Dhurandhar 2:'ಧುರಂಧರ್ 2'ಗಾಗಿ ಇದೇ ಮೊದಲ ಬಾರಿಗೆ ಊರ್ವಶಿ ಥಿಯೇಟರ್‌ನಲ್ಲಿ 8 ಗಂಟೆ ಶೋ; ದಾಖಲೆ ಕಲೆಕ್ಷನ್?

ಬಾಲಿವುಡ್ ಸಿನಿಮಾ 'ಧರುಂಧರ್ 2' ಕ್ರೇಜ್‌ಗೆ ಭಾರತೀಯ ಚಿತ್ರರಂಗವೇ ಶೇಕ್ ಆಗಿದೆ. ಸಿನಿಮಾ ರಿಲೀಸ್ ಕಡೆಯಲ್ಲೆಲ್ಲ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಅದರಲ್ಲೂ ಮೊದಲ ನಾಲ್ಕು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ನೋಡಿ ಚಿತ್ರರಂಗವೇ ಬೆಚ್ಚಿಬಿದ್ದಿದೆ. 'ಧುರಂಧರ್ 2' ಭಾರತೀಯ ಚಿತ್ರರಂಗದ ಹೊಸ ಅಧ್ಯಾಯ ಎಂದು ದಿಗ್ಗಜರು ಅಭಿಪ್ರಾಯ ಪಟ್ಟಿದ್ದಾರೆ.

'ಧುರಂಧರ್ 2' ಕೇವಲ ರಣ್‌ವೀರ್‌ ಸಿಂಗ್‌ ವೃತ್ತಿ ಬದುಕನ್ನಷ್ಟೇ ಬದಲಿಸಿಲ್ಲ. ಬದಲಿಗೆ ಇಡೀ ಭಾರತೀಯ ಚಿತ್ರರಂಗದ ದಿಕ್ಕನೇ ಬದಲಿಸಿದೆ. ದೇಶದ ಉದ್ದಗಲಕ್ಕೂ ಒಂದೊಂದು ದಾಖಲೆಯನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಕೆಲವು ಚಿತ್ರಮಂದಿರಗಳು ದಾಖಲೆ ಕಲೆಕ್ಷನ್ ಅನ್ನು ಮಾಡಿವೆ. ಅದೇ ರೀತಿ ಬೆಂಗಳೂರಿನ ಊರ್ವಶಿ ಚಿತ್ರಮಂದಿರ 'ಧುರಂಧರ್ 2' ಸಿನಿಮಾಗಾಗಿ ತನ್ನ ರೆಗ್ಯೂಲರ್ ಶೋ ಪ್ಯಾಟರ್ನ್‌ ಅನ್ನೇ ಬದಲಿಸಿದೆ.

Bengaluru Urvashi Theater arranged first time 8am show for Dhurandhar 2 and breaks records

ಹೌದು. ಬೆಂಗಳೂರಿನ ಲಾಲ್ ಬಾಗ್ ಸಮೀಪವಿರುವ ಊರ್ವಶಿ ಚಿತ್ರಮಂದಿರ ಹಲವು ದಶಕಗಳಿಂದ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿದೆ. ಫಿಲ್ಮ್ ಮೇಕರ್ಸ್ ಈ ಚಿತ್ರಮಂದಿರದಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಸಿಂಗಲ್ ಸ್ಕ್ರೀನ್ ಆಗಿದ್ದರೂ, ಇಲ್ಲಿ ಬಿಗ್ ಬಜೆಟ್ ಸಿನಿಮಾಗಳು ದಾಖಲೆ ಲೆಕ್ಕದಲ್ಲಿ ಕಲೆಕ್ಷನ್ ಅನ್ನು ಮಾಡಿವೆ. ಇಂತಹ ಚಿತ್ರಮಂದಿರ ಎಷ್ಟೇ ದೊಡ್ಡ ಸಿನಿಮಾ ಬಂದೂ ತನ್ನ ಶೋ ಪ್ಯಾಟರ್ನ್ ಅನ್ನು ಮಾತ್ರ ಚೇಂಜ್ ಮಾಡಿರಲಿಲ್ಲ. 'ಧುರಂಧರ್ 2'ಗಾಗಿ ತನ್ನ ಪ್ಯಾಟರ್ನ್ ಅನ್ನೇ ಬದಲಾಯಿಸಿದೆ. ಅದೇನು ಅಂತ ನೋಡುವುದಾರೇ,

ಬೆಳಗ್ಗೆ 8 ಗಂಟೆ ಶೋ

ಊರ್ವಶಿ ಚಿತ್ರಮಂದಿರದ ಇತಿಹಾಸದಲ್ಲಿ ಬೆಳಗ್ಗೆ 8 ಗಂಟೆಗೆ ಶೋಗಳು ಆರಂಭ ಆಗಿದ್ದೇ ಇಲ್ಲ. ಆದರೆ, 'ಧುರಂಧರ್ 2' ಬೆಳಗ್ಗೆ ಎಂಟು ಗಂಟೆಗೆ ಇದೇ ಮೊದಲ ಬಾರಿಗೆ ಶೋ ಅನ್ನು ಹಾಕಲಾಗಿದೆ. ಇದಕ್ಕೆ ಮೊದಲ ನಾಲ್ಕು ದಿನ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೇ ಸೋಮವಾರವಾದ ಇಂದು (ಮಾರ್ಚ್ 23) ಕೂಡ ಬೆಳಗಿನ 8 ಗಂಟೆ ಶೋಗೆ ಸುಮಾರು 300 ಟಿಕೆಟ್‌ಗಳು ಸೇಲ್ ಆಗಿವೆ. 'ಧುರಂಧರ್ 2' 3 ಗಂಟೆ 49 ನಿಮಿಷಗಳ ಸಿನಿಮಾ ಆಗಿದ್ದರಿಂದ ಮೊದಲು 3 ಶೋಗಳನ್ನು ಪ್ರದರ್ಶನ ಮಾಡುವುದಕ್ಕೆ ನಿರ್ಧರಿಸಿದ್ದರು. ಆದರೆ, ಬಳಿಕ 8 ಗಂಟೆಗೆ ಶೋ ಹಾಕಿ ತನ್ನ ಚಿತ್ರಮಂದಿರದ ಚರಿತ್ರೆಯನ್ನೇ ಬದಲಿಸಿದ್ದಾರೆ.

Also Read
Dhurandhar-2 Day 3 Boxoffice: 'ಧುರಂಧರ್'-2 ಸುನಾಮಿ; ಮೊದಲ ದಿನಕ್ಕಿಂತ 3ನೇ ದಿನ ಹೆಚ್ಚು ಕಲೆಕ್ಷನ್
Dhurandhar-2 Day 3 Boxoffice: 'ಧುರಂಧರ್'-2 ಸುನಾಮಿ; ಮೊದಲ ದಿನಕ್ಕಿಂತ 3ನೇ ದಿನ ಹೆಚ್ಚು ಕಲೆಕ್ಷನ್

ಊರ್ವಶಿಯಲ್ಲಾದ ಕಲೆಕ್ಷನ್ ಎಷ್ಟು?

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ 'ಧುರಂಧರ್ 2' ದಾಖಲೆ ಕಲೆಕ್ಷನ್ ಮಾಡಿದೆ. ಮೊದಲ ನಾಲ್ಕು ದಿನಗಳಲ್ಲಿ ಕಲೆಕ್ಷನ್ ವಿಷಯದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾ ಸುಮಾರು 36.80 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಊರ್ವಶಿ ಥಿಯೇಟರ್‌ನಲ್ಲಿ ಮೊದಲ 4 ದಿನಗಳ ಕಲೆಕ್ಷನ್ ಹೀಗಿದೆ.

4 ದಿನಗಳ ಕಲೆಕ್ಷನ್

ಮೊದಲೇ ದಿನ ₹9.80 ಲಕ್ಷ
2ನೇ ದಿನ ₹7 ಲಕ್ಷ
3ನೇ ದಿನ ₹9.80 ಲಕ್ಷ
4ನೇ ದಿನ ₹10.20 ಲಕ್ಷ
ಒಟ್ಟು ₹36.80 ಲಕ್ಷ

Bengaluru Urvashi Theater arranged first time 8am show for Dhurandhar 2 and breaks records
ಕರ್ನಾಟಕದ ಕಲೆಕ್ಷನ್ ಎಷ್ಟು?

ಊರ್ವಶಿ ಚಿತ್ರಮಂದಿರ ಅಷ್ಟೇ ಅಲ್ಲ, ಕರ್ನಾಟಕದಲ್ಲಿ 'ಧುರಂಧರ್ 2' ಕಲೆಕ್ಷನ್ ಸಖತ್ ಆಗಿದೆ. ಕರ್ನಾಟಕದ ವಿತರಕರ ಪ್ರಕಾರ, ಈ ಸಿನಿಮಾ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ. ಈಗಾಗಲೇ ಈ ಸಿನಿಮಾ ನಾಲ್ಕು ದಿನಗಳಲ್ಲಿ 49 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹೀಗೆ ಮುಂದುವರೆದರೆ, ಪರಭಾಷೆಯ ಸಿನಿಮಾವೊಂದು ದಾಖಲೆ ಕಲೆಕ್ಷನ್ ಮಾಡೋದು ಪಕ್ಕಾ ಎನ್ನಲಾಗಿದೆ.

4 ದಿನಗಳ ಕರ್ನಾಟಕ ಕಲೆಕ್ಷನ್

ಪೇಯ್ಡ್ ಪ್ರಿವ್ಯೂ ₹6 ಕೋಟಿ
ಮೊದಲ ದಿನ ₹11 ಕೋಟಿ
2ನೇ ದಿನ ₹9 ಕೋಟಿ
3ನೇ ದಿನ ₹11.5 ಕೋಟಿ
4ನೇ ದಿನ ₹12 ಕೋಟಿ
ಒಟ್ಟು ₹49.5 ಕೋಟಿ

ಕರ್ನಾಟಕದಲ್ಲಿ ₹100 ಕೋಟಿ?

ಟ್ರೇಡ್‌ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ, 'ಧುರಂಧರ್ 2' ಸಿನಿಮಾ ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಮೊದಲ ನಾಲ್ಕು ದಿನಗಳ ಲೆಕ್ಕಾಚಾರದ ಪ್ರಕಾರ, ಈ ಸಿನಿಮಾ ಕೇವಲ ಕರ್ನಾಟಕದಲ್ಲಿಯೇ ₹100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂದು ಅಂದಾಜಿಸಲಾಗಿದೆ.

More from Filmibeat

Read more about: theater Dhurandhar 2 movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X