Thamma Box Office Day 5: 5 ದಿನಕ್ಕೆ ₹100 ಕೋಟಿ ಕ್ಲಬ್ ಸೇರಿದ 'ಥಾಮಾ'; ಏನಿದು ಲೆಕ್ಕಾಚಾರ?
ರಶ್ಮಿಕಾ ಮಂದಣ್ಣ ನಟಿಸಿದ ಮತ್ತೊಂದು ಬಾಲಿವುಡ್ ಸಿನಿಮಾ ₹100 ಕೋಟಿ ಕ್ಲಬ್ ಸೇರಿದೆ. ಬಾಲಿವುಡ್‌ನಲ್ಲಿ ನಿರಂತರ ಯಶಸ್ಸು ಕಾಣುತ್ತಿರುವ ರಶ್ಮಿಕಾ ಮಂದಣ್ಣ ವೃತ್ತಿ ಬದುಕಿಗೆ ಮತ್ತೊಂದು ಸಕ್ಸಸ್ ಸಿಕ್ಕಿದೆ. ಆಯುಷ್ಮಾನ್ ಖುರಾನಾ ಜೊತೆ ನಟಿಸಿದ 'ಥಾಮಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಹಾರರ್ -ಕಾಮಿಡಿ ಜಾನರ್‌ನ ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಗೆದ್ದು ಬೀಗುತ್ತಿದೆ.
'ಥಾಮಾ'ಗೆ ಫಸ್ಟ್ ಡೇ ಫಸ್ಟ್ ಶೋಗೇನೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಸಿನಿಮಾದ ಸ್ಟೋರಿ, ಸ್ಕ್ರೀನ್‌ಪ್ಲೇ ಬಗ್ಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅಲ್ಲದೆ ದೀಪಾವಳಿ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಮಾಡಬಹುದೆಂಬ ಲೆಕ್ಕಾಚಾರವಿತ್ತು. ಸಿನಿಮಾ ಹಾಡುಗಳು ಬಿಡುಗಡೆಗೂ ಮುನ್ನವೇ ಸೂಪರ್ ಹಿಟ್ ಆಗಿದ್ದವು.

ಆದರೆ, ನಿರ್ಮಾಣ ಸಂಸ್ಥೆ ಮ್ಯಾಡಾಕ್ ನಿರೀಕ್ಷೆ ಮಾಡಿದಷ್ಟು ಮೊದಲ ದಿನ ಕಲೆಕ್ಷನ್ ಮಾಡಿಲ್ಲ. ಫಸ್ಟ್ ಡೇ ₹24 ಕೋಟಿ ಗಳಿಸುವುದಕ್ಕಷ್ಟೇ ಸಾಧ್ಯವಾಯ್ತು. ಇದೇ ಸಂಸ್ಥೆ ನಿರ್ಮಿಸಿದ್ದ 'ಸ್ತ್ರೀ 2' ಮೊದಲ ದಿನ ₹34 ಕೋಟಿಗೂ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಮುರಿಯಬಹುದೆಂಬ ನಿರೀಕ್ಷೆ ಸುಳ್ಳಾಗಿತ್ತು. ಹಾಗಂತ ಗಳಿಕೆಯಲ್ಲೇನು ಮೋಸ ಆಗಿಲ್ಲ. ಹಾಗಿದ್ದರೆ, 5ನೇ ದಿನದ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
5ನೇ ದಿನದ ಕಲೆಕ್ಷನ್ ಎಷ್ಟು?
'ಥಾಮಾ' ಸಿನಿಮಾ ರಿಲೀಸ್ 6ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ (ಅಕ್ಟೋಬರ್ 25) 5ನೇ ದಿನವಾಗಿದ್ದು, ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡಿದೆ. ಸ್ಯಾಕ್ನಿಲ್ಕ್ ಪ್ರಕಾರ, ರಶ್ಮಿಕಾ ಮಂದಣ್ಣ ಹಾಗೂ ಆಯುಷ್ಮಾನ್ ಖುರಾನಾ ಸಿನಿಮಾ ವೀಕೆಂಡ್‌ನಲ್ಲಿ ಮತ್ತೆ ಚೇರಿಕೆ ಕಂಡಿದೆ. ₹13.05 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ₹13 ಕೋಟಿ ಕಲೆಕ್ಷನ್ ಮಾಡಿದರೆ, ತೆಲುಗು ವರ್ಷನ್ ₹5 ಲಕ್ಷ ಗಳಿಕೆ ಕಂಡಿದೆ.
5 ದಿನಗಳಲ್ಲಿ ಭಾರತದಲ್ಲಿ ಗಳಿಸಿದ್ದೆಷ್ಟು?
ಇತ್ತೀಚೆಗೆ ಹಾರರ್-ಕಾಮಿಡಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಾಣುತ್ತಿವೆ. ಆ ಸಾಲಿಗೆ 'ಥಾಮಾ' ಕೂಡ ಸೇರಿಕೊಂಡಿದೆ. ಕಳೆದ ಐದು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಡಿಸೆಂಟ್ ಆಗಿದೆ. ರಶ್ಮಿಕಾ, ಆಯುಷ್ಮಾನ್ ಖುರಾನಾ, ನವಾಜುದ್ದೀನ್ ಸಿದ್ಧಿಕಿ ಹಾಗೂ ಪರೇಶ್ ರಾವಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಐದು ದಿನಗಳಲ್ಲಿ ಭಾರತದ ಬಾಕ್ಸಾಫೀಸ್‌ನಲ್ಲಿ ಆಗಿರುವ ಕಲೆಕ್ಷನ್ ಹೀಗಿದೆ.
5 ದಿನಗಳ ಕಲೆಕ್ಷನ್ (ಭಾರತ)
1ನೇ ದಿನ ₹24 ಕೋಟಿ
2ನೇ ದಿನ ₹18.6 ಕೋಟಿ
3ನೇ ದಿನ ₹13 ಕೋಟಿ
4ನೇ ದಿನ ₹9.96 ಕೋಟಿ
5ನೇ ದಿನ ₹13.05 ಕೋಟಿ
ಒಟ್ಟು ₹78.61 ಕೋಟಿ (Net)

ವಿಶ್ವದಾದ್ಯಂತ ₹100 ಕೋಟಿ ಕಲೆಕ್ಷನ್
'ಥಾಮಾ' ಸಿನಿಮಾ 5ನೇ ದಿನಕ್ಕೆ ಕೆಲವು ಸಿನಿಮಾಗಳನ್ನು ಹಿಂದಿಕ್ಕಿದೆ. ಮ್ಯಾಡಾಕ್ ಸಂಸ್ಥೆ ನಿರ್ಮಿಸಿದ್ದ 'ಭೇಡಿಯಾ' ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ (68.99) ಅನ್ನು ಹಿಂದಿಕ್ಕಿದೆ. ಹಾಗೇ ವರುಣ್ ಧವನ್ ನಟನೆಯ 'ಸನ್ನಿ ಸನ್‌ಸ್ಕಾರಿ ಕಿ ತುಲ್ಸಿ ಕುಮಾರಿ' ಸಿನಿಮಾ ಇದೂವರೆಗೂ ಗಳಿಸಿದ ಕಲೆಕ್ಷನ್ (60.35) ಅನ್ನು ಹಿಂದಿಕ್ಕಿದೆ. ಇನ್ನು ವಿಶ್ವದಾದ್ಯಂತ ಈ ಸಿನಿಮಾ ಐದು ದಿನಗಳಲ್ಲಿ ₹105.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











