MSVG Box Office Day 1: ಮೊದಲ ದಿನವೇ ಸೋಮವಾರದ ಪರೀಕ್ಷೆ ಎದುರಿಗೆ ಗೆದ್ದ ಚಿರಂಜೀವಿ, ನಯನತಾರಾ: ಗಳಿಸಿದ್ದೆಷ್ಟು?
ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಸಂಕ್ರಾಂತಿ ಸಮರಕ್ಕೆ ಇಳಿದಿದ್ದಾರೆ. ತೆಲುಗು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತೆ. ಈ ವೇಳೆ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತವೆ. ಪ್ರತಿ ವರ್ಷ ಸಂಕ್ರಾಂತಿಗೆ ತೆಲುಗು ಚಿತ್ರರಂಗದ ದಿಗ್ಗಜರು ಅಖಾಡಕ್ಕೆ ಇಳಿಯುತ್ತಾರೆ. ಈ ಬಾರಿ ಕೂಡ ಹಾಗೇ ಆಗಿದೆ. ಅದರಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಕೂಡ ಒಂದು.
ಚಿರಂಜೀವಿ, ನಯನತಾರಾ, ವೆಂಕಟೇಶ್ ಸೇರಿದಂತೆ ದಿಗ್ಗಜರೇ ಇರುವ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ಬಿಡುಗಡೆ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿತ್ತು. ಸಿನಿಮಾ ತುಣುಕುಗಳು ಪ್ರೇಕ್ಷಕರನ್ನು ಸೆಳೆದಿದ್ದವು. ಅದರಲ್ಲೂ ಚಿರಂಜೀವಿ ಲುಕ್ ಎಲ್ಲರ ಗಮನ ಸೆಳೆದಿತ್ತು. ಯಂಗ್ ಅಂಡ್ ಎನರ್ಜೆಟಿಕ್ ಆಗಿ ಲುಕ್ ಕೊಟ್ಟು ಗಮನ ಸೆಳೆದಿದ್ದಾರೆ.

'ಮನ ಶಂಕರ ವರಪ್ರಸಾದ ಗಾರು' ರೆಗ್ಯೂಲರ್ ಆಗಿ ಸಿನಿಮಾಗಳು ರಿಲೀಸ್ ಆಗುವಂತೆ ಶುಕ್ರವಾರದಂದು ರಿಲೀಸ್ ಆಗಿಲ್ಲ. ಸಂಕ್ರಾಂತಿ ಹಬ್ಬವನ್ನು ಗುರಿಯಾಗಿಸಿಕೊಂಡು ಸೋಮವಾರ ರಿಲೀಸ್ ಮಾಡಲಾಗಿತ್ತು. ಹಾಗೇ ಭಾನುವಾರ ಪ್ರೀಮಿಯರ್ ಇಡಲಾಗಿತ್ತು. ಹೀಗಾಗಿ ರಿಲೀಸ್ ಆದ ದಿನವೇ ಸೋಮವಾರ ಪರೀಕ್ಷೆಯನ್ನು ಎದುರಿಸಿದೆ. ಈ ಎರಡೂ ದಿನ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರೋದು ಚಿರು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಹಾಗಿದ್ದರೆ, ಮೊದಲ ದಿನದ ಕಲೆಕ್ಷನ್ ಎಷ್ಟು? ಹೇಗಿದೆ ರೆಸ್ಪಾನ್ಸ್? ತಿಳಿಯುವುದಕ್ಕೆ ಮುಂದೆ ಓದಿ.
ಮೊದಲ ದಿನದ ಕಲೆಕ್ಷನ್ ಎಷ್ಟು?
'ಮನ ಶಂಕರ ವರಪ್ರಸಾದ ಗಾರು' ತೆಲುಗು ಸಿನಿಮಾ ಉತ್ತಮ ಓಪನಿಂಗ್ ಪಡೆದುಕೊಳ್ಳುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿಲ್ಲ. ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶಿಸಿರುವ ಈ ಸಿನಿಮಾ ಮೊದಲ ದಿನ ಸೋಮವಾರವೇ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ಕಲೆಕ್ಷನ್ ವರದಿ ಮಾಡುವ ಸ್ಯಾಕ್ನಿಲ್ಕ್ ಪ್ರಕಾರ ಚಿರಂಜೀವಿ, ನಯನತಾರಾ, ವೆಂಕಟೇಶ್ ಸಿನಿಮಾ ಮೊದಲ ದಿನ ₹28.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಮೊದಲ ದಿನವೇ ಸೋಮವಾರದ ಪರೀಕ್ಷೆ
ಚಿರಂಜೀವಿ ಸಿನಿಮಾ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ (ಜನವರಿ 12) ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಮೊದಲ ದಿನವೇ ಸೋಮವಾರ ಆಗಿದ್ದರಿಂದ ಸಿನಿಮಾದ ಕಲೆಕ್ಷನ್ ಬಗ್ಗೆ ಕೊಂಚ ಮಟ್ಟಿಗೆ ಆತಂಕವಿತ್ತು. ಆದರೆ, ತೆಲುಗು ಮಂದಿ ಹಬ್ಬದ ಸಂಭ್ರಮದಲ್ಲಿರುವುದರಿಂದ ಸಿನಿಮಾ ಕಲೆಕ್ಷನ್ ಮೇಲೆ ಹೆಚ್ಚೇನೂ ಪರಿಣಾಮ ಬೀರಲಿಲ್ಲ. ಅದಲ್ಲದೇ ಭಾನುವಾರವೇ ಪೇಯ್ಡ್ ಪ್ರೀಮಿಯರ್ ಮಾಡಿದ್ದು, ಅದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೀಮಿಯರ್ ಹಾಗೂ ಮೊದಲ ದಿನದ ಕಲೆಕ್ಷನ್ ಇಲ್ಲಿದೆ.
ಪ್ರೀಮಿಯರ್ ₹8.60 ಕೋಟಿ (ಭಾರತ Net)
1ನೇ ದಿನ ₹28.50 ಕೋಟಿ (ಭಾರತ Net)
ಒಟ್ಟು ₹37.10 ಕೋಟಿ (ಭಾರತ Net)

ಎಲ್ಲೆಲ್ಲಿ ಹೇಗಿದೆ ಕಲೆಕ್ಷನ್?
'ಮನ ಶಂಕರ ವರಪ್ರಸಾದ ಗಾರು' ಭಾರತದ ಹಲವು ನಗರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಕರ್ನಾಟಕದಲ್ಲಿ 460 ಶೋಗಳನ್ನು ಪ್ರದರ್ಶನ ಮಾಡಲಾಗಿತ್ತು. ಇಲ್ಲಿ ಶೇ.40 ರಷ್ಟು ಆಕ್ಯೂಪೆನ್ಸಿ ಆಗಿತ್ತು. ಹೈದರಾಬಾದ್‌ನಲ್ಲಿ 926 ಶೋಗಳನ್ನು ಪ್ರದರ್ಶನ ಮಾಡಲಾಗಿದ್ದು, ಶೇ.70.50ರಷ್ಟು ಆಕ್ಯೂಪೆನ್ಸಿ ಇತ್ತು. ಗುಂಟೂರುನಲ್ಲಿ 114 ಶೋಗಳನ್ನು ಹಾಕಲಾಗಿತ್ತು. ಇಲ್ಲಿ ಶೇ.80.25 ರಷ್ಟು ಆಕ್ಯೂಪೆನ್ಸಿ ಇತ್ತು ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications