Thamma Box Office Day 1: ಕಾಂತಾರ ಚಾಪ್ಟರ್ 1 ವಿರುದ್ಧ ಗೆದ್ದರೇ ರಶ್ಮಿಕಾ ಮಂದಣ್ಣ? 'ಥಮ್ಮಾ' ಡೇ 1 ಕಲೆಕ್ಷನ್ ಎಷ್ಟು?
ಬೆಳಕಿನ ಹಬ್ಬ ದೀಪಾವಳಿಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ, ಈ ಬಾರಿ ರಿಲೀಸ್ ಆದ ಸಿನಿಮಾಗಳ ಸಂಖ್ಯೆ ಕಡಿಮೆ. ಬಿಡುಗಡೆಯಾದ ಕೆಲವೇ ಕೆಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ, ಆಯುಷ್ಮಾನ್ ಖುರಾನಾ ನಟನೆಯ 'ಥಮ್ಮಾ' ಸಿನಿಮಾ ಕೂಡ ಒಂದು. ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಕೊಡುವುದಕ್ಕೆ ಸಿನಿಮಾಗಳು ಇಲ್ಲದೇ ಇದ್ದಿದ್ದರಿಂದ ಉತ್ತಮ ಓಪನಿಂಗ್ ಆಗಬಹುದೆಂಬ ನಿರೀಕ್ಷೆ ಇತ್ತು.
ರಶ್ಮಿಕಾ ಮಂದಣ್ಣ, ಆಯುಷ್ಮಾನ್ ಖುರಾನ, ನವಾಜುದ್ದೀನ್ ಸಿದ್ಧಿಕಿ ಹಾಗೂ ಪರೇಶ್ ರಾವಲ್ ಅಂತ ಜನಪ್ರಿಯ ನಟರಿರುವ 'ಥಮ್ಮಾ' ರಿಲೀಸ್‌ಗೂ ಮುನ್ನ ನಿರೀಕ್ಷೆಯನ್ನೇನೋ ಹುಟ್ಟಾಕಿತ್ತು. ಆದರೆ, ಅಡ್ವಾನ್ಸ್ ಬುಕಿಂಗ್‌ನಲ್ಲಿ ಸಿನಿಮಾ ಬಗ್ಗೆ ಕ್ರೇಜ್ ಕಂಡಿರಲಿಲ್ಲ. ಆದರೆ, ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ.

ಹಾರರ್ ಕಾಮಿಡಿಗೆ ಜಾನರ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬೆಳಕಿನ ಹಬ್ಬದಂತೆ ಈ ಸಿನಿಮಾ ನೋಡಿವರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಆಯುಷ್ಮಾನ್ ಖುರಾನ, ರಶ್ಮಿಕಾ, ನವಾಜುದ್ದೀನ್ ಸಿದ್ಧಿಕಿ, ಪರೇಶ್ ರಾವಲ್ ನಟನೆ, ಸಿನಿಮಾ ಕಥೆ ಹಾಗೂ ಸ್ಕ್ರೀನ್ ಪ್ಲೇಯನ್ನು ಮೆಚ್ಚಿಕೊಂಡಿದ್ದಾರೆ. ಹಾಗಿದ್ದರೆ, ಮೊದಲ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
ಮೊದಲ ದಿನ 'ಥಮ್ಮಾ' ಕಲೆಕ್ಷನ್ ಏನು?
ರಶ್ಮಿಕಾ ಮಂದಣ್ಣ ನಟಿಸಿದ ಈ ಬಾಲಿವುಡ್ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ಹಿಂದೆ ಬಿದ್ದಿದ್ದರೂ, ಜನರು ನೇರವಾಗಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ಹೀಗಾಗಿ ಫಸ್ಟ್ ಡೇ ಕಲೆಕ್ಷನ್ ಉತ್ತಮವಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೊದಲನೇ ದಿನ ₹24.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮ್ಯಾಡಾಕ್ ನಿರ್ಮಾಣ ಸಂಸ್ಥೆಯ ಮತ್ತೊಂದು ಸಿನಿಮಾಗೆ ಬಿಗ್ ಓಪನಿಂಗ್ ಸಿಕ್ಕಂತಾಗಿದೆ.
ಬಾಲಿವುಡ್‌ನ 4ನೇ ಬಿಗ್ ಹಾರರ್ ಸಿನಿಮಾ
ರಶ್ಮಿಕಾ ಮಂದಣ್ಣ, ಆಯುಷ್ಮಾನ್ ಖುರಾನ ಸಿನಿಮಾ 'ಥಮ್ಮಾ' ಬಾಲಿವುಡ್‌ನಲ್ಲಿ ಬಿಗ್ ಓಪನಿಂಗ್ ಪಡೆದ 4ನೇ ಹಾರರ್ ಕಾಮಿಡಿ ಸಿನಿಮಾ ಆಗಿದೆ. ಈ ಸಿನಿಮಾ 'ಭೂಲ್ ಭುಲಯ್ಯ 2' ಸಿನಿಮಾವನ್ನು ಹಿಂದಿಕ್ಕಿದೆ. 'ಭುಲ್ ಭುಲಯ್ಯ 2' ₹14.11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಾಗೇ ಭೂಲ್ ಭುಲಯ್ಯ 3 ₹36.6 ಕೋಟಿ ಕಲೆಕ್ಷನ್ ಮಾಡಿದ್ದರೆ, ಗೋಲ್‌ಮಾನ್ ಅಗೈನ್ ₹30.14 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೇ 'ಥಮ್ಮಾ' ನಿರ್ಮಾಪಕರದ್ದೇ 'ಸ್ತ್ರೀ 2' ಮೊದಲ ದಿನ ₹64.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಬೆಸ್ಟ್ ಓಪನಿಂಗ್
'ಥಮ್ಮಾ' ಸಿನಿಮಾ ಬಾಲಿವುಡ್ ನಟ ಆಯುಷ್ಮಾನ್ ಖುರಾನ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂದು ಸಾಬೀತಾಗಿದೆ. ಈ ಹಿಂದೆ ಆಯುಷ್ಮಾನ್ ನಟಿಸಿದ ಸಿನಿಮಾಗೆ ಇಷ್ಟು ದೊಡ್ಡ ಓಪನಿಂಗ್ ಸಿಕ್ಕಿರಲಿಲ್ಲ. ₹24.87 ಕೋಟಿ ಮೊದಲ ದಿನವೇ ಗಳಿಸಿದ್ದು ನಟನ ವೃತ್ತಿಗೆ ಹೊಸ ಮೈಲಿಗಲ್ಲು. ಪಾಸಿಟಿವ್ ಓಪನಿಂಗ್ ಪಡೆದುಕೊಂಡಿರುವ ಈ ಸಿನಿಮಾಗೆ ಲೈಫ್ ಟೈಮ್ ಕಲೆಕ್ಷನ್ ಎಷ್ಟಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











