MSVG Box Office Day 2: ಸುಗ್ಗಿ ಕ್ರಾಂತಿಯಲ್ಲಿ ಚಿರಂಜೀವಿ ಮುಂದು; 2ನೇ ದಿನವೂ ಭರ್ಜರಿ ಕಲೆಕ್ಷನ್
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ಮನ ಶಂಕರ ವರಪ್ರಸಾದ ಗಾರು' ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬಕ್ಕಾಗಿಯೇ ಬಿಡುಗಡೆಯಾಗಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಇದರೊಂದಿಗೆ ರಿಲೀಸ್ ಆಗಿದ್ದ ಪ್ರಭಾಸ್ ಸಿನಿಮಾ 'ರಾಜಾ ಸಾಬ್' ಬಾಕ್ಸಾಫೀಸ್‌ನಲ್ಲಿ ನೆಲಕ್ಕಚ್ಚಿದ್ದು, ಪ್ಲಸ್ ಪಾಯಿಂಟ್ ಆಗಿದೆ.
ಚಿರಂಜೀವಿ, ನಯನತಾರಾ ಹಾಗೂ ಅತಿಥಿ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್ ನಟಿಸಿರುವ ಈ ಸಿನಿಮಾ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ತೆಲುಗು ಮಂದಿ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಸಂಬಂಧ ಎರಡೇ ದಿನಕ್ಕೆ ಚಿತ್ರತಂಡ ಸಕ್ಸಸ್ ಮೀಟ್ ಕೂಡ ಮಾಡಿದೆ.

ಮೆಗಾಸ್ಟಾರ್ ಚಿರಂಜೀವಿ ಇಂತಹದ್ದೊಂದು ಬಿಗ್ ಸಕ್ಸಸ್ ಬೇಕಿತ್ತು. ಈ ಹಿಂದೆ ಬಂದ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿರಲಿಲ್ಲ. 'ಮನ ಶಂಕರ ವರಪ್ರಸಾದ ಗಾರು' ಮೆಗಾಸ್ಟಾರ್ ಆ ಅಭಿಮಾನಿಗಳ ಆತಂಕವನ್ನು ದೂರ ಮಾಡಿದೆ. ಹಾಗಿದ್ದರೆ, 2ನೇ ದಿನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ವಿಶ್ವದಾದ್ಯಂತ ಕಲೆಕ್ಷನ್ ಎಷ್ಟಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
2ನೇ ದಿನದ ಕಲೆಕ್ಷನ್ ಎಷ್ಟು?
ಮೆಗಾಸ್ಟಾರ್ ಚಿರಂಜೀವಿ 'ಮನ ಶಂಕರ ವರಪ್ರಸಾದ ಗಾರು' ಆಂಧ್ರ ಹಾಗೂ ತೆಲಂಗಾಣದಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲೂ 2ನೇ ದಿನದ ಕಲೆಕ್ಷನ್ ಜೋರಾಗಿದೆ. ಬಾಕ್ಸಾಫೀಸ್ ಅಂಕಿ ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ವರದಿ ಪ್ರಕಾರ ಚಿರಂಜೀವಿ ಸಿನಿಮಾ ಭಾರತದಲ್ಲಿ ಸುಮಾರು ₹19.50 ಕೋಟಿ (Net) ಕಲೆಕ್ಷನ್ ಮಾಡಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಭಾರತದ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಕಲೆಕ್ಷನ್ ಮಾಡಿದೆ.
ವಿಶ್ವದಾದ್ಯಂತ ₹100 ಕೋಟಿ ಕಲೆಕ್ಷನ್
'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ, ಭಾರತದ ಬಾಕ್ಸಾಫೀಸ್‌ನಲ್ಲಿ ಪೇಯ್ಡ್ ಪ್ರೀಮಿಯರ್ ಸೇರಿ 2 ದಿನಗಳ ಕಲೆಕ್ಷನ್ ₹61.10 ಕೋಟಿ (Net) ಆಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ₹100 ಕೋಟಿ ಭಾರತದಲ್ಲಿಯೇ ದಾಟಲಿದೆ. ಹಾಗೇ ವಿದೇಶದಲ್ಲಿಯೂ ಭರ್ಜರಿ ಗಳಿಕೆ ಕಾಣುತ್ತಿದೆ. ಟ್ರ್ಯಾಕ್ ಟಾಲಿವುಡ್ ಪ್ರಕಾರ ಈ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ₹75 ಕೋಟಿ ಗಳಿಸಿದ್ದು, 2 ದಿನಕ್ಕೆ ₹100 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ.

ಕರ್ನಾಟಕದ ಬಾಕ್ಸಾಫೀಸ್ ಕಲೆಕ್ಷನ್
ಆಂಧ್ರ-ತೆಲಂಗಾಣ ಬಿಟ್ಟರೆ, ಕರ್ನಾಟಕದಲ್ಲಿ ಹೆಚ್ಚು ಕಲೆಕ್ಷನ್ ಆಗಿದೆ. ಕರ್ನಾಟಕದ ವಿತರಕರ ವಲಯದ ಪ್ರಕಾರ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ 2ನೇ ದಿನ ಸುಮಾರು ₹75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇನ್ನು ಎರಡು ದಿನಗಳಲ್ಲಿ ಈ ಸಿನಿಮಾ ಹೆಚ್ಚು ಕಡಿಮೆ ₹2 ರಿಂದ ₹2.50 ಕೋಟಿ ನೆಟ್ ಕಲೆಕ್ಷನ್ ಆಗಿರಬಹುದೆಂದು ಹೇಳಲಾಗುತ್ತಿದೆ. ಆದರೆ, ಸ್ಯಾಕ್ನಿಲ್ಕ್ ವರದಿಯಲ್ಲಿ ಅಂಕಿ-ಅಂಶಗಳು ಬೇರೆನೇ ಇವೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











