Coolie Box Office Day 10:10ನೇ ದಿನ ಬಾಕ್ಸಾಫೀಸ್‌ನಲ್ಲಿ ಜಿಗಿದ 'ಕೂಲಿ'; ವೀಕೆಂಡ್‌ನಲ್ಲಿ ರಜನಿಯದ್ದೇ ದರ್ಬಾರ್!
ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಕಳೆದ ಕೆಲವು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಹಿನ್ನೆಡೆ ಅನುಭವಿಸಿತ್ತು. ವೀಕ್ ಡೇಸ್‌ನಲ್ಲಿ ದೊಡ್ಡ ಡ್ರಾಪ್ ಕಂಡಿತ್ತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಯೇ ಇದಕ್ಕೆ ಕಾರಣವೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮೊದಲ ನಾಲ್ಕು ದಿನ ಬಿಟ್ಟರೆ, 'ಕೂಲಿ' ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿರಲಿಲ್ಲ. ಇಲ್ಲಿಗೆ ರಜನಿ ಸಿನಿಮಾ ಕಥೆ ಮುಗೀತು ಅಂದುಕೊಂಡವರಿಗೆ 10ನೇ ದಿನ ದೊಡ್ಡ ಮಟ್ಟಕ್ಕೆ ಚೇತರಿಕೆ ಕಂಡಿದೆ.
ರಜನಿ ಸಿನಿಮಾದಲ್ಲಿ ಸ್ಟಾರ್‌ಗಳ ಮಹಾ ಸಂಗಮವೇ ಆಗಿತ್ತು. ನಾಗಾರ್ಜುನಾ, ಆಮಿರ್ ಖಾನ್, ಉಪೇಂದ್ರದಂತಹ ನಟರು ಸೂಪರ್‌ಸ್ಟಾರ್‌ಗೆ ಸಾಥ್ ಕೊಟ್ಟಿದ್ದರು. ಹಾಗೇ ಸೌಬಿನ್ ಶಾಹೀರ್, ಶ್ರುತಿ ಹಾಸನ್, ರಚಿತಾ ರಾಮ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಿದ್ದರೂ ವೀಕ್ ಡೇಸ್‌ನಲ್ಲಿ 'ಕೂಲಿ' ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ವಿಫಲವಾಗಿದೆ.

ಲೋಕೇಶ್ ಕನಕರಾಜ್ ತೆರೆಮೇಲೆ ಜಾದು ಮಾಡುವುದರಲ್ಲಿ ಸೋತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಈ ಕಾಂಬಿನೇಷನ್ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಬಹುದೆಂಬ ನಿರೀಕ್ಷೆಯಿತ್ತು. ತಮಿಳು ಚಿತ್ರರಂಗ ₹1000 ಕೋಟಿ ಕ್ಲಬ್ ಸೇರುವ ಮೊದಲ ಸಿನಿಮಾ ಆಗಬಹುದೆಂದು ಗೆಸ್ ಮಾಡಿತ್ತು. ಆದರೆ, ಅದು ಸಾಧ್ಯವಾಗದೇ ಹೋದರೂ, ನಿನ್ನೆ (ಆಗಸ್ಟ್ 23) ಅಂದರೆ ಶನಿವಾರ, 10ನೇ ದಿನ ದಿಢೀರನೇ ಬಾಕ್ಸಾಫೀಸ್‌ನಲ್ಲಿ ಜಿಗಿದಿದೆ.
10ನೇ ದಿನ ಬಾಕ್ಸಾಫೀಸ್‌ನಲ್ಲಿ ಜಿಗಿದ 'ಕೂಲಿ'
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 2ನೇ ವೀಕೆಂಡ್‌ನಲ್ಲಿ ಏಕಾಏಕಿ ಜಿಗಿತ ಕಂಡಿದೆ. ವೀಕೆಂಡ್‌ನಲ್ಲಿ ಏರಿಕೆಯಾಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸಿಂಗಲ್ ಡಿಜಿಟಲ್‌ನಲ್ಲಿದ್ದ ಕಲೆಕ್ಷನ್ ಮತ್ತೆ ಡಬಲ್ ಡಿಜಿಟ್‌ಗೆ ಏರಿಕೆಯಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಕೂಲಿ' ಸಿನಿಮಾ 10ನೇ ದಿನ ಬರೋಬ್ಬರಿ ₹10 ಕೋಟಿ ಕಲೆಕ್ಷನ್ ಮಾಡಿದೆ. ಕಳೆದ 5 ದಿನಗಳಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಿನವಾಗಿದೆ. ಇನ್ನು 11ನೇ ದಿನ ಅಂದರೆ, ಭಾನುವಾರ ಕೂಡ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆಯಾಗುತ್ತೆಂದು ನಿರೀಕ್ಷೆ ಮಾಡಲಾಗಿದೆ.
10 ದಿನಗಳಲ್ಲಿ ಭಾರತದ ಕಲೆಕ್ಷನ್ ಎಷ್ಟು?
'ಕೂಲಿ' ಎರಡು ಕಾರಣಕ್ಕೆ ಭಾರಿ ನಿರೀಕ್ಷೆಯನ್ನು ಹುಟ್ಟಾಕಿತ್ತು. ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಒಂದಾದರೆ, ಇನ್ನೊಂದು ರಜನಿ ಜೊತೆ ನಟಿಸಿರುವ ನಾಗಾರ್ಜುನ, ಉಪೇಂದ್ರ ಹಾಗೂ ಆಮಿರ್ ಖಾನ್. ಈ ಎಲ್ಲಾ ತಾರೆಯರನ್ನು ಒಟ್ಟಿಗೆ ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದರು. ಬಿಡುಗಡೆಗೂ ಮುನ್ನ ಇದ್ದ ಕ್ರೇಜ್ ನೋಡಿದರೆ, ಸಿನಿಮಾ ₹1000 ಕೋಟಿ ಕ್ಲಬ್ ಸೇರೋದು ಗ್ಯಾರಂಟಿ ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಅದು ಅಸಾಧ್ಯವೇನಿದರೂ, 10ನೇ ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದ್ದು ಹೊಸ ಭರವಸೆಯನ್ನಂತೂ ಮೂಡಿಸಿದೆ.
10 ದಿನಗಳ ಕೂಲಿ ಕಲೆಕ್ಷನ್ (ಭಾರತ)
ಮೊದಲ ದಿನ ₹65 ಕೋಟಿ
2ನೇ ದಿನ ₹54.75 ಕೋಟಿ
3ನೇ ದಿನ ₹39.5 ಕೋಟಿ
4ನೇ ದಿನ ₹35.25 ಕೋಟಿ
5ನೇ ದಿನ ₹12 ಕೋಟಿ
6ನೇ ದಿನ ₹9.50 ಕೋಟಿ
7ನೇ ದಿನ ₹7.50 ಕೋಟಿ
8ನೇ ದಿನ ₹6.15 ಕೋಟಿ
9ನೇ ದಿನ ₹5.85 ಕೋಟಿ
10ನೇ ದಿನ ₹10.00 ಕೋಟಿ
ಒಟ್ಟು ₹245.50 ಕೋಟಿ (Net)

ವಿಶ್ವದಾದ್ಯಂತ 'ಕೂಲಿ' ಕಲೆಕ್ಷನ್
ರಜನಿಕಾಂತ್ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡುತ್ತವೆ. ಅದರಲ್ಲೂ ಅಮೆರಿಕ, ಮಲೇಷ್ಯಾ, ಜಪಾನ್‌ನಂತಹ ದೇಶಗಳಿಂದ ಒಳ್ಳೆಯ ಕಲೆಕ್ಷನ್ ಆಗುತ್ತೆ. 'ಕೂಲಿ' ಸಿನಿಮಾದ ಕ್ರೇಜ್ ಈ ದೇಶಗಳಲ್ಲೂ ಇತ್ತು. ಹೀಗಾಗಿ ವಿಶ್ವದಾದ್ಯಂತ ಈ ಸಿನಿಮಾ ₹450 ಕೋಟಿಯ ಗಡಿಯನ್ನು ದಾಟಿದೆ. ಹಾಗಿದ್ದರೆ, ವಿಶ್ವದಾದ್ಯಂತ 'ಕೂಲಿ' ಸಿನಿಮಾದ ಕಲೆಕ್ಷನ್ ಹೇಗಿದೆ? ಇಲ್ಲಿದೆ ಒಂದು ರಿಪೋರ್ಟ್
ತಮಿಳು - ₹160 ಕೋಟಿ
ತೆಲುಗು - ₹54 ಕೋಟಿ
ಹಿಂದಿ - ₹29 ಕೋಟಿ
ಕನ್ನಡ - ₹2.50 ಕೋಟಿ
ಒಟ್ಟು - ₹245.50 ಕೋಟಿ (ಭಾರತ Net)
ವಿದೇಶದಲ್ಲಾದ ಕಲೆಕ್ಷನ್ - ₹168.50 ಕೋಟಿ (Gross)
ಭಾರತದಲ್ಲಾದ ಕಲೆಕ್ಷನ್ - ₹292.89 ಕೋಟಿ (Gross)
ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ - ₹461.39 ಕೋಟಿ (Gross)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











