Baahubli The Epic Day 5: 'ಬಾಹುಬಲಿ ದಿ ಎಪಿಕ್' ರಿಲೀಸ್ ಮಾಡಿ ತಪ್ಪು ಮಾಡಿದ್ರಾ ರಾಜಮೌಳಿ? 5ನೇ ದಿನ ಗಳಿಸಿದ್ದೆಷ್ಟು?

ಎಸ್‌.ಎಸ್‌. ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಬರೆದಿತ್ತು. ಎರಡೂ ಚಾಪ್ಟರ್‌ಗಳು ಹೊಸ ಹೊಸ ದಾಖಲೆಗಳನ್ನು ಬರೆದಿದ್ದವು. ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವಂತೆ ಮಾಡಿದ್ದವು. ಈಗ ಈ ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗಿವೆ. ಈ ಸಂಭ್ರಮದಲ್ಲಿ 'ಬಾಹುಬಲಿ' ಎರಡೂ ಭಾಗಗಳನ್ನು ಸೇರಿಸಿ ಒಂದು ಸಿನಿಮಾ ಮಾಡಿ ರಿಲೀಸ್ ಮಾಡಿದ್ದರು.

ಅಕ್ಟೋಬರ್ 31ರಂದು 3 ಗಂಟೆ 44 ನಿಮಿಷಗಳಷ್ಟು ಉದ್ದವಿರುವ 'ಬಾಹುಬಲಿ: ದಿ ಎಪಿಕ್' ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಿತ್ತು. ಆರಂಭದ ಎರಡು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಉತ್ತಮವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇಳಿಕೆ ಕಾಣುತ್ತಿದೆ. ಬಿಡುಗಡೆಗೂ ಮುನ್ನ ಭಾರೀ ದೊಡ್ಡ ನಿರೀಕ್ಷೆಯಲ್ಲಿದ್ದ ರಾಜಮೌಳಿ ಮತ್ತವರ ತಂಡಕ್ಕೆ ಕೊಂಚ ಮಟ್ಟಿಗೆ ನಿರಾಸೆ ಎಂದೇ ಹೇಳಬಹುದು.

Baahubali The Epic Day 5 Box office Collection Report Did Rajamouli made mistake

'ಬಾಹುಬಲಿ' ಸೀರಿಯಲ್ ಅನ್ನು ತೆಲುಗಿನ ಅರ್ಕಾ ಮೀಡಿಯಾ ವರ್ಕ್ಸ್ ನಿರ್ಮಾಣ ಮಾಡಿತ್ತು. ಶೋಬು ಯಾರ್ಲಗಡ್ಡ ಮತ್ತು ಪ್ರಸಾದ್ ದೇವಿನ್ನೇನಿ 'ಬಾಹುಬಲಿ' ಸೀರಿಸ್‌ನ ನಿರ್ಮಾಪಕರು. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ ಹಾಗೂ ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇವರೊಂದಿಗೆ ಪೋಷಕ ಪಾತ್ರದಲ್ಲಿ ರಮ್ಯಾಕೃಷ್ಣ, ನಾಸರ್, ಸತ್ಯರಾಜ್, ಆದಿವಿ ಶೇಷ್ ಸೇರಿದಂತೆ ಹಲವು ಮಂದಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಿನಿಮಾ ರೀ-ರಿಲೀಸ್ ಆಗಿ 5ನೇ ದಿನಕ್ಕೆ ಕಾಲಿಟ್ಟಿದ್ದು ಕಲೆಕ್ಷನ್ ಎಷ್ಟಾಗಿದೆ ಎಂದು ತಿಳಿಯಲು ಮುಂದೆ ಓದಿ.

'ಬಾಹುಬಲಿ ದಿ ಎಪಿಕ್' 5ನೇ ದಿನದ ಕಲೆಕ್ಷನ್

ರಾಜಮೌಳಿಯ 'ಬಾಹುಬಲಿ: ದಿ ಎಪಿಕ್' ಕಲ್ಪನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆರಂಭದ ದಿನಗಳಲ್ಲಿ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಒಂದೊಳ್ಳೆ ಕಲೆಕ್ಷನ್ ಕೂಡ ಆಗಿತ್ತು. ಆದರೆ, ನಾಲ್ಕನೇ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಶೇ.72ರಷ್ಟು ಡ್ರಾಪ್ ಕಂಡಿದೆ. ಸ್ಯಾಕ್ನಿಲ್ಕ್ ಪ್ರಕಾರ, 5ನೇ ದಿನವೂ ಈ ಸಿನಿಮಾದ ಕಲೆಕ್ಷನ್ ಸಿಕ್ಕಾಪಟ್ಟೆ ಡ್ರಾಪ್ ಆಗಿದೆ. ಕೇವಲ ₹1.50 ಕೋಟಿ ಕಲೆಕ್ಷನ್ ಮಾಡಿದೆ.

ಕನ್ನಡ ವರ್ಷನ್ ಕಲೆಕ್ಷನ್ ಎಷ್ಟು?

'ಬಾಹುಬಲಿ ದಿ ಎಪಿಕ್' ಕನ್ನಡ ವರ್ಷನ್ ಕೂಡ ರಿಲೀಸ್ ಆಗಿತ್ತು. ಕನ್ನಡಕ್ಕೆ ಡಬ್ ಮಾಡಿ ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಕನ್ನಡಿಗರಿ ಕನ್ನಡ ವರ್ಷನ್‌ಗೆ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿಲ್ಲ. ಮೊದಲ ದಿನ ಕೇವಲ 2 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. 2ನೇ ದಿನ ₹3 ಲಕ್ಷ ರೂಪಾಯಿ, 3ನೇ ದಿನ ₹3 ಲಕ್ಷ ರೂಪಾಯಿ, 4ನೇ ದಿನ 1 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟು ಐದು ದಿನಗಳಲ್ಲಿ ಈ ಸಿನಿಮಾ ₹10 ಲಕ್ಷ ಕಲೆಕ್ಷನ್ ಆಗಿರಬಹುದೆಂದು ವರದಿಯಾಗಿದೆ.

ಯಾವ್ಯಾವ ಏರಿಯಾಗಳಲ್ಲಿ ಎಷ್ಟೆಷ್ಟು?

'ಬಾಹುಬಲಿ: ದಿ ಎಪಿಕ್‌' ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗಿಲ್ಲ. 10 ವರ್ಷಗಳ ಬಳಿಕ ರಿಲೀಸ್ ಆಗುತ್ತಿದ್ದರಿಂದ ಗಳಿಕೆಯಲ್ಲಿ ದಾಖಲೆ ಬರೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದು ಸುಳ್ಳಾಗಿದೆ. ರಾಜಮೌಳಿ ರೀ-ರಿಲೀಸ್‌ಗೆ ಪ್ರಯತ್ನ ಪಟ್ಟು ತಪ್ಪು ಮಾಡಿದ್ರಾ? ಅನ್ನೋ ಪ್ರಶ್ನೆ ಎದುರಾಗಿದೆ. ವಿಶ್ವದಾದ್ಯಂತ ಈ ಸಿನಿಮಾ ₹50 ಕೋಟಿ ದಾಟುವುದಕ್ಕೂ ಪರದಾಡುತ್ತಿದೆ.

ಬಾಹುಬಲಿ ದಿ ಎಪಿಕ್ ಕಲೆಕ್ಷನ್ (ಭಾರತ)

ತೆಲುಗು ₹19.8 ಕೋಟಿ
ಹಿಂದಿ ₹5.49 ಕೋಟಿ
ಕನ್ನಡ ₹10 ಲಕ್ಷ
ತಮಿಳು ₹1.78 ಕೋಟಿ
ಮಲಯಾಳಂ ₹59 ಲಕ್ಷ
ಒಟ್ಟು ₹27.75 ಕೋಟಿ (Net)
₹41.85 ಕೋಟಿ (Worlwide Gross)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Baahubali The Epic Day 5 Box office Collection Report Did Rajamouli made mistake?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X