Thamma Box Office Day 6: ವೀಕೆಂಡ್‌ನಲ್ಲಿ ರಶ್ಮಿಕಾ ಸಿನಿಮಾ ಗಳಿಸಿದ್ದೆಷ್ಟು? 6 ದಿನಗಳಲ್ಲಿ ₹100 ಕೋಟಿ ದಾಟಿತೇ?
ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಆಯುಷ್ಮಾನ್ ಖುರಾನ, ನವಾಜುದ್ದೀನ್ ಸಿದ್ಧಿಕಿ, ಪರೇಶ್ ರಾವಲ್ ಜೊತೆ ನಟಿಸಿದ್ದ 'ಥಾಮಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿ ಕಲೆಕ್ಷನ್ ಮಾಡುತ್ತಿದೆ. ಬಾಲಿವುಡ್ ಜನಪ್ರಿಯ ನಿರ್ಮಾಣ ಸಂಸ್ಥೆ ಮ್ಯಾಡಾಕ್ ನಿರ್ಮಿಸಿದ ಈ ಹಾರಾರ್- ಕಾಮಿಡಿ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆಯೇ ಇತ್ತು.
ಮ್ಯಾಡಾಕ್ ನಿರ್ಮಿಸಿದ 'ಸ್ತ್ರೀ 2' ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿ ಬಾಲಿವುಡ್ ಮಂದಿಗೆ ಸರ್ಪ್ರೈಸ್ ಕೊಟ್ಟಿತ್ತು. ಈಗ 'ಥಾಮಾ' ಕೂಡ ಅದೇ ಸೇರುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸಾಮಾನ್ಯವಾಗಿ ದೀಪಾವಳಿ ಬಾಲಿವುಡ್ ಮಂದಿಗೆ ಭರ್ಜರಿ ಸಕ್ಸಸ್ ತಂದುಕೊಂಡುತ್ತೆ. 'ಥಾಮಾ'ಗೆ ದೊಡ್ಡ ಮಟ್ಟಕ್ಕೆ ಸಹಾಯವಾಗದೇ ಹೋದರೂ, ಉತ್ತಮ ಓಪನಿಂಗ್ ಸಿಗುವುದಕ್ಕೆ ಸಹಾಯಕವಾಗಿತ್ತು.

ಹೀಗಾಗಿ ದೀಪಾವಳಿ ಮುಗಿದ ಬಳಿಕ 'ಥಾಮಾ' ಕಲೆಕ್ಷನ್ ಮತ್ತಷ್ಟು ಏರಿಕೆ ಆಗಬಹುದೆಂಬ ನಿರೀಕ್ಷೆಯಿತ್ತು. ಅದರಂತೆಯೇ ಮೊದಲ ವೀಕೆಂಡ್‌ನಲ್ಲಿ ಈ ಸಿನಿಮಾ ಡಿಸೆಂಬರ್ ಅನ್ನು ಕಲೆ ಹಾಕಿದೆ. ಮೊದಲ ಶನಿವಾರ ಹಾಗೂ ಭಾನುವಾರ ಕಲೆಕ್ಷನ್ ಎಷ್ಟು ಅನ್ನೋದು ಹೊರ ಬಿದ್ದಿದೆ. ಹಾಗಿದ್ದರೆ, 6ನೇ ದಿನದ ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
6ನೇ ದಿನದ ಕಲೆಕ್ಷನ್ ಎಷ್ಟು?
ರಶ್ಮಿಕಾ ಮಂದಣ್ಣ ಬಾಲಿವುಡ್ ಮಂದಿಗೆ ಲಕ್ಕಿ ಹೀರೋಯಿನ್ ಆಗಿದ್ದಾರೆ. ಸಲ್ಮಾನ್ ಖಾನ್ ಜೊತೆ ನಟಿಸಿದ 'ಸಿಕಂದರ್' ಹಾಗೂ 'ಗುಡ್ ಬೈ' ಎರಡನ್ನು ಬಿಟ್ಟು ಬಹುತೇಕ ಬಾಲಿವುಡ್‌ನ ಎಲ್ಲಾ ಸಿನಿಮಾಗಳು ಬಾಕ್ಸಾಫೀಸನಲ್ಲಿ ಗೆದ್ದಿವೆ. ಈಗ ಲಿಸ್ಟ್‌ಗೆ 'ಥಾಮಾ' ಹೊಸದಾಗಿ ಸೇರಿಕೊಂಡಿದೆ. ಸ್ಯಾಕ್ನಿಲ್ಕ್ ನೀಡಿರುವ ಅಂಕಿ-ಅಂಶಗಳ ಪ್ರಕಾರ 6ನೇ ದಿನ 'ಥಾಮಾ' ₹12.6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
₹100 ಕೋಟಿ ಕ್ಲಬ್ ಸೇರಿತೇ?
ಬಾಲಿವುಡ್‌ನ ಹಾರರ್-ಕಾಮಿಡಿ ಸಿನಿಮಾ 'ಥಾಮಾ' ವಿಶ್ವದಾದ್ಯಂತ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಭಾರತದಲ್ಲೂ 6 ದಿನಗಳಲ್ಲಿಯೇ ₹101 ಕೋಟಿ (Gross) ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಆದರೆ, ನೆಟ್ ಕಲೆಕ್ಷನ್ ಅಂತ ಲೆಕ್ಕ ತೆಗೆದುಕೊಂಡರೇ, ಈ ಸಿನಿಮಾ ₹91.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಈ ಆರು ದಿನಗಳಲ್ಲಿ 'ಥಾಮಾ' ಗಳಿಸಿದ ಕಲೆಕ್ಷನ್ ಹೀಗಿದೆ.
6 ದಿನಗಳ ಕಲೆಕ್ಷನ್ ಹೀಗಿದೆ
1ನೇ ದಿನ ₹24 ಕೋಟಿ
2ನೇ ದಿನ ₹18.6 ಕೋಟಿ
3ನೇ ದಿನ ₹13 ಕೋಟಿ
4ನೇ ದಿನ ₹10 ಕೋಟಿ
5ನೇ ದಿನ ₹13.1 ಕೋಟಿ
6ನೇ ದಿನ ₹12.6 ಕೋಟಿ
ಒಟ್ಟು ₹91.3 ಕೋಟಿ (Net)

'ಥಾಮಾ' ನೋಡುತ್ತಿಲ್ಲ ತೆಲುಗು ಮಂದಿ
ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರಿಂದ 'ಥಾಮಾ' ಸಿನಿಮಾವನ್ನು ಓಟಿಟಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಆದರೆ, ತೆಲುಗಿನಲ್ಲಿ ಈ ಸಿನಿಮಾ ಯಾಕೋ ಸದ್ದು ಮಾಡಲಿಲ್ಲ. ತೆಲುಗು ಮಂದಿ 'ಥಾಮಾ' ಸಿನಿಮಾವನ್ನು ತೆಲುಗಿನಲ್ಲಿ ನೋಡುವುದಕ್ಕೆ ಇಷ್ಟ ಪಟ್ಟಿಲ್ಲ. ಮೊದಲ ದಿನ ₹25 ಲಕ್ಷ ಕಲೆಕ್ಷನ್ ಮಾಡಿದ್ದು ಬಿಟ್ಟರೆ, ಉಳಿದ ದಿನಗಳಲ್ಲಿ ₹10 ಲಕ್ಷ ದಾಟಿಲ್ಲ. ಇಲ್ಲಿವರೆಗೂ 'ಥಾಮಾ' ತೆಲುಗು ವರ್ಷನ್ ಗಳಿಸಿದ್ದು ಕೇವಲ ₹70 ಲಕ್ಷ ಅಷ್ಟೇ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











