MSVPG Karnataka Box Office: ಕರ್ನಾಟಕದಲ್ಲೂ ಚಿರಂಜೀವಿ ಸಿನಿಮಾಗೆ ಭರ್ಜರಿ ಕಲೆಕ್ಷನ್; 2ನೇ ದಿನ ಲೆಕ್ಕಾಚಾರ ಹೀಗಿದೆ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕಮ್‌ಬ್ಯಾಕ್ ಮಾಡಿದ್ದಾರೆ. ಒಂದಿಷ್ಟು ಸೋಲುಗಳ ಬಳಿಕ ಚಿರಂಜೀವಿ ನಟಿಸಿದ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಮೆಗಾಸ್ಟಾರ್ ಲುಕ್, ಖದರ್ ಅನ್ನಂತೂ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಚಿರಂಜೀವಿ ಈ ಸಿನಿಮಾದಲ್ಲಿ ಯಂಗ್ ಲುಕ್ ಕೊಟ್ಟಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಮನ ಶಂಕರ ವರಪ್ರಸಾದ್ ಗಾರು' ಕೇವಲ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಷ್ಟೇ ಅಲ್ಲ. ಕರ್ನಾಟಕದಲ್ಲಿಯೂ ಉತ್ತಮ ಬ್ಯುಸಿನೆಸ್ ಮಾಡಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮೊದಲ ದಿನದ ಕಲೆಕ್ಷನ್ ಉತ್ತಮವಾಗಿದೆ. ಇಲ್ಲೂ ಚಿರಂಜೀವಿಯ ಲಕ್ಷಾಂತರ ಅಭಿಮಾನಿಗಳು ಇರುವುದರಿಂದ ಸಿನಿಮಾಗೆ ಮಸ್ತ್ ರೆಸ್ಪಾನ್ ಸಿಕ್ಕಿದೆ. ನಿರ್ದೇಶಕ ಅನಿಲ್ ರವಿಪುಡಿ ಮತ್ತೊಮ್ಮೆ ಗೆದ್ದಂತೆ ಆಗಿದೆ.

Chiranjeevi Nayanthara movie Mana Shankara Vara Prasad Garu Day 1 Karnataka Box Office Collection Report

ಚಿರಂಜೀವಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುವುದಕ್ಕೆ ಶುರು ಮಾಡಿದೆ. ಸಂಕ್ರಾಂತಿ ರಿಲೀಸ್ ಆದ ಪರಭಾಷೆಯ ಸಿನಿಮಾಗಳಲ್ಲಿ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ 'ಮನ ಶಂಕರ ವರಪ್ರಸಾದ್ ಗಾರು' ಮೊದಲ ಸ್ಥಾನದಲ್ಲಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಫಸ್ಟ್ ಡೇ ಆದ ಕಲೆಕ್ಷನ್ ಎಷ್ಟು? ಎರಡನೇ ದಿನವೂ ಅದೇ ಕ್ರೇಜ್ ಮುಂದುವರೆದಿದೆಯೇ? ತಿಳಿಯುವುದಕ್ಕೆ ಮುಂದೆ ಓದಿ.

ಫಸ್ಟ್‌ ಡೇ ಕರ್ನಾಟಕ ಕಲೆಕ್ಷನ್

'ಮನ ಶಂಕರ ವರಪ್ರಸಾದ್ ಗಾರು' ರಿಲೀಸ್‌ಗೂ ಮೊದಲೇ ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಚಿರಂಜೀವಿ ಜೊತೆ ವೆಂಕಟೇಶ್ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಿರೋದು ಪ್ರೇಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿತ್ತು. ಕರ್ನಾಟಕದಲ್ಲಿ ಸುಮಾರು 460 ಸ್ಕೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಸ್ಯಾಕ್ನಿಲ್ಕ್ ವರದಿ ಪ್ರಕಾರ ಕರ್ನಾಟಕದಲ್ಲಿ ಪೇಯ್ಡ್‌ ಪ್ರೀಮಿಯರ್‌ನಿಂದ 1.3 ಕೋಟಿ ಕಲೆಕ್ಷನ್ ಆಗಿದ್ದರೆ, ಮೊದಲನೇ ದಿನ ₹2.85 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಒಟ್ಟು ₹4.15 ಕೋಟಿ ಕೇವಲ ಕರ್ನಾಟಕದಿಂದಲೇ ಬಂದಿದೆ ಎಂದು ಹೇಳಲಾಗಿದೆ.

ಕರ್ನಾಟಕದ ವಿತರಕರ ಲೆಕ್ಕಾಚಾರವೇನು?

ಬಾಕ್ಸಾಫೀಸ್‌ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ವರದಿಗೂ ಕರ್ನಾಟಕದ ವಿತರಕರ ವರದಿಗೂ ಸಾಕಷ್ಟು ವ್ಯತ್ಯಾಸವಿದೆ. ಕರ್ನಾಟಕದ ವಿತರಕರ ವಲಯದಲ್ಲಿ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ಮೊದಲ ದಿನ 1.60 ಕೋಟಿ ಕಲೆಕ್ಷನ್ ಆಗಿದೆ. ಅದೇ ನಿನ್ನೆ (ಜನವರಿ 12) ಕರ್ನಾಟಕದಲ್ಲಿ ಕೇವಲ ₹1.10 ಕೋಟಿ ಕಲೆಕ್ಷನ್ ಆಗಿದೆ ಎನ್ನುತ್ತಿವೆ. ಇಲ್ಲಿವರೆಗೂ ₹2.70 ಕೋಟಿ ಕರ್ನಾಟಕದಲ್ಲಾಗಿದೆ ಎನ್ನಲಾಗಿದೆ.

Chiranjeevi Nayanthara movie Mana Shankara Vara Prasad Garu Day 1 Karnataka Box Office Collection Report

2ನೇ ದಿನದ ಲೆಕ್ಕಾಚಾರವೇನು?

ಇನ್ನು ಕರ್ನಾಟಕದಲ್ಲಿ 2ನೇ ದಿನ ಕೊಂಚ ಮಟ್ಟಿಗೆ ಇಳಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಸಂಕ್ರಾಂತಿ ಹಬ್ಬದ ವೇಳೆ ಕಲೆಕ್ಷನ್ ಏರಿಕೆಯಾದರೂ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಕರ್ನಾಟಕದ ವಿತರಕರ ಪ್ರಕಾರ 2ನೇ ದಿನ ₹70 ರಿಂದ ₹80 ಲಕ್ಷ ಆಗಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ಇನ್ನು ಈ ವಾರ ಮುಗಿಯುವುದರೊಳಗೆ ₹15 ಕೋಟಿಗೂ ಅಧಿಕ ಕಲೆಕ್ಷನ್ ಆಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Chiranjeevi, Nayanthara movie Mana Shankara Vara Prasad Garu Day 1 Karnataka Box Office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X