Bhooth Bangla Box Office Day 2: 2ನೇ ದಿನ 'ಭೂತ್ ಬಂಗ್ಲ' ಕಲೆಕ್ಷನ್‌ನಲ್ಲಿ ಏರಿಕೆ; ಯಶಸ್ಸಿನ ರುಚಿ ಕಂಡರೇ ಅಕ್ಷಯ್ ಕುಮಾರ್?

ಅಕ್ಷಯ್ ಕುಮಾರ್ ಸಿನಿಮಾ 'ಭೂತ್ ಬಂಗ್ಲ' ಶುಕ್ರವಾರದಂದು (ಏಪ್ರಿಲ್ 17) ಅದ್ಧೂರಿಯಾಗಿ ರಿಲೀಸ್ ಆಗಿದೆ. ಹಿರಿಯ ನಿರ್ದೇಶಕ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಮೇಲೆ ಬಾಲಿವುಡ್ ಮಂದಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್ ಬಾಕ್ಸಾಫೀಸ್‌ನಲ್ಲಿ ಸೋತಿದ್ದೇ ಇಲ್ಲ. ಹೀಗಾಗಿ 'ಭೂತ್ ಬಂಗ್ಲ' ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತೆಂಬ ನಿರೀಕ್ಷೆಯಲ್ಲಿ ಬಾಲಿವುಡ್ ಇದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೂ ಸಕ್ಸಸ್ ಬೇಕಿದೆ. ಇತ್ತೀಚೆಗೆ ಇವರು ನಟಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತಿವೆ. ಹೀಗಾಗಿ 'ಭೂತ್ ಬಂಗ್ಲ' ಅಕ್ಷಯ್ ಕುಮಾರ್‌ಗೂ ಸಕ್ಸಸ್ ಕೊಡಬಹುದೇ ಎಂದು ಎದುರು ನೋಡಲಾಗುತ್ತಿದೆ. ಇದೊಂದು ಹಾರರ್-ಕಾಮಿಡಿ ಸಿನಿಮಾ. ಬಾಲಿವುಡ್‌ನಲ್ಲಿ ಈ ಜಾನರ್‌ನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿವೆ. ಈ ಕಾರಣಕ್ಕೆ 'ಭೂತ್ ಬಂಗ್ಲ' ಕಲೆಕ್ಷನ್ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಣ್ಣಿಟ್ಟಿದ್ದಾರೆ.

Akshay Kumar Priyadarshan movie Bhooth Bangla box office Collection increased in Day 2 report

ಆದರೆ, 'ಭೂತ್ ಬಂಗ್ಲ' ಫಸ್ಟ್ ಡೇ ಫಸ್ಟ್ ಶೋಗೆ ನೆಗೆಟಿವ್ ರಿವ್ಯೂ ಬಂದಿದೆ. ಹೀಗಾಗಿ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಬಹುದೆಂದು ಲೆಕ್ಕ ಹಾಕಲಾಗಿತ್ತು. ಆದರೆ, 2ನೇ ದಿನದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಹಾಗಿದ್ದರೆ, 'ಭೂತ್ ಬಂಗ್ಲ' 2ನೇ ದಿನ ಗಳಿಸಿದ್ದೆಷ್ಟು? ವಿಶ್ವದಾದ್ಯಂತ ಎಷ್ಟು ಕಲೆಕ್ಷನ್ ಆಗಿದೆ? ಅಕ್ಷಯ್ ಕುಮಾರ್‌ಗೆ ಈ ಸಿನಿಮಾ ಮೂಲಕನಾದರೂ ಸಕ್ಸಸ್ ಸಿಗಬಹುದೇ? ತಿಳಿಯುವುದಕ್ಕೆ ಮುಂದೆ ಓದಿ.

'ಭೂತ್ ಬಂಗ್ಲ' 2ನೇ ದಿನದ ಕಲೆಕ್ಷನ್

ನೆಗೆಟಿವ್ ರಿವ್ಯೂಗಳ ಹೊರತಾಗಿಯೂ ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್ ಸಿನಿಮಾ 'ಭೂತ್ ಬಂಗ್ಲ' ಕಲೆಕ್ಷನ್ ಉತ್ತಮವಾಗಿದೆ. ಮೊದಲ ದಿನ, ಪೇಯ್ಡ್ ಪ್ರೀವ್ಯೂ ಸೇರಿ 15.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು 2ನೇ ದಿನ ಕಲೆಕ್ಷನ್ ಡ್ರಾಪ್ ಆಗಬಹುದೆಂಬ ಗೆಸ್ ಮಾಡಲಾಗಿತ್ತು. ಆದರೆ, ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ 2ನೇ ದಿನ 19 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ.

Also Read
Bhooth Bangla Box Office Day 1: ನೆಗೆಟಿವ್ ರಿವ್ಯೂ ಬಂದ್ರೂ, 'ಭೂತ್ ಬಂಗ್ಲ' ಕಲೆಕ್ಷನ್ ಕಮ್ಮಿಯೇನಿಲ್ಲ
Bhooth Bangla Box Office Day 1: ನೆಗೆಟಿವ್ ರಿವ್ಯೂ ಬಂದ್ರೂ, 'ಭೂತ್ ಬಂಗ್ಲ' ಕಲೆಕ್ಷನ್ ಕಮ್ಮಿಯೇನಿಲ್ಲ

2 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಭೂತ್ ಬಂಗ್ಲ' ಎರಡು ದಿನಗಳ ಕಲೆಕ್ಷನ್ ಸಿನಿಮಾ ತಂಡಕ್ಕೆ ಸಮಾಧಾನ ಕೊಟ್ಟಂತೆ ಇದೆ. ಈ ಎರಡು ದಿನಗಳಲ್ಲಿ ಭಾರತದಾದ್ಯಂತ 35 ಕೋಟಿ ರೂಪಾಯಿ (Net) ಮಾಡಿದೆ. ಅದೇ ಗ್ರಾಸ್ ಕಲೆಕ್ಷನ್ 42 ಕೋಟಿ ರೂಪಾಯಿ ದಾಟಿತ್ತಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಕಲೆಕ್ಷನ್ ಎಂದೇ ಹೇಳಲಾಗುತ್ತಿದೆ. ಆದರೆ, ಮೂರು ದಿನಗಳಲ್ಲಿ ₹100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯನ್ನು ಹುಸಿಯಾಗಿಸಿದೆ.

Akshay Kumar Priyadarshan movie Bhooth Bangla box office Collection increased in Day 2 report

ವಿಶ್ವದಾದ್ಯಂತ ಕಲೆಕ್ಷನ್ ಹೇಗಿದೆ?

ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ವಾಮಿಕಾ ಗಬ್ಬಿ ನಟಿಸಿದ್ದಾರೆ. ಇವರೊಂದಿಗೆ ಬಾಲಿವುಡ್‌ನ ಹಿರಿಯ ನಟ ಪರೇಶ್ ರಾವಲ್, ಅಸ್ರಾನಿ, ಟಬು ಹಾಗೂ ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೊಡ್ಡ ಸ್ಟಾರ್‌ಕಾಸ್ಟ್ ಇರುವ ಈ ಸಿನಿಮಾ ವಿಶ್ವದಾದ್ಯಂತ ಉತ್ತಮ ಗಳಿಕೆ ಮಾಡುತ್ತಿದೆ. ಮೊದಲ 2 ದಿನಗಳಲ್ಲಿ ಓವರ್‌ಸೀಸ್ ಮಾರ್ಕೆಟ್‌ನಿಂದ ಈ ಸಿನಿಮಾ 18.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ ಸಿನಿಮಾ ವಿಶ್ವದಾದ್ಯಂತ 60.50 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Akshay Kumar, Priyadarshan movie Bhooth Bangla box office Collection increased in Day 2 report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X