MSVG Box Office Day 3:ಕರ್ನಾಟಕದಲ್ಲೂ ಅಬ್ಬರಿಸಿದ ವರಪ್ರಸಾದು-ವೆಂಕಿ ಗೌಡ;3ನೇ ದಿನದ ಕಲೆಕ್ಷನ್ ಎಷ್ಟು?
ಮೆಗಾಸ್ಟಾರ್ ಚಿರಂಜೀವಿ ಗ್ರ್ಯಾಂಡ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದಲ್ಲಿ ಚಿರಂಜೀವಿ ನಟಿಸಿದ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಚಿರಂಜೀವಿ ಯಂಗ್ ಅಂಡ್ ಎನರ್ಜೆಟಿಕ್ ಲುಕ್‌ಗೆ ಪ್ರೇಕ್ಷಕರು, ಅವರ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಜೋರಾಗಿ ಸದ್ದು ಮಾಡುತ್ತಿದೆ.
ಚಿರಂಜೀವಿ, ನಯನತಾರಾ, ವೆಂಕಟೇಶ್ ಮೂವರೂ 'ಮನ ಶಂಕರ ವರಪ್ರಸಾದ ಗಾರು' ಸಿನಿಮಾ ಹೈಲೈಟ್. ಪೇಯ್ಡ್ ಪ್ರೀಮಿಯರ್‌ನಿಂದ ಹಿಡಿದು ಮೊದಲ ಮೂರು ದಿನಗಳ ಕಲೆಕ್ಷನ್ ಗಳಿಕೆ ಕಾಣುತ್ತಿದೆ ಎನ್ನಲಾಗಿದೆ. ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

'ಮನ ಶಂಕರ ವರಪ್ರಸಾದ ಗಾರು' 3ನೇ ದಿನ ಎಲ್ಲಡೆ ಕಲೆಕ್ಷನ್ ಜೋರಾಗಿದೆ. ಮಧ್ಯಾಹ್ನದ ಶೋ 65.37%, ಸಂಜೆ ಶೋ 71.05%, ರಾತ್ರಿ 70.37% ರಷ್ಟು ಥಿಯೇಟರ್‌ಗಳು ಆಕ್ಯೂಪೆನ್ಸಿ ಆಗಿದ್ದವು. ಹೀಗಾಗಿ 3ನೇ ದಿನವೂ ಸಿನಿಮಾ ಕಲೆಕ್ಷನ್ ಜೋರಾಗಿದೆ. 3ನೇ ದಿನ 'ಮನ ಶಂಕರ ವರಪ್ರಸಾದ ಗಾರು' ಕಲೆಕ್ಷನ್ ಎಷ್ಟು? ಕರ್ನಾಟಕದಲ್ಲಿ ಆದ ಗಳಿಕೆ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
3ನೇ ದಿನದ ಕಲೆಕ್ಷನ್ ಎಷ್ಟು?
ಚಿರಂಜೀವಿ, ನಯನತಾರಾ, ವೆಂಕಟೇಶ್ ಮೂವರ ಸಮಾಗಮ 'ಮನ ಶಂಕರ ವರಪ್ರಸಾದ ಗಾರು' ಗೆಲುವಿಗೆ ಕಿಕ್ ಕೊಟ್ಟಿದೆ. ಅದರಲ್ಲೂ ಸಕ್ಸಸ್‌ಫುಲ್ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನ ಸಿನಿಮಾದ ಗೆಲುವಿಗೆ ಕಾರಣ. ಇನ್ನು ಮೊದಲೆರಡು ದಿನ ಉತ್ತಮ ಗಳಿಕೆ ಕಂಡಿದ್ದ ಈ ಸಿನಿಮಾ 3ನೇ ದಿನ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಕೊಡುವ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಸಿನಿಮಾ ₹19.25 ಕೋಟಿ ಗಳಿಸಿದೆ.
ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
'ಮನ ಶಂಕರ ವರಪ್ರಸಾದ ಗಾರು' ಕರ್ನಾಟಕದಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿದೆ. ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರುವ ಅಂಶಗಳ ಪ್ರಕಾರ ಬೆಂಗಳೂರಿಲ್ಲಿ ಅತೀ ಕಲೆಕ್ಷನ್ ಆಗಿದೆ. ಕಳೆದ ಮೂರು ದಿನಗಳಿಂದ ಹೆಚ್ಚು ಕಡಿಮೆ ₹4 ರಿಂದ ₹4.5 ಕೋಟಿವರೆಗೂ ಕಲೆಕ್ಷನ್ ಆಗಿದೆಯಂದು ಹೇಳಲಾಗುತ್ತಿದೆ. ಅದರಲ್ಲೂ 3ನೇ ದಿನ ₹70-80 ಲಕ್ಷ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇನ್ನು ಇಂದು (ಜನವರಿ 15) ₹1.50 ಕೋಟಿ ದಾಟಬಹುದೆಂದು ಅಂದಾಜಿಸಲಾಗಿದೆ.
'ಮನ ಶಂಕರ ವರಪ್ರಸಾದ ಗಾರು' ಕರ್ನಾಟಕ ಕಲೆಕ್ಷನ್
ಪೇಯ್ಡ್ ಪ್ರೀಮಿಯರ್ ₹1.60 ಕೋಟಿ
1ನೇ ದಿನ ₹1.10 ಕೋಟಿ
2ನೇ ದಿನ ₹70 ಲಕ್ಷ
3ನೇ ದಿನ ₹80 ಲಕ್ಷ
ಒಟ್ಟು ₹4.20 ಕೋಟಿ

ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?
ಚಿರಂಜೀವಿ ಸಿನಿಮಾ ನಾಲ್ಕನೇ ದಿನ ಬುಕ್ ಮೈ ಶೋನಿಂದ 1.5 ಮಿಲಿಯನ್‌ನಷ್ಟು ಟಿಕೆಟ್‌ಗಳನ್ನು ಸೇಲ್ ಮಾಡಿದೆ. ಹೀಗಾಗಿ ಈ ಬಾರಿ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ವಿಶ್ವದಾದ್ಯಂತವೂ ಈ ಸಿನಿಮಾದ ಕಲೆಕ್ಷನ್ ಜೋರಾಗಿದೆ. ಕೇವಲ ಮೂರು ದಿನಗಳಲ್ಲಿ ಸಿನಿಮಾ ಕಲೆಕ್ಷನ್ ₹100 ಕೋಟಿ ದಾಟಿ ಮುನ್ನುತ್ತಿದೆ. ಇನ್ನು ಭಾರತದಲ್ಲಿ ಪೇಯ್ಡ್ ಪ್ರೀಮಿಯರ್‌ನಿಂದ ₹9.35 ಕೋಟಿ, 1ನೇ ದಿನ ₹32.25 ಕೋಟಿ, 2ನೇ ದಿನ ₹18.75 ಕೋಟಿ, 3ನೇ ದಿನ ₹19.25 ಕೋಟಿ ಕಲೆಕ್ಷನ್ ಆಗಿದ್ದು, ಭಾರತದಲ್ಲಿ ಮೂರು ದಿನಗಳ ಕಲೆಕ್ಷನ್ ₹79.60 ಕೋಟಿ (Net) ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











