The Kerala Story 2:'ದಿ ಕೇರಳ ಸ್ಟೋರಿ 2'ಗೆ 4ನೇ ದಿನದ ರೆಸ್ಪಾನ್ಸ್ ಹೇಗಿದೆ? ವಿವಾದ ಉಳಿಸಿತೇ ಸಿನಿಮಾ?
ಕಳೆದ ವಾರ ರಿಲೀಸ್ ಆದ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ದಿ ಕೇರಳ ಸ್ಟೋರಿ 2' ಕೂಡ ಒಂದು. ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಸಿಲುಕಿದ್ದ ಸಿನಿಮಾ ಕೋರ್ಟ್ ಮೆಟ್ಟಿಲೇರಿತ್ತು. ಕೇರಳದ ಕೋರ್ಟ್ ಮೊದಲು ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿದಿತ್ತು. ಹೀಗಾಗಿ ಅಂದುಕೊಂಡಿದ್ದ ದಿನ ಸಿನಿಮಾ ರಿಲೀಸ್ ಆಗಿರಲಿಲ್ಲ. ಆ ಬಳಿಕ ಕೇರಳ ಹೈಕೋರ್ಟ್ ಬಿಡುಗಡೆಗೆ ಅನುಮತಿ ನೀಡಿತ್ತು.
ಹೀಗಾಗಿ 'ದಿ ಕೇರಳ ಸ್ಟೋರಿ 2' ಮೊದಲ ದಿನದ ಗಳಿಕೆಯನ್ನು ಕಳೆದುಕೊಂಡಿದೆ. ಆದರೂ ಇಲ್ಲಿವರೆಗೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಯಾವುದೇ ಸ್ಟಾರ್‌ಕಾಸ್ಟ್ ಇಲ್ಲದೆ ನಿರ್ಮಾಣ ಆಗಿರುವ ಈ ಸಿನಿಮಾ ವೀಕೆಂಡ್ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ, ಸೋಮವಾರದ ಪರೀಕ್ಷೆಯಲ್ಲಿ ಈ ಸಿನಿಮಾ ಹಿಂದೆ ಬಿದ್ದಿದೆ.

ವಿವಾದಗಳ ಹೊರತಾಗಿಯೂ 'ದಿ ಕೇರಳ ಸ್ಟೋರಿ 2' ಸೋಮವಾರದಿಂದ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ. ಮೊದಲ ಮೂರು ದಿನ ಉತ್ತಮ ಗಳಿಕೆ ಕಂಡಿದ್ದು ಬಿಟ್ಟರೆ, 4ನೇ ದಿನದಿಂದ ಡ್ರಾಪ್ ಆಗಿದೆ. ಹಾಗಿದ್ದರೆ, ಬಿಡುಗಡೆಗೂ ಮುನ್ನ ಸದ್ದು ಮಾಡಿದ್ದ ಈ ಸಿನಿಮಾ ಸೋಮವಾರ ಗಳಿಸಿದ್ದು ಎಷ್ಟು? ಸೋಮವಾರ ಡ್ರಾಪ್ ಆಗಿದ್ದು ಏಕೆ? ತಿಳಿಯುವುದಕ್ಕೆ ಮುಂದೆ ಓದಿ.
'ದಿ ಕೇರಳ ಸ್ಟೋರಿ 2' 4ನೇ ದಿನ ಗಳಿಸಿದ್ದೆಷ್ಟು?
ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ 2' ರಿಲೀಸ್ ಆಗಿ 5ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಮೂರು ದಿನಗಳು ಗಳಿಕೆ ಸ್ಡಡಿಯಾಗಿದ್ದರೆ, 4ನೇ ದಿನದ ಕಲೆಕ್ಷನ್‌ನಲ್ಲಿ ಅರ್ಧಕ್ಕೆ ಅರ್ಧ ಕಡಿಮೆಯಾಗಿದೆ. ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅಂಕಿ-ಅಂಶಗಳನ್ನು ಕೊಡುವ ಸ್ಯಾಕ್ನಿಲ್ಕ್ ಪ್ರಕಾರ, 4ನೇ ದಿನ 2.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.
4 ದಿನಗಳ ಕಲೆಕ್ಷನ್ ಎಷ್ಟು?
'ದಿ ಕೇರಳ ಸ್ಟೋರಿ 2' ಮೊದಲ ದಿನ ಕೆಲವೇ ಶೋಗಳು ಸಿಕ್ಕಿತ್ತು. ಹೀಗಾಗಿ ಈ ಸಿನಿಮಾ ಗಳಿಸಿದ್ದು ಕೇವಲ 75 ಲಕ್ಷ ರೂಪಾಯಿ. ಆದರೆ 2ನೇ ದಿನ ಹಾಗೂ 3ನೇ ದಿನ ಈ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ ಆಯ್ತು. ಇನ್ನು 4ನೇ ದಿನ ಕಲೆಕ್ಷನ್‌ನಲ್ಲಿ ಇಳಿಕೆಯಾಗಿದೆ. ಈ ನಾಲ್ಕು ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ ₹75 ಲಕ್ಷ
2ನೇ ದಿನ ₹4.65 ಕೋಟಿ
3ನೇ ದಿನ ₹4.75 ಕೋಟಿ
4ನೇ ದಿನ ₹2.65 ಕೋಟಿ
ಒಟ್ಟು ₹12.80 ಕೋಟಿ

ಸೋಮವಾರ ಡ್ರಾಪ್‌ಗೆ ಕಾರಣವೇನು?
'ದಿ ಕೇರಳ ಸ್ಟೋರಿ' ಬಜ್ ಕ್ರಿಯೇಟ್ ಮಾಡಿದಂತೆ ಈ 'ದಿ ಕೇರಳ ಸ್ಟೋರಿ 2' ಕ್ರಿಯೇಟ್ ಮಾಡುವಲ್ಲಿ ಹಿಂದೆ ಬಿದ್ದಿದೆ. ಇದಕ್ಕೆ ಕಾರಣ ಅಂದುಕೊಂಡ ದಿನ ಬಿಡುಗಡೆಯಾಗದೇ ಇರೋದು. ಬಿಡುಗಡೆಗೂ ಮುನ್ನವೇ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಬಂದಿದ್ದು ಕಾರಣವಾಗಿದೆ. ಇನ್ನು ಇಂದಿನಿಂದ ಈ ಸಿನಿಮಾದ 2ನೇ ವೀಕೆಂಡ್‌ವರೆಗೂ ಯಾವ ಮಟ್ಟಿಗೆ ಕಲೆಕ್ಷನ್ ಮಾಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











