The Kerala Story 2 Box Office Day 5: ವಿವಾದಾತ್ಮಕ ಸಿನಿಮಾ 'ದಿ ಕೇರಳ ಫೈಲ್ಸ್ 2' ಗಳಿಕೆಯಲ್ಲಿ ದಿಢೀರ್ ಏರಿಕೆ?
ಕಳೆದ ವಾರ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ 2' ರಿಲೀಸ್ ಆಗಿತ್ತು. ರಿಲೀಸ್ ಮುನ್ನ ಸಿನಿಮಾ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಈ ಸಿನಿಮಾ ಟೀಸರ್‌ಗೆ ಕೇರಳದ ಕೆಲ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕೇರಳ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂಬ ಅರ್ಥದಲ್ಲಿ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಸಿನಿಮಾ ರಿಲೀಸ್‌ಗೆ ತಡೆಯೊಡ್ಡಬೇಕು ಎಂದು ಕೇರಳ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.
ಸಿನಿಮಾ ಬಿಡುಗಡೆ ತಡೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆದ ಬಳಿಕ 'ದಿ ಕೇರಳ ಸ್ಟೋರಿ 2' ರಿಲೀಸ್‌ಗೆ ಹಿನ್ನಡೆಯಾಗಿತ್ತು. ಬಳಿಕ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಸಿನಿಮಾ ರಿಲೀಸ್ ತಡೆಯನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ಹೈಕೋರ್ಟ್‌ನಲ್ಲಿ ಸಿನಿಮಾ ರಿಲೀಸ್ ಇದ್ದ ತಡೆಯನ್ನು ರದ್ದು ಮಾಡಲಾಗಿತ್ತು. ಆದರೂ ಸಿನಿಮಾ ರಿಲೀಸ್ ಆಗಬೇಕಿದ್ದ ಸಮಯಕ್ಕೆ ಆಗಲಿಲ್ಲ.

ಈ ವಿವಾದದಿಂದ 'ದಿ ಕೇರಳ ಸ್ಟೋರಿ 2' ಸಿನಿಮಾಗೆ ಪರೋಕ್ಷವಾಗಿ ಪ್ರಚಾರ ಸಿಕ್ಕಿತ್ತು. ಬಿಡುಗಡೆಗೂ ಮುನ್ನ ರಿಲೀಸ್ ಆಗಿದ್ದ ಟೀಸರ್, ಟ್ರೈಲರ್ ಕೂಡ ಆ ಮಟ್ಟಿಗೆ ಸದ್ದು ಮಾಡಿರಲಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ 2 ಹಾಗೂ 3ನೇ ದಿನ ಸದ್ದು ಮಾಡಿದ್ದು ಬಿಟ್ಟರೆ, 4ನೇ ದಿನ ಅಂದರೆ, ಸೋಮವಾರದ ಪರೀಕ್ಷೆಯಲ್ಲಿ ದೊಡ್ಡ ಮಟ್ಟಕ್ಕೆ ಡ್ರಾಪ್ ಕಂಡಿತ್ತು. ಆದರೆ, ಅಚ್ಚರಿ ಎಂಬಂತೆ ನಿನ್ನೆ (ಮಾರ್ಚ್ 4) ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದೆ. ಹಾಗಿದ್ದರೆ, 5ನೇ ದಿನ ಸಿನಿಮಾದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
5ನೇ ದಿನ 'ದಿ ಕೇರಳ ಸ್ಟೋರಿ 2 ಗಳಿಸಿದ್ದೆಷ್ಟು?
'ದಿ ಕೇರಳ ಸ್ಟೋರಿ 2' ವಿವಾದಗಳ ಹೊರತಾಗಿಯೂ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡುವಲ್ಲಿ ಹಿಂದೆ ಬಿದ್ದಿದೆ. ನಾಲ್ಕು ದಿನ ಅಂದರೆ, ಸೋಮವಾರದ ಪರೀಕ್ಷೆಯಲ್ಲಿ ಡ್ರಾಪ್ ಕಂಡಿತ್ತು. ಆದರೆ, 5ನೇ ದಿನ ಸಿನಿಮಾದ ಕಲೆಕ್ಷನ್‌ನಲ್ಲಿ ದಿಢೀರನೇ ಏರಿಕೆ ಕಂಡಿದೆ. ಸಿನಿಮಾ ಟ್ರೇಡ್ ವರದಿಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ 5ನೇ ದಿನ ಈ ಸಿನಿಮಾ ಗಳಿಸಿದ್ದು, ಬರೋಬ್ಬರಿ 4 ಕೋಟಿ ರೂಪಾಯಿ. ಹೆಚ್ಚು ಕಡಿಮೆ ಶೇ. 40ರಷ್ಟು ಏರಿಕೆಯಾಗಿದೆ.
5 ದಿನಗಳ ಒಟ್ಟು ಕಲೆಕ್ಷನ್
'ದಿ ಕೇರಳ ಸ್ಟೋರಿ 2' ಬಾಕ್ಸಾಫೀಸ್‌ನಲ್ಲಿ ನಿನ್ನೆ (ಮಾರ್ಚ್ 3) ಕಲೆಕ್ಷನ್ ಏರಿಕೆಯಾಗಿದೆ. ಆದರೆ, ಸೋಮವಾರ ಕಲೆಕ್ಷನ್‌ನಲ್ಲಿ ಸಿಕ್ಕಾಪಟ್ಟೆ ಡ್ರಾಪ್ ಕಂಡಿತ್ತು. ವಿವಾದಿಂದ ಸಾಕಷ್ಟು ಸದ್ದು ಮಾಡಿದ್ದರೂ, ಪ್ರತಿಕ್ರಿಯೆ ನಿರೀಕ್ಷೆ ಮಾಡಿದಷ್ಟು ದೊಡ್ಡ ಮಟ್ಟದಲ್ಲಿ ಇರಲಿಲ್ಲ. ಆದರೆ, 5ನೇ ದಿನದ ಕಲೆಕ್ಷನ್ ಸಿನಿಮಾ ತಂಡಕ್ಕೆ ಹೊಸ ಹುರುಷು ಬಂದಿರೋದಂತೂ ನಿಜ. ಹಾಗಿದ್ದರೆ, ಮೊದಲ 5 ದಿನಗಳ ಕಲೆಕ್ಷನ್ ಹೀಗಿದೆ.
1ನೇ ದಿನ ₹75 ಲಕ್ಷ
2ನೇ ದಿನ ₹4.65 ಕೋಟಿ
3ನೇ ದಿನ ₹4.75 ಕೋಟಿ
4ನೇ ದಿನ ₹2.65 ಕೋಟಿ
5ನೇ ದಿನ ₹4 ಕೋಟಿ
ಒಟ್ಟು ₹16.65 ಕೋಟಿ (Net)

ಹೋಳಿ ಹಬ್ಬದ ಎಫೆಕ್ಟ್
ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ 2' ಕಲೆಕ್ಷನ್ 5ನೇ ದಿನ ಏರಿಕೆಯಾಗಿದ್ದಕ್ಕೆ ಕಾರಣ ಒಂದೇ ಹೋಳಿ ಹಬ್ಬ. ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತೆ. ಈ ಹಬ್ಬಕ್ಕೆ ಉತ್ತರ ಭಾರತದ ರಜೆ ಇರುತ್ತೆ. ಹಾಗಾಗಿ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾರೆ. ಒಂದು ವೇಳೆ 6ನೇ ದಿನವೂ ಇದೇ ಕಲೆಕ್ಷನ್ ಮುಂದುವರೆದರೆ, 20 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











