಷ್ಟು?
'ಹೌಸ್‌ಫುಲ್ 5' ಕಾಮಿಡಿ ಸೀರಿಸ್ ಮೇಲೆ ಬಾಲಿವುಡ್ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ, ಈ ಸಿನಿಮಾ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವಲ್ಲಿ ಸೋತಿತ್ತು. ಎರಡನೇ ವೀಕೆಂಡ್‌ನಲ್ಲಿ ಸಿನಿಮಾ ಸಂಪೂರ್ಣವಾಗಿ ನೆಲಕಚ್ಚಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದರು. ಆದರೆ, 10ನೇ ಸಿನಿಮಾದ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡಿದೆ. ಭಾನುವಾರ (ಜೂನ್ 15) ಈ ಸಿನಿಮಾ 11.72 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿಯನ್ನು ಮಾಡಿದೆ. ಇದೂ ಕೂಡ ಆರಂಭದ ಲೆಕ್ಕಾಚಾರ ಆಗಿದ್ದು, 12 ಕೋಟಿ ರೂ. ದಾಟಬಹುದೆಂದು ಅಂದಾಜಿಸಲಾಗಿದೆ.

ಭಾರತದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
'ಹೌಸ್‌ಫುಲ್ 5' ಕಳೆದ 10 ದಿನಗಳಲ್ಲಿ ₹150 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ 10ನೇ ದಿನದ ಕಲೆಕ್ಷನ್ ದೊಡ್ಡ ಮಟ್ಟಕ್ಕೆ ದೊಡ್ಡ ಮಟ್ಟಕ್ಕೆ ಬೂಸ್ಟ್ ಸಿಕ್ಕಿದೆ. ಕಳೆದ 10 ದಿನಗಳಲ್ಲಿ ಹೌಸ್‌ಫುಲ್ 2 ಗಳಿಸಿದ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
ಮೊದಲ ದಿನ : ₹24 ಕೋಟಿ
2ನೇ ದಿನ : ₹31 ಕೋಟಿ
3ನೇ ದಿನ : ₹32.5 ಕೋಟಿ
4ನೇ ದಿನ : ₹13 ಕೋಟಿ
5ನೇ ದಿನ : ₹11.25 ಕೋಟಿ
6ನೇ ದಿನ : ₹8.5 ಕೋಟಿ
7ನೇ ದಿನ : ₹7 ಕೋಟಿ
8ನೇ ದಿನ : ₹6 ಕೋಟಿ
9ನೇ ದಿನ : ₹9.5 ಕೋಟಿ
10ನೇ ದಿನ : ₹11.72 ಕೋಟಿ
ಒಟ್ಟು ₹154.49 ಕೋಟಿ
ವಿಶ್ವದಾದ್ಯಂತ ಎಷ್ಟು ಕೋಟಿ ಕಲೆಕ್ಷನ್?
ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಹೌಸ್‌ಫುಲ್ 5' ವಿಶ್ವದಾದ್ಯಂತ 230 ರಿಂದ 235 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಲಾಗಿದೆ. ಇನ್ನು ಐದು ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅಷ್ಟೇ. ಆನಂತ್ರ ಆಮಿರ್ ಖಾನ್ ನಟನೆಯ 'ಸಿತಾರೆ ಜಮೀನ್ ಪರ್' ಸಿನಿಮಾ ರಿಲೀಸ್ ಆಗಲಿದೆ. ಅಲ್ಲಿಂದ ಕಲೆಕ್ಷನ್ ಮತ್ತಷ್ಟು ಡ್ರಾಪ್ ಆಗೋದು ಖಚಿತ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











