Bhooth Bangla Box Office Day 1: ನೆಗೆಟಿವ್ ರಿವ್ಯೂ ಬಂದ್ರೂ, 'ಭೂತ್ ಬಂಗ್ಲ' ಕಲೆಕ್ಷನ್ ಕಮ್ಮಿಯೇನಿಲ್ಲ

'ಧುರಂಧರ್ 2' ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕಂಡ ಬಾಲಿವುಡ್ ಮಂದಿ ಇನ್ನೊಂದು ಹಿಟ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಅಕ್ಷಯ್ ಕುಮಾರ್ ಅಖಾಡಕ್ಕೆ ಇಳಿದಿದ್ದಾರೆ. ಅದೂ ಕೂಡ ಬಾಲಿವುಡ್‌ನ ಎವರ್‌ಗ್ರೀನ್ ಹಾರರ್-ಕಾಮಿಡಿ ಜಾನರ್ ಅನ್ನು ಹೊತ್ತು ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ.

'ಭೂತ್ ಬಂಗ್ಲ' ಮೇಲೆ ನಿರೀಕ್ಷೆ ಹೆಚ್ಚಾಗುವುದಕ್ಕೆ ಮತ್ತೊಂದು ಕಾರಣ ಕಾಂಬಿನೇಷನ್. ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಜೋಡಿ ಈ ಹಿಂದೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದೆ. ಅದೇ ಜೋಡಿ ಈಗ 'ಭೂತ್ ಬಂಗ್ಲ' ಮೂಲಕ ವಾಪಾಸ್ ಬಂದಿದೆ. ಫಸ್ಟ್ ಡೇ ಫಸ್ಟ್ ಶೋ ಈ ಸಿನಿಮಾಗೆ ನೆಗೆಟಿವ್ ರಿವ್ಯೂ ಸಿಕ್ಕಿದೆ. ಹೀಗಾಗಿ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೆ ಏಟು ಬೀಳಬಹುದೆಂಬ ನಿರೀಕ್ಷೆ ಮಾಡಲಾಗಿತ್ತು.

Akshay Kumar Priyadarshan movie Bhooth Bangla Day 1 worldwide box office report

ಅಕ್ಷಯ್ ಕುಮಾರ್ ಜೊತೆ ಬಾಲಿವುಡ್ ದಿಗ್ಗಜರಾದ ಪರೇಶ್ ರಾವಲ್, ಅಸ್ರಾನಿ, ರಾಜ್‌ಪಾಲ್ ಯಾದವ್, ಟಬು ಅಂತಹ ದಿಗ್ಗಜರು ನಟಿಸಿದ್ದಾರೆ. ಹೀಗಾಗಿ 'ಭೂತ್ ಬಂಗ್ಲ' ಬಾಲಿವುಡ್‌ಗೆ ಮತ್ತೊಂದು ಹಿಟ್ ಸಿನಿಮಾ ಕೊಡುವ ನಿರೀಕ್ಷೆಯಲ್ಲಿ ಈ ತಂಡವಿದೆ. ಹಾಗಿದ್ದರೆ, 'ಭೂತ್ ಬಂಗ್ಲ' ಮೊದಲ ದಿನ ಗಳಿಸಿದ್ದು ಎಷ್ಟು? ವಿಶ್ವದಾದ್ಯಂತ ಸಿನಿಮಾದ ರೆಸ್ಪಾನ್ಸ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

Also Read
Bhoot Bangla Review: 'ಭೂತ ಬಂಗ್ಲಾ'ದಲ್ಲಿ ಅಕ್ಷಯ್ ಕುಮಾರ್-ಪ್ರಿಯದರ್ಶನ್ ಜಾದು ಮಾಡಿದರೇ?
Bhoot Bangla Review: 'ಭೂತ ಬಂಗ್ಲಾ'ದಲ್ಲಿ ಅಕ್ಷಯ್ ಕುಮಾರ್-ಪ್ರಿಯದರ್ಶನ್ ಜಾದು ಮಾಡಿದರೇ?

'ಭೂತ್ ಬಂಗ್ಲ' ಮೊದಲ ದಿನದ ಕಲೆಕ್ಷನ್

ಅಕ್ಷಯ್ ಕುಮಾರ್, ಪ್ರಿಯದರ್ಶನ್ ಕಾಂಬಿನೇಷನ್ ಸಿನಿಮಾ ಅಂದ್ಮೇಲೆ ನಗುವಿಗೇನು ಕಮ್ಮಿಯಿರೋದಿಲ್ಲ. ಹೀಗಾಗಿ ಈ ವಾರ 'ಭೂತ್ ಬಂಗ್ಲ' ಕಲೆಕ್ಷನ್ ನೂರು ಕೋಟಿ ದಾಟಬಹುದಾ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ, 'ಭೂತ್ ಬಂಗ್ಲ' ವಿಶ್ವದಾದ್ಯಂತ ಮೊದಲ ದಿನ 23.90 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ.

Akshay Kumar Priyadarshan movie Bhooth Bangla Day 1 worldwide box office report

ಎಲ್ಲೆಲ್ಲಿ ಎಷ್ಟೆಷ್ಟು?

'ಭೂತ್ ಬಂಗ್ಲ' ಮೊದಲ ದಿನ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗಿದೆ. ವೀಕ್‌ಡೇಸ್‌ನಲ್ಲಿ ಫಸ್ಟ್ ಡೇ ಕಲೆಕ್ಷನ್ 23.90 ಕೋಟಿ ರೂಪಾಯಿ ಉತ್ತಮ ಗಳಿಕೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಾದ್ಯಂತ 18.90 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದರೆ, ವಿದೇಶದಿಂದ 5 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ. ಎರಡೂ ಸೇರಿಸಿ 23.90 ಕೋಟಿ ಕಲೆಕ್ಷನ್ ಆಗಿದೆ.

ವೀಕೆಂಡ್ ಮೇಲೆ ನಿರೀಕ್ಷೆ

ಸತತ ನಾಲ್ಕು ವಾರಗಳ ಕಾಲ ಟಾಪ್‌ನಲ್ಲಿದ್ದ 'ಧುರಂದರ್ 2' ಸಿನಿಮಾವನ್ನು ಹಿಂದಿಕ್ಕಿ ಟಾಪ್‌ನಲ್ಲಿದೆ. ಸಿನಿಮಾಗೆ ನೆಗೆಟಿವ್ ರಿವ್ಯೂ ಬಂದಿದ್ದರೂ, ವೀಕೆಂಡ್‌ನಲ್ಲಿ ಉತ್ತಮ ಕಲೆಕ್ಷನ್ ಆಗುವ ನಿರೀಕ್ಷೆಯಲ್ಲಿ ಟ್ರೇಡ್ ಎಕ್ಸ್‌ಪರ್ಟ್‌ಗಳಿದ್ದಾರೆ. ಶನಿವಾರ, ಭಾನುವಾರ ಕಳೆಯುತ್ತಿದ್ದಂತೆ ಕರ್ನಾಟಕದಲ್ಲಿ ಸರ್ಕಾರಿ ರಜೆಯಿದೆ. ಹೀಗಾಗಿ ಸೋಮವಾರ ಕೂಡ ಕರ್ನಾಟಕದಲ್ಲಿ ಸಖತ್ ಒಳ್ಳೆಯ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ಸಿನಿಮಾ ಮೊದಲ ಮೂರು ದಿನಗಳಲ್ಲಿ 100 ಕೋಟಿ ರೂಪಾಯಿ ಗಳಿಸಿದರೆ, ಅಕ್ಷಯ್ ಕುಮಾರ್ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಂತಾಗುತ್ತೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Akshay Kumar Priyadarshan movie Bhooth Bangla Day 1 worldwide box office report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X