Bhooth Bangla Box Office Day 3:3ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಗೆದ್ದ ಅಕ್ಷಯ್ ಕುಮಾರ್;₹100 ಕೋಟಿ ದಾಟಿತೇ 'ಭೂತ್ ಬಂಗ್ಲ'?

ಬಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ಪ್ರಿಯದರ್ಶನ ಕಾಂಬಿನೇಷನ್‌ನಲ್ಲಿ ಬಂದಿರುವ 'ಭೂತ್ ಬಂಗ್ಲ' ಸಿನಿಮಾ ಕಳೆದ ಮೂರು ದಿನಗಳಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಿದೆ. ಅಸಲಿಗೆ ಇಂದು (ಏಪ್ರಿಲ್ 20) ಸಿನಿಮಾಗೆ ಅಗ್ನಿ ಪರೀಕ್ಷೆ ಆಗಿದ್ದರೂ, ಮೊದಲ ಮೂರು ದಿನಗಳ ಕಲೆಕ್ಷನ್ ಉತ್ತಮವಾಗಿದೆ.

ಅಕ್ಷಯ್ ಕುಮಾರ್ ಹಾಗೂ ಪ್ರಿಯದರ್ಶನ್ ಕಾಂಬಿನೇಷನ್ ಯಾವಾಗಲೂ ದೊಡ್ಡ ನಿರೀಕ್ಷೆಗಳನ್ನು ಹುಟ್ಟಾಕುತ್ತೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಇತಿಹಾಸವನ್ನೇ ಸೃಷ್ಟಿಸಿವೆ. ಹೀಗಾಗಿ 'ಭೂತ್ ಬಂಗ್ಲ' ಮೇಲೂ ಅದೇ ನಿರೀಕ್ಷೆಯಿತ್ತು. ಆದರೆ, ಫಸ್ಟ್ ಡೇ ಫಸ್ಟ್ ಶೋ ನೆಗೆಟಿವ್ ವಿಮರ್ಶೆಗಳೇ ಹೆಚ್ಚು ಸಿಕ್ಕಿದ್ದರಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪಲ್ಟಿ ಹೊಡೆಯುತ್ತೆ ಎಂದೇ ಊಹಿಸಲಾಗಿತ್ತು.

Akshay Kumar Priyadarshan movie Bhooth Bangla Day 3 worldwide box office report

ಆದರೆ, 'ಭೂತ್ ಬಂಗ್ಲ' ಸಿನಿಮಾ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವನ್ನು ತಲೆಕೆಳೆಗೆ ಮಾಡಿದೆ. ವೀಕೆಂಡ್‌ನಲ್ಲಿ ಈ ಸಿನಿಮಾಗೆ ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಿದ್ದರೆ, 3ನೇ ದಿನ 'ಭೂತ್ ಬಂಗ್ಲ' ಸಿನಿಮಾ ಗಳಿಸಿದ್ದು ಎಷ್ಟು? ಇಲ್ಲಿವರೆಗೂ ಎಷ್ಟು ಕಲೆಕ್ಷನ್ ಆಗಿದೆ? 100 ಕೋಟಿ ಕ್ಲಬ್ ಸೇರಿತೇ 'ಭೂತ್ ಬಂಗ್ಲ'? ತಿಳಿಯುವುದಕ್ಕೆ ಮುಂದೆ ಓದಿ.

'ಭೂತ್ ಬಂಗ್ಲ' 3ನೇ ದಿನದ ಕಲೆಕ್ಷನ್

ಅಕ್ಷಯ್ ಕುಮಾರ್ ನಟನೆಯ 'ಭೂತ್ ಬಂಗ್ಲ' ಹಾರರ್-ಕಾಮಿಡಿ ಜಾನರ್ ಸಿನಿಮಾ. ಬಾಲಿವುಡ್‌ನಲ್ಲಿ ಈ ಜಾನರ್ ಸಿನಿಮಾಗೆ ಸಿಕ್ಕಿರೋ ಸಕ್ಸಸ್ ರೇಟ್ ದೊಡ್ಡದಿದೆ. ಹೀಗಾಗಿ 'ಭೂತ್ ಬಂಗ್ಲ'ಗೂ ಮೇಲೂ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಮೂರು ದಿನಗಳಲ್ಲಿ ತೀರಾ ಅದ್ಭುತ ಎನ್ನುವಂತಹ ಕಲೆಕ್ಷನ್ ಮಾಡದೇ ಇದ್ದರೂ, ಉತ್ತಮ ಗಳಿಕೆ ಆಗಿದೆ ಎನ್ನಬಹುದು. ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿ ನೀಡುವ ಸ್ಯಾಕ್ನಿಲ್ಕ್ ಪ್ರಕಾರ, 'ಭೂತ್ ಬಂಗ್ಲ' 3ನೇ ದಿನ ಭಾರತದಲ್ಲಿ 23 ಕೋಟಿ ರೂಪಾಯಿ ಗಳಿಸಿದೆ. ಹಾಗೇ ಓವರ್‌ಸೀಸ್‌ನಲ್ಲಿ 7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Also Read
Bhooth Bangla Box Office Day 2: 2ನೇ ದಿನ 'ಭೂತ್ ಬಂಗ್ಲ' ಕಲೆಕ್ಷನ್‌ನಲ್ಲಿ ಏರಿಕೆ; ಯಶಸ್ಸಿನ ರುಚಿ ಕಂಡರೇ ಅಕ್ಷಯ್ ಕುಮಾರ್?
Bhooth Bangla Box Office Day 2: 2ನೇ ದಿನ 'ಭೂತ್ ಬಂಗ್ಲ' ಕಲೆಕ್ಷನ್‌ನಲ್ಲಿ ಏರಿಕೆ; ಯಶಸ್ಸಿನ ರುಚಿ ಕಂಡರೇ ಅಕ್ಷಯ್ ಕುಮಾರ್?

3 ದಿನಗಳ ಒಟ್ಟು ಕಲೆಕ್ಷನ್

'ಭೂತ್ ಬಂಗ್ಲ' ಮೊದಲ ಮೂರು ದಿನಗಳಲ್ಲಿ ಕಲೆಕ್ಷನ್ ಉತ್ತಮವಾಗಿದೆ. ಆದರೆ, ನೂರು ಕೋಟಿ ರೂಪಾಯಿ ಕ್ಲಬ್ ಸೇರುವವಲ್ಲಿ ಹಿಂದೆ ಬಿದ್ದಿದೆ. ನೆಗೆಟಿವ್ ರಿವ್ಯೂ ಸಿಕ್ಕಿದರೂ ಸಿನಿಮಾ ಮೊದಲ ಮೂರು ದಿನಗಳಲ್ಲಿ 58 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ. ಹಾಗಿದ್ದರೆ, ಮೊದಲ ದಿನಗಳಲ್ಲಿ ಕಲೆಕ್ಷನ್ ರಿಪೋರ್ಟ್ ಹೀಗಿದೆ.

ಪೇಯ್ಡ್ ಪ್ರೀಮಿಯರ್‌- Rs.3.75 ಕೋಟಿ
ಮೊದಲನೇ ದಿನ Rs.12.25 ಕೋಟಿ
2ನೇ ದಿನ Rs.19 ಕೋಟಿ
3ನೇ ದಿನ Rs. 23 ಕೋಟಿ
ಒಟ್ಟು Rs.58 ಕೋಟಿ (Net)

Akshay Kumar Priyadarshan movie Bhooth Bangla Day 3 worldwide box office report


ಸೋಮವಾರ ಅಗ್ನಿ ಪರೀಕ್ಷೆ

ಬಾಲಿವುಡ್ ಸಿನಿಮಾ 'ಭೂತ್ ಬಂಗ್ಲ' ಮೊದಲ ದಿನಗ ಉತ್ತಮ ಗಳಿಕೆ ಮಾಡಿದೆ. ಆದರೆ, ಅಸಲಿ ಪರೀಕ್ಷೆ ಶುರುವಾಗೋದು ಇಂದಿನಿಂದ (ಸೋಮವಾರ). ಮೊದಲ ಸೋಮವಾರ ಅಂದರೆ ಇಂದಿನಿಂದ ಕಲೆಕ್ಷನ್ ಹೇಗಿರುತ್ತೆ? ಕಡಿಮೆ ಆಗುತ್ತಾ ಹೆಚ್ಚಾಗುತ್ತಾ? ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳಿ ಹೇಳುತ್ತಿದ್ದಾರೆ. ಈಗಾಗಲೇ ವಿಶ್ವದಾದ್ಯಂತ 95.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೀಗಾಗಿ ಈ ವಾರ ಒಳ್ಳೆಯ ಕಲೆಕ್ಷನ್ ಆದರೆ, ಅಕ್ಷಯ್ ಕುಮಾರ್ ಮತ್ತೆ ಯಶಸ್ಸಿನ ಹಾದಿಗೆ ಮರಳಲಿದ್ದಾರೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Akshay Kumar Priyadarshan movie Bhooth Bangla Day 3 worldwide box office report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X